ಹೆಣ್ಣು ಈಡಿಸ್‌ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಖಾಯಿಲೆ ಹರಡುತ್ತದೆ!

ಹೆಣ್ಣು ಈಡಿಸ್‌ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಖಾಯಿಲೆ ಹರಡುತ್ತದೆ!

ಶಿಡ್ಲಘಟ್ಟ: ಹೆಣ್ಣು ಈಡಿಸ್‌ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಖಾಯಿಲೆ ಹರಡುತ್ತದೆ ನಿಂತ ನೀರಲ್ಲಿ ಈ ಸೊಳ್ಳೆ ಹುಟ್ಟಿಕೊಳ್ಳುತ್ತದೆ ಸಾರ್ವಜನಿಕರು ತಮ್ಮ ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ರಾಷ್ಟ್ರೀಯ ಡೆಂಗಿ ದಿನಾಚರಣೆಯ ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡೆಂಗ್ಯೂ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಲಾರ್ವಾ ಸರ್ವೆ ಕೈಗೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ,ಆಶಾ ಕಾರ್ಯಕರ್ತೆಯರು ಬಂದಾಗ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ:
ಕಟ್ಟಡ ಕಾರ್ಮಿಕರ ಮಕ್ಕಳು ಯಾರೂ ಸಹ ಶಾಲೆಯಿಂದ ದೂರವಿರಬಾರದು

ಹೆಣ್ಣು ಈಡಿಸ್‌ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಖಾಯಿಲೆ ಕಡಿತದಿಂದ ಪಾರಾಗುವುದು ಹೇಗೆ?

ಸೊಳ್ಳೆ ಕಡಿತದಿಂದ ಪಾರಾಗುವುದೊಂದೇ ಈ ರೋಗ ನಿಯಂತ್ರಣಕ್ಕಿರುವ ಪ್ರಥಮ ದಾರಿ ಮೈ ತುಂಬಾ ಬಟ್ಟೆಯನ್ನು ಧರಿಸುವುದು,ಮಲಗುವಾಗ ಸೊಳ್ಳೆ ಪರದೆ ಬಳಸುವುದು,ಸೊಳ್ಳೆ ನಿರೋಧಕ ಕ್ರೀಮ್ ಗಳನ್ನು ಬಳಸುವುದು,ಮನೆಯಲ್ಲಿ, ಸುತ್ತಮುತ್ತ ಸೊಳ್ಳೆ ಸುಳಿಯದಂತೆ ನೋಡಿಕೊಳ್ಳುವುದರಿಂದ ರೋಗದಿಂದ ಪಾರಾಗಬಹುದು,ಪರಿಸರ ವಿಧಾನ,ರಾಸಾಯನಿಕ ವಿಧಾನ,ಜೈವಿಕ ವಿಧಾನದ ಮೂಲಕವೂ ಸೊಳ್ಳೆ ಹರಡದಂತೆ ತಡೆಗಟ್ಟಲು ಅವಕಾಶವಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಮಂಜುನಾಯಕ್,ಡಾ.ಮಾಧವ್, ಡಾ.ಮಂಜುನಾಥ್,ಡಾ.ಸ್ವಾತಿ,ಡಾ.ಸುಗುಣ,ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ದೇವರಾಜ್,
ಆರ್. ಬಿ . ಎಸ್. ಕೆ. ವೈದ್ಯರಾದ ಡಾ. ಅಮೃತ, ಅಪ್ರೋಜ್, ನಂದಿನಿ, ಪ್ರಯೋಗ ಶಾಲಾ ನೋಡಲ್‌ ಅಧಿಕಾರಿ ಟಿ.ಟಿ.ನರಸಿಂಹಪ್ಪ, ಅಕ್ಕಲರೆಡ್ಡಿ ಧನಂಜಯ, ಚೈತ್ರ, ಮಂಜು, ಕೀರ್ತಿ ಮುಂತಾದವರು ಹಾಜರಿದ್ದರು.

Leave a Comment