ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾ ಒಟಿಟಿಗೆ ಬರಲು ಸಿದ್ಧ :-
ಹನುಮಾನ್ ಸಿನಿಮಾದಲ್ಲಿ ಪ್ರಶಾಂತ್ ವರ್ಮಾ ಮತ್ತು ತೇಜ್ ಸಜ್ಜಾ ಕಾಂಬಿನೇಷನ್‌ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರೇಕ್ಷಕರ ಮುಂದೆ ಬಂದಿದ್ದ ಹನುಮಾನ್ ಸಿನಿಮಾ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಹನುಮಾನ್ ಸಿನಿಮಾ ಜೊತೆ ಜೊತೆಗೆ ಮಹೇಶ್ ಬಾಬು ರವರ ಗುಂಟೂರು ಕಾರಂ ಸಿನಿಮಾ ಬಿಡುಗಡೆಯಾಗಿದ್ದರೂ, ಯಾವುದಕ್ಕೂ ಕುಗ್ಗದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ನಿರಿಕ್ಷೆಗೂ ಮೀರಿದ ರೆಸ್ಪಾನ್ಸ್ ಜನರಿಂದ ಸಿಕ್ಕಿದ್ದು ಕೇವಲ 40 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಿದ್ದ ಈ ಸಿನಿಮಾ ಬರೋಬ್ಬರಿ 300 ಪಟ್ಟು ಗಳಿಕೆ ಕಂಡಿತ್ತು.
ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾಗಳ ಜೊತೆ ಜೊತೆಯಾಗಿ ಬಂದ ಸಿನಿಮಾಗಳು:-
ತೆಲುಗಿನ ಸಿನಿಮಾಗಳಷ್ಟೇ ಅಲ್ಲದೆ, ಬಾಲಿವುಡ್‌ನಲ್ಲಿ ಬಿಡುಗಡೆಯಾಗಿದ್ದ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆಯ ಫೈಟರ್ ಸಿನಿಮಾಕ್ಕೂ ಹನುಮಾನ್ ಟಕ್ಕರ್ ನೀಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಹನುಮಾನ್ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಬಹು ಬೆಂಬಲ ಸಿಕ್ಕಿತ್ತು. ಭಾರತದ ವಿವಿಧ ಭಾಷೆಗಳಾದ ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ ಸೇರಿ ಇಂಗ್ಲೀಷ್, ಸ್ಪ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲೂ ಸದ್ದು ಗದ್ದಲವೇ ಮಾಡಿತ್ತು.
ಇದನ್ನು ಓದಿ:-ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾದ ಬಗ್ಗೆ ಪ್ರೇಕ್ಷಕನ ಮಾತು:-
ಹನುಮಾನ್ ನಮ್ಮ ದೇವರು. ಇದೊಂದು ಫ್ಯಾಂಟಸಿ ಮೂವೀ. ಇದು ಹನುಮಾನ್ ಬಗೆಗಿನ ಸಿನಿಮಾ ಅಲ್ಲ. ಒಂದು ಹುಡುಗನಿಗೆ ಹನುಮನ ಪವರ್ ಬಂದಾಗ ಏನಾಗುತ್ತದೆ ಅನ್ನೋದು ಸಿನಿಮಾ. ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ ಎಂದು ಚಿತ್ರತಂಡ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹೇಳಿಕೊಂಡಿತ್ತು. ಚಿತ್ರಮಂದಿರದಕ್ಕೆ ಬಂದ ಬಳಿಕ ಅದು ನಿಜವಾಯ್ತು. ಹೀಗೆ ಚಿತ್ರಮಂದಿರದಲ್ಲಿ ಸದ್ದು ಮಾಡಿದ್ದ ಇದೇ ಹನುಮಾನ್ ಈಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ ಎಂದು ಚಿತ್ರತಂಡ ವಿವರಿಸಿದೆ.
ಯಾವ ಒಟಿಟಿಯಲ್ಲಿ ಹನುಮಾನ್ ಸಿನಿಮಾ? ಎಂದು ಪ್ರೇಕ್ಷಕರಿಗೆ ಉತ್ಸುಕತೆಯಂತೂ ಇದ್ದೆ ಇರುತ್ತದೆ ಆದ ಕಾರಣ ಕೆಳಗೆ ನೋಡಿ:-
ಎಲ್ಲ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಬಿಡುಗಡೆಯಾದ 3 ವಾರಗಳಿಗೆ ಒಟಿಟಿ ಅಂಗಳಕ್ಕೆ ಹನುಮಾನ್ ಸಿನಿಮಾ ಆಗಮಿಸಬೇಕಿತ್ತು. ಆದರೆ, ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕ ಹಿನ್ನೆಲೆಯಲ್ಲಿ ಒಟಿಟಿ ದಿನಾಂಕ ಮುಂದೂಡಲಾಗಿತ್ತು, ಚಿತ್ರಮಂದಿರದಲ್ಲಿಯೇ ಸಿನಿಮಾ ಮುಂದೂಡಿತು. ಇದೀಗ ಈ ಚಿತ್ರ ಒಟಿಟಿಗೆ ಆಗಮಿಸಲು ದಿನಾಂಕ ನಿಗದಿಯಾಗಿದೆ. ಮಾರ್ಚ್ 2ರಂದು ಜೀ 5 ನಲ್ಲಿ ಹನುಮಾನ್ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಮೂಲಕ ಸಿನಿಮಾ ಬಿಡುಗಡೆಯಾದ 55 ದಿನಕ್ಕೆ ಒಟಿಟಿಗೆ ಈ ಚಿತ್ರ ಆಗಮಿಸಿದಂತಾಗಲಿದೆ. ಇನ್ನು ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.