ಕುಂಭಮೇಳದಲ್ಲಿ ನಾವು ಲೀನವಾದಾಗ….

ಕುಂಭಮೇಳದಲ್ಲಿ ನಾವು ಲೀನವಾದಾಗ….

ಪ್ರಯಾಗ ರಾಜದಲ್ಲಿನ ಮಹಾ ಕುಂಭಮೇಳಕ್ಕೆ ಹೋಗಿ ಮೌನಿ ಅಮಾವಾಸ್ಯೆಯಂದು ಮಾಡಿದ ಅಮೃತ ಸ್ನಾನದ ಸ್ಮರಣೆಯೇ ಈ ಲೇಖನ.144 ವರ್ಷಗಳಿಗೊಮ್ಮೆ ಮರುಕಳಿಸುವ ಈ ಮಹಾ ಕುಂಭ ಪರ್ವಕ್ಕೆ ಅರಸಹಾಸ ಪಟ್ಟು ಮೂರರಷ್ಟು ಹಣ ಚೆಲ್ಲಿ ಅಂತೂ ಕೋಣೆಗಳು ಟ್ಯಾಕ್ಸ್ ವ್ಯವಸ್ಥೆ ಇತ್ಯಾದಿಗಳನ್ನು ಮಾಡಿಕೊಂಡೆವು.
ವಿಮಾನ ಮಾರ್ಗವಾಗಿ ಕಾಶಿಗೆ ತಲುಪಿದಾಗ ಅಲ್ಲಾಗಲ್ಲೇ ಪ್ರಯಾಗದ ಕುಂಭೋತ್ಸವ ಗಾಳಿ ಬೀಸುತ್ತಿತ್ತು. ಎಲ್ಲೆಲ್ಲೂ ಜನ! ಕಿಕ್ಕಿರಿದ ವಸತಿ ಗೃಹ ,ಉಪಹಾರ ಮಂದಿರ ,ರಸ್ತೆ ,ದೇಗುಲಗಳ ಮಧ್ಯೆ ನಮ್ಮ ಊಟವಾಸ್ ಸತಿ ಗಂಗಾ ಸ್ನಾನ, ನೌಕಾ ವಿಹಾರಗಳೊ ಸಂಕಟ ಮೋಚನ ಹನುಮಾನ್, ಕುಷ್ಮಾಂಡಾ ದೇವಿಯರ ದರ್ಶನಗಳು ಸಾಂಗವಾಗಿ ನೆರವೇರಿದವು. ಮರುದಿನ ಕಾಶಿ ವಿಶ್ವನಾಥ ದರ್ಶನಕ್ಕಾಗಿ ತಿಂಗಳ ಹಿಂದೆಯೇ ಪಡೆದಿದ್ದ ಸುಗಮ ದರ್ಶನ ಚೀಟಿಗಳೆಲ್ಲ ರದ್ದಾಗಿದ್ದವು. ಅಷ್ಟು ಜನಸಂದಣಿ! ಹೇಳಿಕೇಳಿ ಕೃಷ್ಣ ತ್ರಯೋದಶಿ, ಮಾಸ ಶಿವರಾತ್ರಿ, ಸೋಮವಾರ ಕುಂಭ ಸಂದರ್ಭ! ಅಂಗದನ ಬಾಲದಂತೆ ಬೆಳೆದಿದ್ದ ನಾಲ್ಕೈದು ಕಿ.ಮೀ.ಗಳ ಉದ್ದೇನೆಯ ಸಾಲಿನಲ್ಲಿ ನಿಂತು ಸುಮಾರು 9-10 ಗಂಟೆ ಕಾಲ ಕಾದು ,ನಡೆ ನಡೆದು ಸಂಧ್ಯಾ ಪ್ರದೋಷ ಸಮಯದಲ್ಲಿ ವಿಶ್ವನಾಥನ ದರ್ಶನ ಮಾಡಿ ಧನ್ಯರೆನಿಸಿದೆವು.

