ಖಾಲಿ ಇವೆ ‘ಕಾಯಂ’ ಹುದ್ದೆಗಳು!

ಖಾಲಿ ಇವೆ ‘ಕಾಯಂ’ ಹುದ್ದೆಗಳು!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾ- ಪುರ ನಗರದಲ್ಲಿ ಸುಮಾರು 80 ಸಾವಿರ ಜನಸಂಖ್ಯೆ ಇದೆ. ಇವರಲ್ಲಿ ಬಹುಪಾಲು ಮಂದಿ ಒಂದಲ್ಲಾ ಒಂದು ಕಾರಣಕ್ಕೆ ನಗರಸಭೆ ಎಡತಾಕುವರು. ನಗರಸಭೆಯೂ ಅಷ್ಟೇ ದೊಡ್ಡಸಂಖ್ಯೆಯ ಜನರಿಗೆ ಒಂದಲ್ಲಾ ಒಂದು ಸೇವೆ ನೀಡುತ್ತದೆ.

ಹೀಗೆ ದೊಡ್ಡ ಜನಸಂಖ್ಯೆಗೆ ಕೆಲಸ ಮಾಡಿಕೊಡಬೇಕಾದ ನಗರಸಭೆಯಲ್ಲಿ ಮಾತ್ರ ಕಾಯಂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ನಗರಸಭೆಯಲ್ಲಿ ಕಾಯಂ ಸಿಬ್ಬಂದಿಗಿಂತ, ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ನೇರಪಾವತಿಯ ಮೂಲಕ ಕೆಲಸ ಮಾಡುವ ಸಿಬ್ಬಂದಿಯೇ ಅಧಿಕ- ವಾಗಿದ್ದಾರೆ.
ಕಾಯಂ ಸಿಬ್ಬಂದಿ ಇಲ್ಲದಿರುವುದು ಆಡಳಿತದ ಪಾರದರ್ಶಕತೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುವ ಮಾತುಗಳು ನಗರಸಭೆ ಸದಸ್ಯರಿಂದಲೇ ಕೇಳಿ ಬರುತ್ತಿದೆ.

ಚಿಕ್ಕಬಳ್ಳಾಪುರ ನಗರಸಭೆಗೆ ಪೌರಾಯುಕ್ತರಿಂದ ಹಿಡಿದು ಪೌರಕಾ– ರ್ಮಿಕರವರೆಗೆ ಒಟ್ಟು 230 ಕಾಯಂ ಹುದ್ದೆಗಳು ಮಂಜೂರಾಗಿವೆ. ಇವುಗಳ ಪೈಕಿ 71 ಹುದ್ದೆಗಳಲ್ಲಿ ಮಾತ್ರ ಕಾಯಂ ಅಧಿಕಾರಿ, ಸಿಬ್ಬಂದಿ ಕೆಲಸ ನಿರ್ವಹಿಸು- ತ್ತಿದ್ದಾರೆ. 15.7 ಹುದ್ದೆಗಳಲ್ಲಿ ಕಾಯಂ ಸಿಬ್ಬಂದಿ ಇಲ್ಲ. ಹೀಗೆ ದೊಡ್ಡ ಪ್ರಮಾಣ. ದಲ್ಲಿಯೇ ಕಾಯಂ ಸಿಬ್ಬಂದಿಯ ಕೊರತೆ ಬಾಧಿಸುತ್ತಿದೆ.

ಹಿರಿಯ ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್, ಚಾಲಕರು, ದ್ವಿತೀಯ ದರ್ಜೆ ಸಹಾಯಕ, ಪೌರಕಾರ್ಮಿಕ, ನೀರು ಸರಬರಾಜು ಸಹಾಯಕ, ಕ್ಲೀನ‌ರ್, ಲೋಡರ್ಸ್ ಸೇರಿದಂತೆ ಒಟ್ಟು 150 ಕಾಯಂ ಅಲ್ಲದ ಸಿಬ್ಬಂದಿ ವಿವಿಧ ಆಧಾರದಲ್ಲಿ ನಗರಸಭೆಯಲ್ಲಿ ಕೆಲಸ ನಿರ್ವಹಿಸು- ತ್ತಿದ್ದಾರೆ.

ನಾಲ್ಕು ಮಂದಿ ಕಂಪ್ಯೂಟರ್ ಆಪರೇಟರ್, 27 ಚಾಲಕರು,29 ನೀರು ಸರಬರಾಜು ಸಹಾಯಕರು, 25 ಮಂದಿ ಕ್ಲೀನರ್, 14 ಮಂದಿ ಲೋಡರ್ಸ್ ಸೇರಿದಂತೆ 99 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿ- ಸುತ್ತಿದ್ದಾರೆ.

ಇದನ್ನೂ ಓದಿ: ಪಂಚವಾರ್ಷಿಕ ಯೋಜನೆಯಾದ ಎಸ್‌ಐ ನೇಮಕಾತಿ!

