ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ
ಮಹಾತ್ಮರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಅವರ ಬದುಕೇ ಜಗತ್ತಿಗೆ ಒಂದು ಸಂದೇಶ. ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಬದುಕಿದ್ದು ಹೀಗೆ ಅವರು ಎಂದೂ ಯಾರಿಗೂ ಹೀಗೆ ಮಾಡಿರಿ, ಹಾಗೆ ಮಾಡಿರಿ ಎಂದು ಆಜ್ಞೆ ಮಾಡಿದವರಲ್ಲ. ಹೀಗೆ ಮಾಡಿದರೆ ಹೇಗೆ ಇರುತ್ತದೆ? ಎಂದು ನಮ್ಮನ್ನೇ ಕೇಳುತ್ತಿದ್ದರು. ಚೆನ್ನಾಗಿರುತ್ತದೆ ಎಂದು ನಾವು ಹೇಳಿದಾಗ, ‘ಹಾಗಾದರೆ ಹಾಗೇ ಮಾಡಿರಿ’ ಎನ್ನುತ್ತಿದ್ದರು. ಸಾವೇ ನಡೆಯಲೇ ಬೇಕಾಗುತ್ತಿತ್ತು. ಇದು ಪೂಜ್ಯರು ಕಲಿಸುವ ರೀತಿ, ಬೋಧನೆಯ ವಿಧಾನವಾಗಿತ್ತು. ಪ್ರವಚನಕ್ಕೆ ಕಾರ್ಯಕ್ರಮಕ್ಕೆ ಸರಿಯಾಗಿ ಬರಬೇಕೆಂದು ಎಂದೂ ಯಾರಿಗೂ ಹೇಳಲಿಲ್ಲ. ತಾವೇ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಅಂತೆಯೇ ಅವರ ಪ್ರವಚನಕ್ಕೆ ಸಾವಿರ ಸಾವಿರ ಜನ ಒಂದು ಕ್ಷಣ ತಡಮಾಡದೆ ಓಡೋಡಿ ಬರುತ್ತಿದ್ದರು.
ಪೂಜ್ಯರ ದೈನಂದಿನ ಜೀವನವು ಅಷ್ಟೇ ಅಚ್ಚುಕಟ್ಟಾಗಿತ್ತು. ಅವರು ಮಲಗುವ, ಏಳುವ, ಪೂಜೆ, ಪ್ರಸಾದ, ಪಾಠ, ಪ್ರವಚನ ಸಂದರ್ಶನ ಎಲ್ಲವೂ ನಿಗದಿತ ಸಮಯಕ್ಕೆ ಸರಿಯಾಗಿ ನಡೆಯುತ್ತಿದ್ದವು. ಅವರ ಜ್ಞಾನ, ಪೂಜೆಯ ಸಮಯದಲ್ಲಿ ಗಣ್ಯಾತಿಗಣ್ಯ ವ್ಯಕ್ತಿಗಳು ಬಂದರೂ ಅವರು ತಮ್ಮ ಧ್ಯಾನ, ಪೂಜೆ ಬಿಟ್ಟು ಬರುತ್ತಿರಲಿಲ್ಲ. ಕನಿಷ್ಠ ಆ ನಿಮಿತ್ತವಾಗಿಯಾದರೂ ಭಕ್ತರು ಆಶ್ರಮದ ಪವಿತ್ರ ಪರಿಸರದಲ್ಲಿ ಸ್ವಲ್ಪ ಸಮಯ ಕಳೆಯಲ್ಲಿ ಪ್ರಶಾಂತಿಯನ್ನು ಅನುಭವಿಸಲಿ ಎಂಬುದು ಅವರ ಸದಿಚ್ಛೆಯಾಗಿರಬೇಕು.
ಪೂಜ್ಯರ ಪ್ರವಚನಕ್ಕಾಗಿ ಒಂದೊಂದು ಹರಿದೊಯುವ ಕಾಯಕವು ಅವರ ಊರಿಗೆ ಪ್ರವಚನಕ್ಕೆ ಹೋಗುವಾಗ ಪೂಜ್ಯರು ಅವರಿಗೆ ಹೇಳುತ್ತಿದ್ದರು- ‘ನನ್ನ ಬಳಗ ಬಹಳ. ಅವರಿಗೆಲ್ಲ ನೀವು ಅನ್ನದ ವ್ಯವಸ್ಥೆ ಮಾಡಿದರೆ ನಾನು ನಿಮ್ಮ ಊರಿಗೆ ಬರುತ್ತೇನೆ’ ಎಂದು ಪೂಜ್ಯರು ಜ್ಞಾನದಾಸೋಹಕ್ಕೆ ಎಷ್ಟು ಮಹತ್ವ ಕೊಡುತ್ತಿದ್ದರೋ ಅದಕ್ಕಿಂತಲೂ ಹೆಚ್ಚು ಅನ್ನದಾಸೋಹಕ್ಕೆ ಮಹತ್ವ ಕೊಡುತ್ತಿದ್ದರು. ಹಸಿದವರಿಗೆ ಅಧ್ಯಾತ್ಮವನ್ನು ಹೇಳುವುದು ಮಹಾಪಾಪ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಇಲ್ಲಿ ನಾವು ಸ್ಮರಿಸಬಹುದು.
ಐವತ್ತು ವರ್ಷಗಳ ಹಿಂದೆ ನಡೆದ ಒಂದು ಘಟನೆ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹತ್ತಿರ ಬಂದ ಭಕ್ತರು ಪೂಜ್ಯರ ದರ್ಶನಾಶೀರ್ವಾದ ಪಡೆದು ಗುರುದಕ್ಷಿಣೆ ಎಂದು ಹಣದ ರೂಪದಲ್ಲಿ ಕಾಣಿಕೆ ನೀಡಿ ಹೋಗುತ್ತಿದ್ದರು. ಆಗ ಪೂಜ್ಯರು ವಿಜಯಪುರದ ಕರಡಿ ಆಶ್ರಮದಲ್ಲಿ ಇರುತ್ತಿದ್ದರು. ಅಲ್ಲಿ ಹಲವಾರು ಜನ ಸಾಧಕ ಶಿಷ್ಯರು ಇದ್ದರು. ಮಹಾನ್ ತ್ಯಾಗಿಗಳಾದ ಮಲ್ಲಿಕಾರ್ಜುನ ಸ್ವಾಮಿಗಳು ಎಂದೂ ಯಾರಿಂದಲೂ ಹಣ ಸ್ವೀಕರಿಸಿದವರಲ್ಲ. ಶಿಷ್ಯರ ದೈನಂದಿನ ಖರ್ಚಿಗೆ ಇರಲಿ ಎಂದು ಪೂಜ್ಯರು ಗುರುದಕ್ಷಿಣೆಯನ್ನು ಆಶ್ರಮದಲ್ಲಿದ್ದ ಸಾಧಕರ ಹತ್ತಿರ ಕೊಡಲು ಹೇಳುತ್ತಿದ್ದರು. ಈ ಚಿಕ್ಕ ಹಣಕಾಸಿನ ವ್ಯವಹಾರವನ್ನು ಸಿದ್ದೇಶ್ವರ ಸ್ವಾಮಿಗಳಿಗೆ ಗುರುಗಳು ವಹಿಸಿದರು. ಸಿದ್ದೇಶ್ವರ ಸ್ವಾಮಿಗಳು ಆ ಹಣವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಅದರ ಮೇಲೆ ಒಂದು ಪೆನ್ನು ಮತ್ತು ನೋಟ್‌ಬುಕ್ಕನ್ನು ಇಟ್ಟು, ತಮಗೆ ಖರ್ಚಿಗೆ ಬೇಕಾದಷ್ಟು ಹಣವನ್ನು ತೆಗೆದುಕೊಂಡು ನೋಟ್‌ಬುಕ್‌ನಲ್ಲಿ ಬರೆದಿಡಲು ఎల్ల గురు-బంధుగారికి వీళదరు. రోగే ಹೇಳಿದ ಸ್ವಲ್ಪವೇ ಸಮಯದಲ್ಲಿ ಪೆಟ್ಟಿಗೆ ಬರಿದಾಗಿ ಹೋಗುತ್ತಿತ್ತು. ಇದನ್ನು ನೋಡಿದ ಮಲ್ಲಿಕಾರ್ಜುನ ಸ್ವಾಮಿಗಳು ಅವರಿಗೆ ಹಣಕಾಸಿನ ವ್ಯವಹಾರವನ್ನು ಬಿಡಿಸಿ ಜ್ಞಾನಾರ್ಜನೆಗೆ ತೊಡಗಿಸಿದರು. ಮೋಹನ್ ಜ್ಞಾನಯೋಗಿಗಳನ್ನಾಗಿ ಮಾಡಿದರು.
ಇದನ್ನೂ ಓದಿ: ಅಜಾತಶತ್ರು, ಅಜರಾಮರ ಪೇಜಾವರ ಶ್ರೀಗಳು
ಅದೊಂದು ದೊಡ್ಡ ಧರ್ಮಸಭೆ. ಅದರಲ್ಲಿ ಅನೇಕ ಪೂಜ್ಯರು, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಅದರಲ್ಲಿ ಸಿದ್ದೇಶ್ವರ ಸ್ವಾಮಿಗಳೂ ಇದ್ದರು. ಅಲ್ಲಿರುವ ಎಲ್ಲ ಶ್ರೀಗಳು ತ್ಯಾಗದ ಸಂಕೇತವಾಗಿರುವ ಕಾವಿ ಅಥವಾ ಭಗವಾ ಬಟ್ಟೆ ಧರಿಸಿದ್ದರು. ಸಿದ್ದೇಶ್ವರ ಸ್ವಾಮಿಗಳು ಮಾತ್ರ ಬಿಳಿ ಬಟ್ಟೆ ಧರಿಸಿದ್ದರು. ಗುರುದೇವರ ಆಶೀರ್ವಚನದ ಮಧುರ ವಾಣಿಯನ್ನು ಎಲ್ಲರೂ ಮಂತ್ರಮುಗ್ಧವಾಗಿ ಕೇಳುತ್ತಿದ್ದರು. ಅವರ ಆಶೀರ್ವಚನ ಮುಗಿಯುತ್ತಿದ್ದಂತೆ, ಒಂದು ಪುಟಾಣಿ ಮಗು ಗುರುದೇವರ ಬಳಿ ಬಂದು ಒಂದು ಚೀಟಿಯನ್ನು ಅವರ ಕೈಗೆ ಕೊಟ್ಟು ನಮಸ್ಕರಿಸಿತು. ಅದರಲ್ಲಿ ಬರೆದಿದ್ದು ಏನೆಂದರೆ ‘ಎಲ್ಲ ಪೂಜ್ಯರು ಖಾವಿ ಧರಿಸಿದ್ದಾರೆ. ನೀವೇಕೆ ಧರಿಸಿಲ್ಲ? ಈ ಪ್ರಶ್ನೆಗೆ ನೀವು ದಯವಿಟ್ಟು ಉತ್ತರಿಸಲೇಬೇಕು’.
ಅದನ್ನು ನೋಡಿದ ಸಿದ್ದೇಶ್ವರ ಸ್ವಾಮಿಗಳು ನಸುನಗುತ್ತ ಎದ್ದು ನಿಂತು ಹೇಳಿದರು, ‘ಕಾಯಿ ಹಣ್ಣಾದ ಮೇಲೆ ಬಣ್ಣ ಬರುತ್ತದೆ. ಎಲ್ಲ ಶ್ರೀಗಳು ಅಧ್ಯಾತ್ಮ ಕ್ಷೇತ್ರದಲ್ಲಿ ಹಲವಾರು ವರ್ಷಗಳವರೆಗೆ ದುಡಿದು ಪಕ್ವವಾಗಿದ್ದಾರೆ. ಆದ್ದರಿಂದ ಅವರ ಬಟ್ಟೆಗೆ ಬಣ್ಣ ಬಂದಿದೆ. ದೈವೀ ಕಳೆ ತಂದಿವೆ. ನಾನು ಇನ್ನೂ ಕಾಯಿಯಾಗಿದ್ದೇನೆ. ಅದ್ದರಿಂದ ನನ್ನ ಬಟ್ಟೆಗೆ ಬಣ್ಣ ಬಂದಿಲ್ಲ. ನಾನು ಖಾವಿ ಧರಿಸಿಲ್ಲ’. ಸಿದ್ದೇಶ್ವರ ಸ್ವಾಮಿಗಳ ಸುಮಧುರವಾದ ನಯವಿನಯದ ಈ ನುಡಿಗಳನ್ನು ಕೇಳುವುದೆ ತಡ ಆ ಧರ್ಮಛತ್ರದಲ್ಲಿದ್ದ ಎಲ್ಲ ಪೂಜ್ಯರು, ಭಕ್ತರು ಸಂತಸದಿಂದ ಕರತಾಡನ ಮಾಡಿದರು. ಸಿದ್ಧೇಶ್ವರ ಸ್ವಾಮೀಜಿಯವರ ನಮ್ರತೆಗೆ ಇದು ನಿದರ್ಶನ. ಈ ಸಂದರ್ಭದಲ್ಲಿ ‘ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬ ಬಸವಣ್ಣನವರ ಸಂದೇಶ ನೆನಪಾಗುತ್ತದೆ.