ಮರುದಿನ ಬಹಳ ಬೇಗನೆ ಟಾಕ್ಸಿ ಮಾಡಿಕೊಂಡು ಪ್ರಯಾಗಕ್ಕೆ ಹೊರಟೆವಾದರು, ವಿಪರೀತ ವಾಹನದಿಂದಾಗಿ ನಾವು ತಲುಪಿದ್ದು ಮಧ್ಯಾಹ್ನ ಒಂದಕ್ಕೆ. ಹೈವೇ ನಲ್ಲೇ ವಾಹನವನ್ನು ತಡೆಯಲಾಯಿತು. ರಿಕ್ಷಾದಲ್ಲಿ ಎರಡು ಮೂರು ಕಿ.ಮೀ. ಪ್ರಯಾಣಿಸಿ ಅಲ್ಲಿಂದ 16 ಕಿ.ಮೀ. ದೂರವಿದ್ದ ನಮ್ಮ ಹೋಟೆಲ್ ವರೆಗೂ ಸಾಮಾನುಗಳನ್ನು ಹೊರತು ಎಳೆಯುತ್ತ ನಡೆಯಬೇಕಾಯಿತು. ನಾಲ್ಕಾರು ಕಿ.ಮಿ. ನಡೆದ ಮೇಲೆ ಖಾಲಿ ತಳ್ಳುಗಾಡಿಯ ಹುಡುಗನೊಬ್ಬ ಕಂಡ. ಅವನನ್ನು ಗೋಗೆರೆದು ಒಪ್ಪಿಸಿ ಸಾವಿರ ರೂಪಾಯಿ ಇತ್ತು ನಮ್ಮ ಸಾಮಾನನ್ನು ಗಾಡಿಯ ಮೇಲಿರಿಸಿ ನಾವೇ ತಳ್ಳುತ್ತಾ ನಡೆಗೆಯನ್ನು ಮುಂದುವರೆಸಿದೆವು. ಪ್ರಯಾಗದ ಮುಖ್ಯಮಾರ್ಗಕ್ಕೆ ಬರುತ್ತಲೇ, ಕೈಕಾಲು ಆಡಿಸಲೂ ಆಗದಷ್ಟು ಜನ ಸಂದಣಿಯಲ್ಲಿ ಲೀನವಾದೆವು. ಸರಸರನೇ ಕೈಕಾಲು ತೊಳೆದು ಮತ್ತೆ ಎರಡು-ಮೂರು ಕಿ.ಮೀ. ನಡೆದು, ಸಂಜೆ 5:00 ಊಟ ಮಾಡಿ ಗಂಗಸ್ನಾನ ಘಟ್ಟಕ್ಕೆ ಮತ್ತೆ ಎರಡು ಮೂರು ಕಿ.ಮೀ.ನಡೆದವು. ಇಲ್ಲಿಂದ ಮತ್ತೆ ಜನ ಪ್ರವಾಹದಲ್ಲಿ ಮುಳುಗಿದೆವು! ಕೋಟಿಗಟ್ಟಲೆ ಜನ ಒಂದೆಡೆ ಸೇರುವುದು ಹೇಗಿತ್ತೋ ಎನ್ನುವುದನ್ನು ಮೊದಲ ಸಲ ಕಂಡೆ! ಅಮಾವಾಸ್ಯೆ ಬರುವತನಕ ಹಾಗೆಯೇ ಇರಬೇಕಿತ್ತು. ಆದರೆ ಅಲ್ಲಿ ನಮಗೆ ಆದದ್ದು ಕಸಿಮಿಸಿ ಅಲ್ಲ, ಆನಂದ! ಹರ ಹರ ಗಂಗೆ. ಹರ ಹರ ಮಹದೇವ, ಜೈ ಶ್ರೀ ರಾಮ್ ಘೋಷಣೆಗಳಲದೇ ಸಂಭ್ರಮ!’ನಾವು ಅಷ್ಟೊಂದು ನಡೆಯಬೇಕಾಗಿತ್ತಲ್ಲಪ್ಪಾ!’ಎಂಬ ಕೊರಗನ್ನು ಅಳಿಸುವ ದೃಶ್ಯ ಅಲ್ಲಿ ಕಾದಿತ್ತು.

