ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ:-
ಈಗಿನ ಟ್ರೆಂಡ್ ಕರಿಮಣಿ ಮಾಲೀಕ ಎನ್ನುವ ಹಾಡು ತುಂಬ ವೈರಲ್ ಆಗಿದ್ದು. ಈ ಹಾಡಿಗೆ ಎಲ್ಲರೂ ರೀಲ್ಸ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಅದನ್ನು ಟೈಮ್ ಪಾಸ್ ಗಾಗಿಯೋ ಅಥವಾ ಸಂತೋಷಕ್ಕಾಗಿಯೋ ಬಳಸಿಕೊಳ್ಳಬೇಕು ಆದರೆ ಇಲ್ಲೊಬ್ಬ ಜೀವನಕ್ಕೆ ಕುತ್ತು ತರುವಂತಹ ಕೆಲಸ ಮಾಡಿಕೊಂಡಿದ್ದಾನೆ.
ಕರಿಮಣಿ ಮಾಲೀಕ ನೀನಲ್ಲ
ಎಂದು ತನ್ನ ಪತ್ನಿ ಸೋದರ ಮಾವ, ಸಹೋದರಿ ಜೊತೆಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಾರಣ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ ನಿವಾಸಿ ಕುಮಾರ್ ಎಂಬುವಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ರೂಪ ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಸಾವಿನ ಕಾರಣ ಬಿಚ್ಚಿಟ್ಟಿದ್ದಾಳೆ.
ಇದನ್ನೂ ಓದಿ :-ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾ ಒಟಿಟಿಗೆ ಬರಲು ಸಿದ್ಧ; ಯಾವಾಗ ವೀಕ್ಷಣೆ? ಸಿನಿ ಪ್ರೇಕ್ಷರಿಗೆ ಸಿಹಿ ಸುದ್ದಿ
ನನ್ನ ಮೇಲೆ ಪತಿ ಕುಟುಂಬಸ್ಥರು ಸುಖಾಸುಮ್ಮನೆ ಆರೋಪಿಸುತ್ತಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣ ಅಲ್ಲವೆಂದು ರೂಪಾ ಪ್ರತಿಭಟನೆ ನಡೆಸಿದ್ದರು.
ನಾನು ರೀಲ್ಸ್ ಮಾಡಿದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ನನ್ನ ಪತಿ ವಿಪರೀತ ಸಾಲ ಮಾಡಿಕೊಂಡಿದ್ದರು. ನಿತ್ಯ ಮದ್ಯ ಕುಡಿದು ಇಸ್ಪೀಟ್ ಆಡುತ್ತಿದ್ದರು. ಸಾಲ ಹಿಂದಿರುಗಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.
ಪತಿಯ ಸಾವಿಗೆ ರೀಲ್ಸ್ ಕಾರಣ ಅಲ್ಲ
ನನ್ನ ಮಕ್ಕಳ ಮೇಲಾಣೆ, ಈ ಹಿಂದಿನಿಂದಲೂ ನಾನು ರೀಲ್ಸ್ ಮಾಡಿದ್ದೇನೆ. ಅದು ನನ್ನ ಪತಿ ಕುಮಾರ್ ಅವರಿಗೂ ತಿಳಿದಿತ್ತು. ನನ್ನ ಮೇಲೆ ಪತಿ ಕುಟುಂಬಸ್ಥರು ಸುಖಾಸುಮ್ಮನೆ ಆರೋಪಿಸುತ್ತಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣ ಅಲ್ಲವೆಂದು ರೂಪಾ ಪ್ರತಿಭಟನೆ ನಡೆಸಿದ್ದರು.
ಕುಮಾರ್ ಕುಟುಂಬಸ್ಥರ ಆರೋಪ ಏನು?
ಸೋದರ ಮಾವ, ಸಹೋದರಿ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂದು ಪತ್ನಿ ರೂಪಾ ರೀಲ್ಸ್ ಮಾಡಿದ್ದರು. ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ್ದರಿಂದ ಕುಮಾರ್ಗೆ ಆತನ ಗೆಳೆಯರು ಛೇಡಿಸುತ್ತಿದ್ದರು.
ಈ ರೀಲ್ಸ್ ಸಂಬಂಧ ದಂಪತಿ ನಡುವೆ ಜಗಳ ಆಗಿತ್ತು. ರೀಲ್ಸ್ ನಿಂದ ಮನನೊಂದು ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದರು.