ಹಿರಿಯರಮೌನಕ್ಕೆ ಅಸಮಾಧಾನ

ಹಿರಿಯರಮೌನಕ್ಕೆ ಅಸಮಾಧಾನ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಕೆಲವರು ಬಹಿರಂಗವಾಗಿ ಹೇಳಿಕೆ ನೀಡಿ, ಅಪಮಾನಿ ಸುತ್ತಿದ್ದರೂ ಪಕ್ಷದಲ್ಲಿನ ಕಟಸ್ಥರು, ಹಿರಿಯರು ತಡೆಯಲು ಪ್ರಯತ್ನಿಸಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕೇಳುತ್ತಿರುವೆ ಎಂದು ಬಿ.ವೈ.ವಿಜಯೇಂದ್ರ ಸಾತ್ವಿಕ ಸಿಟ್ಟು ಹೊರಹಾಕಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಯಡಿಯೂರಪ್ಪ ಮಗನಾಗಿ ಈ ಮಾತು ಹೇಳುತ್ತಿಲ್ಲ. ಪಕ್ಷದ ಹಿತ. ಸಂಘಟನೆಗೆ ಧಕ್ಕೆ ತರುವ ರೀತಿಯಲ್ಲಿ ಕೆಲವು ನಾಯಕರ ಮಾತು, ವರ್ತನೆ ಗಮನಿಸಿಯೂ ಹಿರಿಯರು ಸುಮ್ಮನಿದ್ದಾರೆ ಎಂದು ಖಾರವಾಗಿ ರಾಜ್ಯದಲ್ಲಿ ಪಕ್ಷದ ಸಂಘಟನೆ ಬಲಪಡಿಸಿ ಅಧೀವರು ತರಲು ಯಡಿಯೂರಪ್ಪ ಹಗಲಿರುಳು ಶ್ರಮಿಸಿದ್ದಾರೆ. ಜನಪರ ನಿರಂತರ ಹೋರಾಟ ಮಾಡಿದ್ದಾರೆ. ಅನೇಕರು ರಾಜಕೀಯವಾಗಿ ಬೆಳೆಯಲು, ಅಧಿಕಾರ ಅನುಭವಿಸಲು ಕಾರಣರಾಗಿದ್ದಾರೆ. ಆದರೂ ಬಿಎಸ್‌ವೈ ವಿರುದ್ಧ ಮನಬಂದಂತೆ ಮಾತನಾಡುತ್ತಿರುವುದನ್ನು ಹಿರಿಯರು, ತಟಸ್ಥರು ಸಹಿಸಿಕೊಂಡಿದ್ದಾರೆ. ಇನ್ನಾದರೂ ಕಾರ್ಯಕರ್ತರಿಗೆ ಅಗುತ್ತಿರುವ ನೋವಿಗೆ ಸ್ಪಂದಿಸುವ ಜವಾಬ್ದಾರಿ ನಿಭಾಯಿಸುವ ನಿರೀಕ್ಷೆಯಿದೆ ಎಂದ ವಿಜಯೇಂದ್ರ, ಪರೋಕ್ಷವಾಗಿ ಹಿರಿಯರಿಗೆ ಟಾಸ್ಕ್ ನೀಡಿದರು.

ಪ್ರಯತ್ನ ಫಲಿಸದು: ಯಾರನ್ನೂ ವಿಶ್ವಾಸಕ್ಕೆತೆಗೆದುಕೊಳ್ಳುವುದಿಲ್ಲ. ಹಿರಿಯರಿಗೆ ಗೌರವ ನೀಡುವುದಿಲ್ಲ. ಹೊಂದಾಣಿಕೆ ರಾಜಕಾರಣ ಎಂದು ಕೆಲವರು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಫಲಿಸುವುದಿಲ್ಲ ಎಂದು ಭಿನ್ನಮತೀಯರಿಗೆ ಪರೋಕ್ಷವಾಗಿ ಚಾಟಿ ಬೀಸಿದರು. ವಸ್ತುಸ್ಥಿತಿ ಏನೆಂಬುದು ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವೆ. ಕಳೆದ ಒಂದು ವರ್ಷದಿಂದ ನಾನು ಮಾಡುತ್ತಿರುವ ಪ್ರಯತ್ನ, ಸರ್ಕಾರದ ವಿರುದ್ಧ ಹೋರಾಟ, ಸಂಘಟನೆ ಬಲವರ್ಧನೆ ವಿಚಾರದಲ್ಲಿ ಕಾರ್ಯಕರ್ತರಿಗೆ ತೃಪ್ತಿಯಿದೆ ಎಂದರು.

ಈಗ ಬಹಿರಂಗವಾಗಿ ಟೀಕೆ-ಟಿಪ್ಪಣಿ, ಆರೋಪ ಮಾಡುತ್ತಿರುವವರಿಗೆ ಪಕ್ಷದ ನಾಲ್ಕು ಗೋಡೆಯ ಮಧ್ಯೆ ಚರ್ಚಿಸುವ ಅವಕಾಶ ಬಳಸಿಕೊಳ್ಳಬಹುದಿತ್ತು. ಇಲ್ಲವೇ ವರಿಷ್ಠರಿಗೆ ಹೇಳಬಹುದಿತ್ತು. ಆದರೆ ಬಹಿರಂಗವಾಗಿ ಹೇಳಿಕೆ ನೀಡಿ ಗೊಂದಲ ಹುಟ್ಟಿ ಹಾಕಿದ್ದಾರೆ. ಕೆಲವು ನಾಯಕರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತಾ ಹೋದರೆ ಅವರಿಗೂ ನನಗೂ ವ್ಯತ್ಯಾಸವಿರುವುದಿಲ್ಲ. ಚುನಾವಣೆ ಮುಗಿದ ಬಳಿಕ ಎಲ್ಲದಕ್ಕೂ ಎಲ್ಲರಿಗೂ ಉತ್ತರ ನೀಡುವೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ನನಗೆ ಅನುಭವವಿಲ್ಲ ಎಂದಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಒಂದು ವರ್ಷವಾಗಿದೆಯಷ್ಟೇ. ಆದರೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ ವರಿಷ್ಠರ ಅಪೇಕ್ಷೆಯಂತೆ ಈ ಹಂತಕ್ಕೆ ತಲುಪಿಸಿದ್ದೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸಾಕಷ್ಟು ಅನುಭವವಿದೆ ಎಂದು ಕುಟುಕಿದರು. ಪಕ್ಷದ ರಾಜ್ಯಾಧ್ಯಕ್ಷ ಚುನಾವಣೆಗೆ ದಿನಗಳು ಹತ್ತಿರವಾಗಿದ್ದು, ಫೆ.20ರೊಳಗೆ ಪ್ರಕ್ರಿಯೆ
ಪೈಪೋಟಿ ಕೊಡುವಷ್ಟು ದೊಡ್ಡವನಲ್ಲ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಪೈಪೋಟಿ ”

ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಚಿತ್ರದುರ್ಗ ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಗುರುವಾರ ಭೇಟಿ ನೀಡಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. ತಮಗೆ ಜವಾಬ್ದಾರಿ ವಹಿಸಿದರೆ 150 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆಂಬ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲು ಹಿರಿಯರಿದ್ದಾರೆ, ಸಂಸದ ಗೋವಿಂದ ಎಂ. ಕಾರಜೋಳ, ಶ್ರೀರಾಮುಲು ಸೇರಿ ಅನೇಕ ಹಿರಿಯರು ಬಿ.ಎಸ್. ಯಡಿಯೂರಪ್ಪ, ಅನಂತಕುಮಾ‌ರ್ ಅವರಂಥ ಹಿರಿಯರೊಂದಿಗೆ ಸೇರಿ ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ಖಂಡಿತಾ ನಾನಂತೂ ಅವರಿಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯ ಅಲ್ಲ. ಈವರೆಗೂ ರಾಜ್ಯಾಧ್ಯಕ್ಷನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದರು.
ಪೂರ್ಣಗೊಳ್ಳುವ ಸೂಚನೆಗಳು ಸಿಕ್ಕಿವೆ. ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ವೇಳೆ ಮುಖಂಡರಿಗಿಂತ ಕಾರ್ಯಕರ್ತರಿಗೆ ವರಿಷ್ಠರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಕಾಂಗರೂ ತಂಡಕ್ಕೆ ಚಿಂತೆ