ಇದನ್ನೂ ಓದಿ: ಟ್ರಂಪ್ ಕ್ಷಣ ಚಿತ್ತ, ಕ್ಷಣ ಪಿತ್ತ

ಹಳ್ಳಿ ನಗರಗಳಿಂದ ಬರಿಗಾಲಲ್ಲಿ ಅಥವಾ ತುಂಬಿದ ಟ್ರಂಕ್ ಗಳಲ್ಲಿ ಅಲ್ಲಿಗೆ ಬಂದ ಲಕ್ಷೋಪ ಲಕ್ಷ ಹಳಿ ಜನರು ಪೈಕಿ ಗರ್ಭಿಣಿಯರು, ಕೈ ಕೂಸುಗಳೂ,ಪುಟ್ಟ ಬಾಲಕರು , ತೊಂಭತ್ತರ ವಯಸ್ಕರೂ, ಕೊಲೂರಿ ನಡೆಯುತ್ತಿದ್ದರು, ಕುರುಡರು, ಕೈ ಕಾಲುಗಳಿಲ್ಲದ ಉನಾಂಗರು, ಮಕ್ಕಳನ್ನು ಹೆಗಲಲ್ಲಿ ಕಂಕಳಲ್ಲಿ ಹೊತ್ತವರು, ತಲೆಯ ಮೇಲೆ ಬಟ್ಟೆ ಬರೆ, ಹಾಸಿಗೆ, ಒಲೆ ಪಾತ್ರೆಗಳ ಹೊರೆಯನ್ನು ಹೊತ್ತು ನಡೆಯುತ್ತಿದ್ದರು,… ಮುಂತಾದವರು ಇದ್ದರು. ಇಷ್ಟು ಸಾಲದೆಂದು ಜತೆಗೆ ಕೊರಳಿಗೆ ಹಾರ್ಮೋನಿಯಂ- ಮೃಂದಂಗಗಳನ್ನು ತೂಗು ಹಾಕಿಕೊಂಡು ಭಜನೆ ಜಯಗೋಷಗಳನ್ನು ಮಾಡುತ್ತಾ ಕುಣಿಯುತ್ತ ನಡೆಯುತ್ತಿದ್ದರು ಇದ್ದರು! ಕೋಣೆ ವಸತಿಗೃಹ ವಾಹನಗಳ ಅನುಕೂಲಗಳನ್ನು ಕೋರದೆ, ಬೀದಿಗಳಲ್ಲಿ ಮಲಗಿ, ಛತ್ರಗಳಲ್ಲಿ ತಿಂದು, ದೇಹ ಶ್ರಮವನ್ನು ಒಂದಷ್ಟು ಲೆಕ್ಕಿಸದೆ, ಕೇವಲ ಪ್ರಯಾಗ ಗಂಗಾ ತೀರ್ಥಾನು ಭವನಷ್ಟೇ ಅನುಭವಿಸುತ್ತಾ, ಮಾತು ಮಾತಿಗೂ ‘ಹರ -ಹರ- ಗಂಗೆ’ಎನ್ನುತ್ತಿದ್ದ ಆ ಸರಳ ಹಳ್ಳಿಗರನ್ನು ನೋಡುತ್ತಿದ್ದಾಗ, ನಮ್ಮ ಸುಸ್ತು, ಆಸಹನೆ, ಗುಣಗಾಟಗಳೆಲ್ಲ ಪರಾರಿ ! ‘ದೇಹ ಸುಖವನ್ನು ಮರೆತಾಗಲೇ ಆತ್ಮ ಸುಖ’ಎನ್ನುವ ವೇದಾಂತ ಸಂದೇಶವು ಈ ಹಳ್ಳಿಗರ ಬಹುತೇಕ ಸ್ಪರ್ಧೆಯಲ್ಲಿ ಸಾಕಾರವಾಗಿತ್ತು! ನಮ್ಮನ್ನು ಸೆಳೆದು ಭಕ್ತಿಯ ಕಡಲಲ್ಲಿ ಮೀಯೀಸಿತು.

ಸುಮಾರು 50 ಸಾವಿರದಷ್ಟು ಪೊಲೀಸರು ಯಾರನ್ನು ಗದರದೆ ನೂಕದೆ ಶಾಂತವಾಗಿ ಅಷ್ಟು ಜನಸಂದಣಿಯನ್ನು ನಿರ್ವಹಿಸುತ್ತಿದ್ದ ಪರಿ ಆಚರಿಗೊಳಿಸಿತ್ತು! ಅವರ ಆಶ್ರಮ, ತಾಳ್ಮೆ, ದಕ್ಷತೆಗಳಿಗೆ ತಲೆಬಾಗಲೇಬೇಕು. ಎಲ್ಲೂ ದಾರಿಯಲ್ಲಿ ಮಲಗಬೇಡಿ ಕೂರಬೇಡಿ, ಮಿಂದು ನಡೆದು ಹೋಗುತ್ತೀರಿ. ಸಂಗಮಘಾಟ್ ಗೆ ಪ್ರವೇಶವಿಲ್ಲ. ಬೇರೆ ಕಡೆ ಸ್ನಾನ ಮಾಡಿ ಎನ್ನುತ್ತಾ ಪೊಲೀಸರು ಕೂಗಿ ಹೇಳುತ್ತಲೇ ಇದ್ದರೂ, ಅವಿಧೇಯರು ಅಲ್ಲಲ್ಲಿ ಕೂತು, ಮಲಗಿ, ಬ್ಯಾರಿಕೇಡ್ ಗಳನ್ನು ತಳ್ಳಿ, ಪೊಲೀಸರೊಡನೆ ಜಗಳವಾಡಿ, ಸಂಗಮದತ್ತ ನುಗ್ಗಿದ್ದರಿಂದ ದುಃಖಕರವಾದ ಆ ಸಾವು ನೋವುಗಳ ಘಟನೆಯಾಯಿತು. ಆದರೆ, ಹೆಚ್ಚಿನ ವರಂತೆ ನಾವೂ ಪೊಲೀಸರಿಗೆ ವಿಧೇಯರಾಗಿದ್ದು, ಅಮೃತ ಸ್ನಾನವನ್ನು ಸಂಗಮವಾಗಿ ಮಾಡಿ ಬಂದೆವು. ಪ್ರಯಾಗ ಕ್ಷೇತ್ರದ ತಪಸ್ ತರಂಗಗಳೂ, ಮೌನಿ ಅಮಾವಾಸ್ಯೆಯ ಪುಣ್ಯತಿಥಿಯ ಅನುಗ್ರಹವೂ, ಅಮೃತಸ್ಥಾನದ ಆ ಪುಳಕವೂ, ಗಂಗೆಯ ಪುಣ್ಯಸ್ಪರ್ಶವೂ, ಅಲ್ಲಿ ನಡೆದ ಸಕಲ ದೇವ ಪಿತೃ ಮುನಿಗಣದ ಆಶೀರ್ವಾದವು ನಮ್ಮದಾದ ವೆಂಬ ಆ ಭಾವದ ಉತ್ಕಟತೆಯನ್ನು ಬಣ್ಣಿಸಲು ಪದಗಳಿಲ್ಲ. ದೇಶಕ್ಕೂ, ಧರ್ಮಕ್ಕೂ, ಸೈನರಿಗು, ನಮ್ಮ ಪ್ರಧಾನ ನಾಯಕರಿಗೂ, ಸಜ್ಜನರಿಗೂ, ಪಿತೃ ಗಳಿಗೂ, ಪರಿವಾರ ಬಂದು ಮಿತ್ರರಿಗೂ, ಪಶು ಪಕ್ಷಿ ವನಸ್ಪತಿಗಳಿಗೂ ನಮ್ಮ ಅಮೃತ ಸ್ನಾನದ ಪುಣ್ಯ ಫಲವನ್ನು ಮಾನಸಿಕವಾಗಿ ಹಂಚುತ್ತ ಅಗ್ಯವಿತ್ತೆವು.

