ಒಂದು ಪರ್ಫೆಕ್ಟ್ ಥ್ರಿಲ್ಲರ್ ಬಂದ ಅಸಲಿ ಕಿಲ್ಲರ್!
ಕದ್ದಿಂಗಳು ಕಗ್ಗತ್ತಲು ಕಗ್ಗಲಲದ ರಾತ್ರಿಯಲ್ಲಿ ದೂರದಲ್ಲೆಲ್ಲೋ ಭರ್ರೆದು ಸಾಗುವ ಕಾರಿನೊಳಗೆ ಕುಳಿತವರ ಪಾಲಿಗೆ ಬಂತೈ ಬಂತೈ ಸುಂಟರಗಾಳಿ ಎನ್ನಿಸುವಂತೆ ಧುತ್ತನೆ ಎದುರಾಗುತ್ತಾ ಒಮ್ಮೆ ಕೈಯಲ್ಲಿ ಮತ್ತೊಮ್ಮೆ ಕೊಡಲಿಯಲ್ಲಿ ಬೆನ್ನ. ಹಿಂದೆ ಅಡಗಿಸಿಟ್ಟ ಪಿಸ್ತೂಳಿನಲ್ಲಿ ಮತ್ತೊಮ್ಮೆ ಮಾರುದ್ದದ ಬಂದೂಕಿನಲ್ಲಿ ಎದುರೆದುರೆ ಸಿಕ್ಕಿದರೆ ಕಣ್ಣಿನಲ್ಲಿ ಫೋನಲ್ಲಿ ಎದುರಾದರೆ ಅಬ್ಬರದ ಮಾತಿನಲ್ಲಿ ದುಷ್ಟರನ್ನು ಕೊಚ್ಚಿ ಕೆಡಹುತ್ತಾ ಸಂತೋಷವಾದಾಗ ಹಾಡುತ್ತಾ ಸಂಕಟವಾದಾಗ ಚಹಾ ಕುಡಿಯುತ್ತಾ . ಲೆಕ್ಕಾಚಾರ ಹಾಕುವಗ ಸಿಗರೇಟು ಸೇದುತ್ತಾ ಸುಮ್ಮನಿದ್ದಾಗ ದಿಟ್ಟಿಸಿ ನೋಡುತ್ತಾ ಮಿಕ್ಕವರು ಯೋಚಿಸುವ ಮುನ್ನವೇ ತನ್ನ ಯೋಚನೆಯನ್ನು ಕಾರ್ಯ ರೂಪಕ್ಕೆ ತರುತ್ತಾ ತನ್ನವರು ಮಾಡಿದ ತಪ್ಪುಗಳನ್ನು ಯೋಚಿಸದೇ ಅದನ್ನು ಸರಿ ಮಾಡುವ ತಂತ್ರಗಳನ್ನು ಯೋಚಿಸುತ್ತಾ ಸಿಳ್ಳೆ ಹಾಕುತ್ತಾ ಗುಳ್ಳೆನರಿಗಳ ಬಣ್ಣ. ಬಯಲು ಮಾಡುತ್ತಾ ಇನ್ನೇನು ಬೆಳಗಾಗುತ್ತದೆ ಎನ್ನುವಷ್ಟರಲ್ಲಿ ಕೊಡಬೇಕಾದವರಿಗೆ ಬೇಕು ಬೇಕಾದ್ದನೆಲ್ಲ ಕೊಟ್ಟು ಉಳಿಸಬೇಕಾದವರನ್ನು ಉರುಳಿಸಿ, ಹೊರಾಳಿಸಬೇಕಾದ್ದನ್ನು ಹೊರಳಿಸಿ, ರಕ್ಷಿಸಬೇಕಾದವರನ್ನು ರಕ್ಷಿಸಿ, ಶಿಕ್ಷಿಸಬೇಕಾದವರನ್ನು ಶಿಕ್ಷಿಸಿ ಹೊಸದಾರಿಯ ಹುಡುಕಿಕೊಂಡು ಹೊಸ ಹಾಡುಗಳ ಹಾಡಿಕೊಂಡು ದ್ರೋಹ ಬಗೆಯುವ ತನ್ನವರಿಗೆ ತಕ್ಕ ಪಾಠ ಕಲಿಸುತ್ತಾ ತನ್ನವರು ಮಾಡಿದ ತಪ್ಪುಗಳನ್ನು ಉದಾರವಾಗಿ ಕ್ಷಮಿಸುತ್ತಾ ನಾಯಕ ನಾದವನನ್ನು ಹೇಗಿರಬೇಕು ಅನ್ನುವ ನೀತಿ ಹೇಳುತ್ತ ಮುಂದೆ ನಡೆಯುವುದನ್ನೆಲ್ಲ ನಡೆಯುವ ಮೊದಲೇ ತಿಳಿಯುತ್ತಾ ರಂಜಿಸುತ್ತಾ ನಗಿಸುತ್ತಾ ಬೆರಗಿನಲ್ಲಿ ಮುಳುಗಿಸುತ್ತಾ ಅಭಿನಯಗಳಿಗೆ ಬಾಡೂಟ ಮಿಕ್ಕವರಿಗೆ ಲಾಡುಟ ಅಗೀಗ ಒದಗಿಸುತ್ತಾ ಮ್ಯಾಕ್ಸಿಮಮ್ ಥ್ರಿಲ್ಲನ್ನು ನೆತ್ತರಿಗೆ ತುಂಬುತ್ತಾ.ಮ್ಯಾಕ್ಸ್ ಸಿನಿಮಾ ಈ ಮೇಲಿನ ಪ್ಯಾರಾಗ್ರಾಫ್ ಥರವೇ ಎಲ್ಲಿಯೂ ಫುಲ್ ಸ್ಟಾಪ್ಆಗಲಿ ಕಾಮ ಆಗಲೀ.