ಸಮೃದ್ಧಿ ಎಲ್ಲಿದೆ ?: ಗ್ಯಾರಂಟಿಗಳಿಂದ ಜನರು ಬದುಕಿನಲ್ಲಿ ಬದಲಾವಣೆಯಾಗಿದ್ದು, ಆರ್ಥಿಕವಾಗಿ ಸಮೃದ್ಧಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಹಾಗಿದ್ದರೆ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದು, ಕಿರುಕುಳ, ದೌರ್ಜನ್ಯತಾಳದೆ ಆತ್ಮಹತ್ಯೆ ಪರಿಸ್ಥಿತಿ ಉದ್ಭವಿಸಿದ್ದೇಕೆ? ಸಮೃದ್ಧಿ ಎಲ್ಲಿದೆ? ಎಂದು ಪ್ರಶ್ನಿಸಿದರು. ಸಾಲ ವಸೂಲಿಗೆ ಸಂಜೆ ಐದರ ನಂತರ ಹೋಗಬೇಡಿ ಎಂದು ಸರ್ಕಾರವೇ ಹೇಳುವ ಮೂಲಕ ಹಗಲು ಹೊತ್ತಿನಲ್ಲಿ ದೌರ್ಜನ್ಯಕ್ಕೆ ಪರೋಕ್ಷವಾಗಿ ನೀಡಿದೆ. ಜನರ ರಕ್ಷಣೆ, ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ಎಲ್ಲದರಲ್ಲೂ ಸರ್ಕಾರ ಮುಗ್ಗರಿಸಿ, ಬೀದಿಗೆ ಇಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

ಗುಂಪುಗಾರಿಕೆ ಪ್ರೋತ್ಸಾಹಿಸಲ್ಲ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ನಡೆಯುತ್ತಿದ್ದು, ಎಲ್ಲ ರಂಗದಲ್ಲೂ ವಿಫಲವಾಗಿದೆ. ಜನ ಸಾಮಾನ್ಯರು, ರೈತರು, ಮಹಿಳೆಯರು ಸಂಕಷ್ಟದಲ್ಲಿದ್ದು, ದಿನನಿತ್ಯ ಹಿಂಸೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿನ ಈ ಪರಿಸ್ಥಿತಿ ನೋಡಿದಾಗ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಬೇಕಿದೆ. ಆದರೆ ಇದೀಗ ಪಕ್ಷದಲ್ಲೇ ಅಂತರಿಕವಾಗಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಡೀ ದೇಶಕ್ಕೆ ಸಮರ್ಥ ಆಡಳಿತ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಈ ಪಕ್ಷ ಮತ್ತು ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಹಲವಾರು ಮುಖಂಡರಲ್ಲಿ ನಾನೂ ಒಬ್ಬ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಅದುದರಿಂದ ನಾನು ಯಾವುದೇ ಒಂದು ಗುಂಪಿನ ಸಭೆಯನ್ನು ಕರೆಯುವ ಪ್ರಶ್ನೆಯೇ ಬರುವುದಿಲ್ಲ. ಎರಡೂ ಕಡೆಯವರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಕರ್ನಾಟಕ ಬಿಜೆಪಿಯ ಸರ್ವೋಚ್ಚ ನಾಯಕ ಬಿ. ಎಸ್. ಯಡಿಯೂರಪ್ಪ ಹಾಗೂ ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆಯ ಮೂಲಕ ಇದನ್ನು ಬಗೆಹರಿಸಬೇಕು. ಇಲ್ಲದಿದ್ದರೆ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಬೇಕು ಎಂದು ಸಲಹೆ ನೀಡಿದ್ದಾರೆ. ವರಿಷ್ಠರು ಕೂಡಲೇ ಕರ್ನಾಟಕದ ಪಕ್ಷದ ಬೆಳವಣಿಗೆಯ ಬಗ್ಗೆ ಗಮನಹರಿಸಿ, ಎಲ್ಲ ಪ್ರಮುಖರ ಜತೆಗೆ ಚರ್ಚೆ ಮಾಡಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Leave a Comment