ಕುಂಭಮೇಳದ ಪರಿಸರವೇ ದಿವ್ಯ ನಂದಮಯ! ಎಲ್ಲೆಲ್ಲೋ ಭಜನೆ, ಜಯ ಘೋಷ, ಹೋಮ, ಪೂಜೆ, ಪಾರಾಯಣ, ವೇದಪುರಾಣ ರಾಮಾಯಣ ಭಗವದ್ಗೀತಾ ಪ್ರವಾಚನಗಳು, ಜಪಾನುಷ್ಟಾನಗಳು, ಅನ್ನದಾನ, ವಸ್ತ್ರದಾನಗಳು ಭರದಿಂದ ನಡೆಯುತ್ತಿವೆ! ಹಲವರಿಗೆ ಮಂತ್ರ ದೀಕ್ಷೆ ಬ್ರಹ್ಮಚರ್ಯ ಸನ್ಯಾಸಿ ದೀಕ್ಷೆಗಳು ದಕ್ಕುತ್ತವೆ. ಪ್ರಯಾಗದ ನದಿಯಾಚೆಯ ಕುಂಭನಗರಿಯಲ್ಲಂತೂ ಸನಾತನ ವಿಚಾರಗಳ ಅದೆಷ್ಟೋ ಪ್ರದರ್ಶನಿಗಳೂ, ಪ್ರವಚನ ಗೋಷ್ಠಿಗಳು, ಸಾಧು ಸಂದರ್ಶನಗಳೂ, ಸಂಕೀರ್ತನೆ, ಕುಣಿತಗಳು ಸಂಭ್ರಮಗಳು. ರಾತ್ರಿಯಂತೂ ನೂರ್ಮಡಿಗೋಂಡ ದೀಪಾವಳಿಯಂತೆ, ಗಂಗೆಯಲ್ಲಿ ಪ್ರತಿಬಿಂಬಿಸುವ ಹೋಗಿಗಟ್ಟಲೆ ದೀಪಗಳ ಬೆಳಕಿನಾಟ!

ಅಲ್ಲೊಬ್ಬರು ಇನ್ನೊಬ್ಬರು ದುಡ್ಡು ಕೇಳುವ ಡೋಂಗಿ ಬಾಬಾಗಳು, ಸರಗಳ್ಳರು, ದುಡ್ಡು ಕೇಳುವ ವ್ಯಾಪಾರಿಗಳು ಇದ್ದರು, ಹೆಚ್ಚಿನವರು ಅಲ್ಲಿ ತಮ್ಮ ಪಾಡಿಗೆ ದೈವಾನು ಸಂಧಾನ ದಾನ ಧರ್ಮ ಸೇವೆ ಜನರ ಸಹಾಯ ಅನ್ನದಾನಾದಿಗಳಲ್ಲಿ ತೊಡಗಿದವರೇ. ವಯಸ್ಕ ಅಪ್ಪ ಅಮ್ಮ ಅತ್ತೆ ಮಾವಂದಿರನ್ನು ಬುಟ್ಟಿಗಳಲ್ಲಿ ಕೊಡಿಸಿ ಕಾವಡಿಯಂತೆ ಹೊತ್ತೊಯ್ಯುವವರೂ, ಅನ್ನದಾನದ ಚಪ್ಪರಗಳಲ್ಲಿ ಅಡುಗೆ ಬಡಿಸುವಿಕೆಯಲ್ಲಿ ಶ್ರಮಿಸುವವರೂ, ಜನರು ಬಿಸಾಡುವ ಕಾಗದ, ಬಾಟಲಿ, ತ್ಯಾಜ್ಯಗಳನ್ನು ಅಲ್ಲಲ್ಲಿ ಹಾಕಿ ತೆಗೆಯುವವರು ಅದೆಷ್ಟೋ ಮಡಿ! ನಮ್ಮಿಂದ ವಾಹಕರು ಹೆಚ್ಚು ದುಡ್ಡು ಕೀಳದಂತೆ ಪೊಲೀಸರು ನಿಯಂತ್ರಿಸುತಿದ್ದರು. ಕಲಿಯುಗದಲ್ಲಿ ಸತ್ಯಯುಗದ ಮಿನುಕು ನೋಟವನ್ನೇ ತಂದಿದೆ ಈ ಮಹಾಕುಂಭ!

