ಹೆಜ್ಜೆಗೊಲಿದ ಬೆಳಕು ವಿನೂತನ ಪ್ರಯೋಗ

ಹೆಜ್ಜೆಗೊಲಿದ ಬೆಳಕು ವಿನೂತನ ಪ್ರಯೋಗ

ಅವಳು ನೃತ್ಯಗಾರ್ತಿಯಾಗಿ ಕಲೆಯನ್ನು ಪೋಷಿಸುತ್ತಾಳೆ ತಾಯ್ತನದ ಸಂಕಟಗಳನ್ನು ಸೆರಗಲ್ಲಿ ಬಚ್ಚಿಡುತ್ತಾಳೆ. ಕಲೆ, ಬದುಕಿನ ನಡುವೆ ಒಂದಷ್ಟು ಸಂಘರ್ಷದಲ್ಲಿ ಬೇಯುತ್ತಲೇ ಬದುಕನ್ನು ಬೆಳಗಿದ ಶಾಂತಲೆ ಕಥೆಯಾದಳು. ಅವತ್ತಿಗೂ ಇವತ್ತಿಗೂ ನೃತ್ಯಗಾರ್ತಿಯರ ಬದುಕು ಹಾಗೂ ಕಲೆಯ ನಡುವಿನ ಹೋರಾಟ, ಸಂಘರ್ಷಗಳನ್ನು ಸುಂದರವಾಗಿ ‘ಹೆಜ್ಜೆಗೊಲಿದ ಬೆಳಕು’ ಹೆಸರಲ್ಲಿ ವೇದಿಕೆಯ ಮೇಲೆ ತೆರೆದಿಟ್ಟಿದ್ದು ಭರತನಾಟ್ಯ ವಿದುಷಿ ಸಂಸ್ಕೃತಿ ಪ್ರಭಾಕರ್.
ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದರಸಿಯಾಗಿದ್ದ ನಾಟ್ಯರಾಣಿ ಶಾಂತಲೆಯ ಆತ್ಮವೃತ್ತ ಆಧರಿಸಿದ ಈ ಏಕ ವ್ಯಕ್ತಿನಾಟಕ ಉಡುಪಿಯಲ್ಲಿ ಪ್ರದರ್ಶನಗೊಂಡು ಗಮನ ಸೆಳೆಯಿತು. ವಿದ್ವಾಂಸ ಜಿ. ಪಿ. ಪ್ರಭಾಕರ್ ತುಮರಿ ಅವರ ನೇತೃತ್ವದ ಉಡುಪಿಯ ಪ್ರಜ್ಞಾನಂ ಟ್ರಸ್ಟ್ ಸಂಸ್ಥೆಯ ಮೊದಲ ಪ್ರಸ್ತುತಿಯಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಯಿತು.ಸಾಹಿತಿ ಸುಧಾ ಆಡುಕಳ ರಚಿಸಿದ ಈ ಏಕವ್ಯಕ್ತಿ ನಾಟಕವನ್ನು ರಂಗಕರ್ಮಿ ಗಣೇಶ್ ಎಲ್ಲೂರು ನಿರ್ದೇಶನ ಮಾಡಿದ್ದು, ಸಾಹಿತ್ಯವನ್ನು ಕವಿ ಡಾ. ರಾಘವೇಂದ್ರ ರಾವ್ ರಚಿಸಿದ್ದಾರೆ. ಭರತನಾಟ್ಯದ ಹಲವು ಜತಿ ಮತ್ತು ನೃತ್ಯವನ್ನು ಕಲಾವಿದ ಗಣೇಶ್ ಬ್ರಹ್ಮಾವರ ಸಹಾಯದೊಂದಿಗೆ ಸಂಸ್ಕೃತಿ ಪ್ರಭಾಕ‌ರ್ ಸಂಯೋಜಿಸಿದ್ದು ನೃತ್ಯಪ್ರೇಮಿಗಳ ಮನ ಸೂರೆಗೊಂಡಿತು.

ಇದನ್ನೂ ಓದಿ:ಆಹಾ! ಭಕ್ತಿಯೆಂಬುದು ಏನನ್ನು ಮಾಡದು?


