ಹೊಸಬರಿಗೆ ಹೆಚ್ಚಿದ ಅವಕಾಶ ಟೀಮ್ ಲೀಸ್.
ಈ ವರ್ಷದ (2024) ದ್ವಿತೀಯಾರ್ಧದಲ್ಲಿ ಶೇ. 72ರಷ್ಟು ಉದ್ಯೋಗದಾತರು ಹೊಸ ಯಬರು ಅಥವಾ ಪ್ರೆಶರ್ ಗಳು ನೇಮಕ ಮಾಡಿಕೊಳ್ಳಲು ಯೋಚಿಸಿದ್ದಾರೆ ಎಂದು ಟೀಮ್ ಲೀಸ್ ಎಜಿಟೆಕ್ ಸಮೀಕ್ಷೆ ತಿಳಿಸಿದೆ. ಈ ವರ್ಷದ ಮೊದಲರ್ಧದಲ್ಲಿ ಪ್ರೆಷರ್ಗಳ ನೇಮಕಾತಿಯಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. ಇದರಿಂದ ಪ್ರತಿಭಾನ್ವಿತ ಪ್ರೆಶರ್ ಗಳಿಗೆ ಉದ್ಯೋಗಾವಕಾಶಗಳ ಕೊರತೆ ಇಲ್ಲ ಎನ್ನುವುದನ್ನು ಮನಗಾಣಬಹುದು ಎಂದು ಸಮೀಕ್ಷೆ ಉಲ್ಲೇಖಿಸಿದೆ.’ ಟೈಮ್ ಲೀಸ್ ಎಜುಟೆಕ್ – 2024 ‘ ರೈ ದ್ವಿತೀಯಾರ್ಧದ (ಜುಲೈ – ಡಿಸೆಂಬರ್ ತಿಂಗಳ ಅವಧಿ) ಉದ್ಯೋಗ ಪ್ರವೃತ್ತಿ ಬಗ್ಗೆ ಅಧ್ಯಯನ ನಡೆಸಲು 600 ಕ್ಕೂ ಹೆಚ್ಚು ಕಂಪನಿಗಳನ್ನು ಸಮೀಕ್ಷೆ ನಡೆಸಿದೆ.
ಯಾರಿಗೆ ಬೇಡಿಕೆ ಹೆಚ್ಚು? : ಇ-ಕಾಮರ್ಸ್ ಮತ್ತು ಟೆಕ್ ಎಂ ಜಿನಿಯರಿಂಗ್ ಮತ್ತು ಇನ್ ಫ್ರಸ್ಪೆಕ್ಟರ್, ರಿಟೇಲರ್ ವಲಯಗಳು ಪ್ರೆಶರ್ ಗಳಿಗೆ ಆದ್ಯತೆ ನೀಡುವ ಪ್ರಮುಖ 3 ಉದ್ಯಮಗಳಿವೆ. ಕ್ರಮವಾಗಿ ಈ ವಲಯಗಳ ಶೇ. 61, ಶೇ. 59, ಶೇ. 54 ರಷ್ಟು ಉದ್ಯೋಗದಾತರು ನೇಮಕಾತಿ ಮಾಡಲು ಯೋಚಿಸಿದ್ದಾರೆ. ಬೆಂಗಳೂರಿನ ಶೇ. 74ರಷ್ಟು ಮುಂಬಯಿಯ ಶೇ. 60, ಚೆನ್ನೈನ ಶೇ. 54 ರಷ್ಟು ಉದ್ಯೋಗದಾತರು ಹೊಸಬ್ಬರನ್ನು ನೇಮಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಫುಲ್ ಸ್ಟಾಕ್ ಡೆವಲಪರ್, ಸರ್ಚ್ ಎಂಜಿನ್ ಅಪ್ಪಿಮೈಸೆಷನ್ , ಎಕ್ಸಿಕ್ಯೂಟ್, ಡಿಜಿಟಲ್ ಸೇಲ್ಸ್ ಅಸೋಸಿಯೇಟ್ ಮತ್ತು ಯುಐ / ಯು ಎಕ್ಸ್ ಡಿಸೈನರ್ ಹುದ್ದೆಗಳಲ್ಲಿ ಪ್ರೆಶರ್ ಗಳಿಗೆ ಹೆಚ್ಚು ಬೇಡಿಕೆ ಇದೆ.
ಇದನ್ನೂ ಓದಿ: ಮಹದಾಯಿ ಜಲವಿವಾದ ಕುರಿತು ಇನ್ನಷ್ಟು ವರದಿ ಸಲ್ಲಿಸಬೇಕಾಗಿದ್ದು
ಉಳಿದಂತೆ ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟರಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಸರ್ಚ್ ಎಂಜಿನ್ ಅಪ್ಪಿಮೈಸೇಶನ್ನಲ್ಲಿ ಕೌಶಲವುಳ್ಳವರಿಗೆ ಕಂಪನಿಗಳು ಹುಡುಕಾಟ ನಡೆಸಿವೆ ಎಂದು ವರದಿ ತಿಳಿಸಿದೆ. ಪ್ರಾಯೋಜಿತ ಕಲಿಕೆಯ ಅಗತ್ಯ : ಶಿಕ್ಷಣ ಕಲಿಕೆಯಲ್ಲಿ ಪ್ರಯೋಗಿಕ ಕಲಿಕೆಯ ಮಹತ್ವದ ಬಗ್ಗೆಯೂ ಸಮೀಕ್ಷೆಯಲ್ಲಿ ಉದ್ಯೋಗದಾತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಶೇ. 70ರಷ್ಟು ಉದ್ಯೋಗದಾತರು, ಪಠ್ಯಕ್ರಮದ ಜೊತೆಗೆ ಪ್ರಾಯೋಗಿಕ ಕಲಿಕೆ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ ಉದ್ಯಮಗಳಿಗೆ ಅಗತ್ಯವಿರುವ ಕೌಶಲ ಬೆಳೆಸುವಲ್ಲಿ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಸಹಯೋಗ ಅವಶ್ಯವಾಗಿದೆ ಎಂದು ಶೇ. 62ರಷ್ಟು ಮಂದಿ ಪ್ರತಿಪಾದಿಸಿದ್ದಾರೆ. ಡಿಗ್ರಿ ಅಪ್ರೆಂಟಿಸ್ ಷಿಪ್ ಗೆ ಬೇಡಿಕೆ ಸ್ಥಿರವಾಗಿದೆ. ಶೇ. 25ರಷ್ಟು ಉದ್ಯೋಗದಾತರು ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸಲು ಪದವೀದಾರರನ್ನು ಅಪ್ರೆಂಟಿಸ್ಗನ್ನಾಗಿ ನೇಮಿಸಿಕೊಳ್ಳಲು ಯೋಚಿಸುತ್ತಿದ್ದಾರೆ. ಇದೆ ಪ್ರೀತಿ ಎಂ ಜಿನಿಯರಿಂಗ್ ನಲ್ಲಿ ಶೇ. 19 ಮತ್ತು ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ನಲ್ಲಿ ಶೇ. 11ರಷ್ಟು ಪದವೀದಾರರ ಅಪ್ರೆಂಟಿಸ್ಗಳ ನೇಮಕ ನಡೆಯಲಿದೆ