ಒಬ್ಬ ದ್ವಿತೀಯ ದರ್ಜೆ ಸಹಾಯಕರು, ಒಬ್ಬ ಪೌರಕಾರ್ಮಿಕರು, 13 ಮಂದಿ ನೀರು ಪೂರೈಕೆದಾರರು ಸೇರಿದಂತೆ ಒಟ್ಟು 15 ಮಂದಿ ದಿನಗೂಲಿ ಕ್ಷೇಮಾಭಿವೃದ್ಧಿ ಆಧಾರದಲ್ಲಿ, ಇಬ್ಬರು ನೀರು ಸರಬರಾಜು ಸಹಾಯಕರು ಕೆಲಸಕ್ಕೆ ಸಮಾನ ವೇತನದ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ದ್ವಿತೀಯ ದರ್ಜೆ ಸಹಾಯಕ, ಇಬ್ಬರು ನೀರು ಸರಬರಾಜು ಸಹಾಯಕರು ಕನಿಷ್ಠ ವೇತನದಲ್ಲಿ, ಒಬ್ಬ ಹಿರಿಯ ಪ್ರೋಗ್ರಾಮ‌ರ್ ಗುತ್ತಿಗೆ ಆಧಾರದಲ್ಲಿ, ನೇರಪಾವತಿ ಮೂಲಕ 30 ಮಂದಿ ಪೌರಕಾರ್ಮಿಕರು ನಿತ್ಯ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ.

ಚಾಲಕರು, ನೀರು ಸರಬರಾಜುಸಹಾಯಕರು ಹೆಚ್ಚು ಹುದ್ದ:ನಗರಸಭೆಯಲ್ಲಿ ಟ್ರ್ಯಾಕ್ಟರ್, ಜೆಸಿಬಿ ಸೇರಿದಂತೆ ದೊಡ್ಡ ಇವೆ. ಚಾಲಕರ ಐದು ಕಾಯಂ ಹುದ್ದೆಗಳು ಮಾತ್ರ ಮಂಜೂರಾಗಿವೆ. ಆದರೆ ನಗರವು ಬೆಳೆದಂತೆ ನಗರಸಭೆಯ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಇವುಗಳ ಕಾರ್ಯನಿ- ರ್ವಹಣೆಗೆ ನಗರಸಭೆಯು ಹೆಚ್ಚಿನ ಸಂಖ್ಯೆಯಲ್ಲಿಯೇ ಚಾಲಕರನ್ನು ನೇಮಿಸಿಕೊಳ್ಳುವ ಅಗತ್ಯವಿದೆ. ಈ ಕಾರಣದಿಂದ 27 ಮಂದಿ ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.

ನೀರು ಸರಬರಾಜು ಸಹಾಯಕರ 30 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 28 ಕಾಯಂ ಹುದ್ದೆಗಳು ಖಾಲಿ ಇವೆ. ನಗರವು ಬೆಳೆದಂತೆ ನೀರು ಪೂರೈಕೆಯ ಹೊಣೆಯೂ ಹೆಚ್ಚುತ್ತದೆ. ಆದ ಕಾರಣ 46 ಮಂದಿಯನ್ನು ವಿವಿಧ ಆಧಾರದಲ್ಲಿ ನೇಮಕ ಮಾಡಿಕೊಳ್ಳ- ಲಾಗಿದೆ.

ಕೆಲಸ ಕಾರ್ಯಗಳಿಗೆ ನಗರಸಭೆಗೆ ನಾಗರಿಕರು ಬರುವರು. ಹೀಗೆ ಬರುವ ನಾಗರಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ಮುಖ್ಯ. ಆದರೆ ನಗರಸಭೆಯ- ಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕಿರಿಯ ಎಂಜಿನಿಯರ್ ಕಾಯಂ ಹುದ್ದೆಗಳು ಖಾಲಿ ಇವೆ.

ಕಂದಾಯ ವಸೂಲಿಯಲ್ಲಿ ಕರವಸೂಲಿಗಾ- ರರು ಮುಖ್ಯಪಾತ್ರವಹಿಸುತ್ತಾರೆ. ಇದರಿಂದ ನಗರಸಭೆಯ ಆದಾಯಹೆಚ್ಚುತ್ತದೆ. ಚಿಕ್ಕಬಳ್ಳಾಪುರ ನಗರಸಭೆಗೆ ಮಂಜೂರಾಗಿರುವ ಕರವಸೂಲಿಗಾರರ ನಾಲ್ಕು ಹುದ್ದೆಗಳಲ್ಲಿ ಎರಡು ಮಾತ್ರಭರ್ತಿಯಾಗಿವೆ. ಹೀಗೆ ನಗರಸಭೆಯ- ಲ್ಲಿ ಬಹಳಷ್ಟು ಕಾಯಂ ಹುದ್ದೆಗಳು ಭರ್ತಿಯಾಗಿಲ್ಲ.

Leave a Comment