ಶಾಂತಲೆಯ ಬದುಕಿನ ಅನಾವರಣ ನಾಟಕದ ಮುಖ್ಯವಸ್ತುವೇ ಶಾಂತಲೆ. ಅವಳ ಬದುಕಿನ ಹೆಜ್ಜೆಗೆಜ್ಜೆಗಳ ನಡೆಯನ್ನು ಇಲ್ಲಿ ದೃಶ್ಯವಾಗಿಸಲು ಯತ್ನಿಸಲಾಗಿದೆ. ಅವಳ ಆತ್ಮಶೋಧದಲ್ಲಿ ಬದುಕಿನ ಸುಖ, ದುಬು, ಸಂಕಟ, ಒಲವು ನಿಲುವು ಎಲ್ಲವೂ ಇಲ್ಲಿ ಒಂದು ಮಾನವೀಯ ಕಥನವಾಗಿ ಗಮನ ಸೆಳೆಯುತ್ತದೆ.ನೃತ್ಯವನ್ನೇ ಬದುಕಿನ ಆರಾಧನೆಯಂತೆ ಭಾವಿಸುವ ಶಾಂತಲೆ ನೃತ್ಯಪರಂಪರೆಯನ್ನು ಶಾಶ್ವತವಾಗಿ ಉಳಿಸಲು ನಡೆಸುವ ಸಂಘರ್ಷ ಒಂದು ಕಡೆಯಾದರೆ ಪಟ್ಟದರಸಿಯಾಗಿಯೂ ತನ್ನೊಳಗೆ ಇರುವ ನೃತ್ಯಗಾತಿಯನ್ನು ಕಾಪಾಡಿಕೊಳ್ಳುವ ಹಂಬಲ ಇನ್ನೊಂದು ಕಡೆ. ಇಲ್ಲಿ ಒಂದೊಂದು ಹೆಜ್ಜೆ ಅವಳ ವ್ಯಷ್ಟಿಯಾದರೆ ಗೆಜ್ಜೆ ಒಂದು ಸಮಷ್ಟಿ ಅಭಿವ್ಯಕ್ತಿಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ.
ನೃತ್ಯದ ಎಲ್ಲ ಭಂಗಿಗಳನ್ನು ಕರಣಗಳನ್ನು ಜಡ ಶಿಲ್ಪದಲ್ಲಿ ಜೀವಂತಗೊಳಿಸಲು ದೊರೆಯನ್ನೂ ಮತ್ತು ಶಿಲ್ಪಿ ಜಕಣಾಚಾರಿಯತೆಗೆ ರಣಕಾರಿಯನ್ನು ಒಪ್ಪಿಸಿ ಬೇಲೂರಿನ ಶಿಲ್ಪವೈಭವಕ್ಕೆ ಕಾರಣಳಾಗುತ್ತಾಳೆ. ಇದು ಬರೀ ಶಾಂತಲೆಯ ಆತ್ಮಕಥನ ವಾಗದೆ ಅವಳು ನೃತ್ಯಗಾರ್ತಿಯಾಗಿ ಕಲೆಯನ್ನು ಪೋಷಿಸುತಾಳೆ. ತಾಯ್ತನದ ಸಂಕಟಗಳನ್ನು ಸೆರಗಲ್ಲಿ ಬಚ್ಚಿಡುತ್ತಾಳೆ.


ಶಾಂತಲೆಯ ಬದುಕಿನ ಮುಖ್ಯ ಘಟ್ಟವನ್ನು ಮಾತ್ರ ಆಯ್ದುಕೊಂಡು ಅವಳ ಸಂಘರ್ಷ, ಹೋರಾಟ, ಹೊಯ್ದಾಟ ಮತ್ತು ಕಲಾಪ್ರೀತಿಯ ನಿರೂಪಣೆಯ ಇಲ್ಲಿ ಕಥೆಯಾಗಿ ಹರಡಿಕೊಂಡಿದೆ. ಅವಳ ಸಾಂಸಾರಿಕ ಜೀವನ ಮತ್ತು ತಾಯ್ತನದ ಸಂಕಟಗಳು, ರಾಣಿಯಾಗಿ ನೃತ್ಯಪ್ರದರ್ಶನ ಮಾಡಲಾಗದ ನೋವು, ಮತ್ತೆ ಈ ಎಲ್ಲ ಜಂಜಾಟದಿಂದ ಹೊರಬರಲು ಒಂದು ತಾತ್ವಿಕ ಎಳೆಯಾಗಿ ಜೈನಧರ್ಮದ ಅಧ್ಯಾತ್ಮ ವನ್ನು ಅನುಸರಿಸಿ ಬೆಳಕು ಕಾಣುತ್ತಾಳೆ. ಈ ಎಲ್ಲ ಭಾವಾಭಿವ್ಯಕ್ತಿಯಲ್ಲಿ ಸಂಸ್ಕೃತಿ ಪ್ರಭಾಕರ ಪ್ರಬುದ್ಧವಾಗಿಅಭಿನಯಿಸಿದರು.ಮಗು ಎರೆಯಂಗನನ್ನು ಕಳೆದುಕೊಂಡ ದುಃಖದ ಸನ್ನಿವೇಶವನ್ನು ಸಂಸ್ಕೃತಿ ಸಂಸ್ಕೃತಿ ಸ ಪ್ರಭಾಕರ್ ನಿರ್ವಹಿಸಿದ ರೀತಿ ಎಲ್ಲರ ಹೃದಯವನ್ನು ಒಮ್ಮೆಲೇ ಕಾರುಣ್ಯದಲ್ಲಿ ಹಿಡಿ ದಿಟ್ಟಿತು. ಶಾಂತಲೆಯ ಕನಸಿನಂತೆ ಬಂದ ಜೋ.. ಜೋ.. ಪದ್ಯ ಎಲ್ಲರೂ ಗುನುಗುವಂತೆ ಹೃದ್ಯವಾಗಿ ಮೂಡಿ ಬಂತು. ವಿಷ್ಣು ವರ್ಧನ ಮತ್ತು ಶಾಂತಲೆಯ ಶೃಂಗಾರ ಭಾವವಂತೂ ನವಿ ರಾಗಿ ಎಲ್ಲರ ಎದೆಯೊಳಗೂ ಪ್ರೇಮದ ಪಲ್ಲವಿ ಹಾಡಿತು.

Leave a Comment