ಇದನ್ನೂ ಓದಿ: ಚಿನ್ನ ವಾಪಸ್ ಕೊಟ್ಟ ವರ್ತೂರ್ ಪ್ರಕಾಶ್
ಇಲ್ಲದೇ ಸಾಗುತ್ತಲೇ ಇರುತ್ತದೆ ತಿರುವು ಮುರುವು ಚಿತ್ರಕತೆಯಲ್ಲೂ ಅತಿ ವೇಗ, ನೂರಾರು ಪಾತ್ರಗಳಿದ್ದರೂ .ಗೊಂದಲವಿಲ್ಲದೆ ನಿರೂಪಣೆ, ಎಷ್ಟು ಬೇಕೋ ಅಷ್ಟು ಮಾತು, ಕತೆಗೆ ತಕ್ಕ ಹಿನ್ನೆಲೆ ಸಂಗೀತ, ಕತ್ತಲಿಗೆ ಕನ್ನಡಿ ಹಿಡಿದು ತೋರುವ ಅದ್ಭುತವಾದ ಛಾಯಾಗ್ರಹಣ- ಮ್ಯಾಕ್ಸ್ ಚಿತ್ರವನ್ನು ಒಂದು ಅತ್ಯುತ್ತಮ ಥ್ರಿಲ್ಲರ್ ಆಗಿಸಿದೆ. ಸುದೀಪ್ ಇಡೀ ಚಿತ್ರವನ್ನು ತಾನಿಲ್ಲದೇ ಸಿನಿಮಾ ಇಲ್ಲ ಎಂಬಂತೆ ಆವರಿಸಿಕೊಂಡು ಬಿಟ್ಟಿದ್ದಾರೆ .ಕನ್ನಡದ ನಿರ್ದೇಶಕರಿಗಿಂತ ಚೆನ್ನಾಗಿ ಸುದೀಪ್ ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿರುವ ನಿರ್ದೇಶಕ ವಿಜಯ ಕಾರ್ತಿಕೇಯ ಸುದೀಪ್ ವಿಶ್ವರೂಪ ದರ್ಶನ ಮಾಡಿಸುತ್ತಾರೆ ಥ್ರಿಲ್ಲರ್ ಚಿತ್ರದೊಳಗಡೇ ಯುದ್ಧದ ನಡುವೆಯೇ ತಮಾಷೆ, ರೌದ್ರತೆಯ ನಡುವೆಯೇ ರಂಗಗೀತೆ, ಕ್ರೌರ್ಯದ ಮಧ್ಯೆಯೇ ಕತೆ, ಸಿಟ್ಟಿನ ಜತೆಗೇ ಸಮಾಧಾನ ಎಲ್ಲವನ್ನೂ ತಂದಿದ್ದಾರೆ . ರಾಜಮೌಳಿ ನಿರ್ದೇಶನದ ಈಗ ಚಿತ್ರದ ನಂತರ ವೈವಿಧ್ಯ ಮತ್ತು ವೇಗ ತುಂಬಿರುವ ಪಾತ್ರ ವೊಂದು ಸುದೀಪ್ ಅವರಿಗೆ ಮತ್ತೊಮ್ಮೆ ಸಿಕ್ಕಿದೆ. ಆ ಅವಕಾಶವನ್ನು ಸುದೀಪ್ ಸಮರ್ಥವಾಗಿ ಬಳಸಿಕೊಂಡು ಚಿತ್ರದಲ್ಲಿ ಬರುವ ಎಲ್ಲರನ್ನೂ ಎಲ್ಲವನ್ನೂ ಬೆಳಗಿದ್ದಾರೆ. ಸ್ಟಾರ್ ನಟರಿಗೆ ಎಂಥಾ ಕಥೆ ಮಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡವರಂತೆ ಪರಭಾಷಾ ಚಿತ್ರಗಳನ್ನು ತಂತ್ರಜ್ಞಾನದ ಎಲ್ಲಾ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಕತೆ ಹೇಳುತ್ತಾ ಜನರನ್ನು ರಂಜಿಸುವ
ತ್ತಿರುವಹೊತ್ತಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯ ಸುದೀಪ್ ಅವರನ್ನು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಗಂಟೆ 12 ನಿಮಿಷಗಳ ಕಾಲ ಏನಾಯಿತು ಅಂತ ಬೆರಗಾಗುತ್ತಾ ನೀವು ಚಿತ್ರಮಂದಿರದಿಂದ ಹೊರಗೆ ಬರುತ್ತೀರಿ ಅನ್ನುವುದೇ ಮ್ಯಾಕ್ಸ್ ಚಿತ್ರದ ಮ್ಯಾಕ್ಸಿಮಮ್ ಎಫೆಕ್ಟ್ ಮತ್ತು ಎಫರ್ಟ್.