ಸಿದ್ದೇಶ್ವರ ಸ್ವಾಮಿಗಳು ಸರಳ ಜೀವನ. ಉನ್ನತ ವಿಚಾರದವರಾಗಿದ್ದರು. ಒಮ್ಮೆ ಅವರು ಧರಿಸಿದ ಸ್ವಾಮಿಗಳು ಸರಳ ಜೀವನ, ಉನ್ನತ ಬಿಳಿ ಖಾದಿ ಬಟ್ಟೆಯು ಒಂದು ಕಡೆ ಸ್ವಲ್ಪ ಹರಿದಿತ್ತು. ಇದನ್ನು ನೋಡಿದ ಭಕ್ತರೊಬ್ಬರು, ‘ಗುರುಗಳೇ ನೀವು ಈ ಹರಿದ ಬಟ್ಟೆಯನ್ನೇಕೆ ಧರಿಸುತ್ತೀರಿ? ತಮಗೆ ಹೊಸ ಬಟ್ಟೆ ತರುತ್ತೇನೆ. ತಾವು ನನಗೆ ಈ ಸೇವಾ ಅವಕಾಶ ನೀಡಬೇಕು’ ಎಂದು ಕೇಳಿದರು. ಆಗ ಅವರಿಗೆ ಪೂಜ್ಯರು ಹೇಳಿದರು, “ನಿಮಗೆ ಧನ್ಯವಾದಗಳು. ಆದರೆ ನೀವು ಬಟ್ಟೆ ಹರಿದ ಕಡೆಗೇ ಏಕೆ ನೋಡುತ್ತೀರಿ? ಉಳಿದ ಕಡೆ ಬಟ್ಟೆ ಇನ್ನೂ ಸಾಕಷ್ಟು ಗಟ್ಟಿಯಾಗಿದೆ. ಇದನ್ನು ಬಳಸದಿದ್ದರೆ ನಾನು ಈ ಬಟ್ಟೆಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ?’ ಪೂಜ್ಯರ ವಾಣಿಯನ್ನು ಕೇಳಿದ ಭಕ್ತರಿಗೆ ಪರಮಾಶ್ಚರ್ಯ.
ಒಮ್ಮೆ ಪೂಜ್ಯರನ್ನು ಪ್ರವಚನಕ್ಕೆ ಕರೆಯಲು ಒಂದು ಊರಿನವರು ಹಳೆಯ ವಾಹನ ತಂದಿದ್ದರು. ಅದನ್ನು ನೋಡಿದ ಮತ್ತೊಬ್ಬ ಭಕ್ತರು ಹೊಸವಾಹನ ತಂದು ಅದರಲ್ಲಿ ಹತ್ತಬೇಕೆಂದು ವಿನಂತಿಸಿದರು. ಆಗ ಪೂಜ್ಯರು ಹೇಳಿದರು, ‘ಇದೊಂದು ಸಲ ಅವರ ವಾಹನದಲ್ಲಿ ಹೋಗೋಣ. ಇನ್ನೊಮ್ಮೆ ನಿಮ್ಮ ವಾಹನದಲ್ಲಿ ಹೋಗೋಣ’. ಈ ಮಾತನ್ನು ಕೇಳಿದ ಹಳೆಯ ವಾಹನ ಹಾಗೂ ಹೊಸ ವಾಹನ ತಂದಿದ್ದ ಈರ್ವರ ಕಣ್ಣಲ್ಲಿ ಆನಂದಭಾಷ್ಪ. ಇಂಥ ನಿರಾಭಾರಿ ಸಂತರನ್ನು ಪಡೆದಿದ್ದ ಈ ನಾಡು ನಾಡವರು ಎಂದೆಂದಿಗೂ ಧನ್ಯರು.