ಮರುದಿನ ಪ್ರಯಾಗದಿಂದ ಆಚೆ ಬರುವಾಗಲೂ ಜನಸಮುದ್ರ. ಟ್ರಾಫಿಕ್ ಜಾಮ್. ನಮ್ಮ ಚತುರ ಚಾಲಕನು ಕಚ್ಚ ರಸ್ತೆಗಳಲ್ಲಿ ಹಾದು, ಹಳ್ಳಿ- ಗದ್ದೆ- ಪೈರುಗಳಲ್ಲಿ ತಿರುಗಾಡಿಸಿ, ಸುಮಾರು 80 ಕಿ.ಮೀ.ಗಳ ಬಳಸುದಾರಿಯಲ್ಲಿ ಒಯ್ದು ನಮ್ಮನ್ನು ರಾತ್ರಿ 11ಕ್ಕೆ ಅಯೋಧ್ಯೆಗೆ ತಲುಪಿಸಿದ್ದನು! ಅಂದಿಗೆ ಅವನೇ ನಮ್ಮ ಪಾಲಿಗೆ ಪಾರ್ಥಸಾರಥಿಯೆನಿಸಿದೆ!

ಅಯೋಧ್ಯೆಯಲ್ಲೂ ಜನಸಮುದ್ರದ ನಡುವೆ ಶ್ರೀ ರಾಮ ಲಲ್ಲಾನ ದರ್ಶನವಾಯಿತು. ನಂದಿ ಗ್ರಾಮದ ಭರತ ದೇಗುಲವನ್ನೂ ಕಂಡೆವು. ಮರುದಿನ ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ, ಸರಯೂ ತೀರದ ಲತಾ ಮಂಗೇಶ್ವರ್ ಚೌಕ್ ಬೀದಿಯಲ್ಲಿ ತಿಂದ ಬಿಸಿ ಬಿಸಿ ಆಲೂ ಪರೋಟದ ಅದ್ಭುತ ಸವಿಯು ನಮ್ಮ ಈ ಸ್ಮರಣೀಯ ಪ್ರವಾಸಕ್ಕೆ ಉದ್ಯಾನದ ಔತಣದಂತಿತ್ತು! ಬೆಂಗಳೂರು ತಲುಪಿದ ಮೇಲೂ ನಮ್ಮಲ್ಲಿ ಆಯಾಸ ಕ್ಕಿಂತ ಉಲ್ಲಾಸವೇ ಜಾಸ್ತಿ! ನಾಲ್ಕಾರು ದಿನಗಳು ಕಳೆದರು, ಕಣ್ಮುಚ್ಚಿದರೂ ತೆರೆದರು ಗಂಗೆ, ಭಕ್ತ ಸಮೂಹ, ಗಂಗ ಸ್ನಾನ ಜಯ ಘೋಷ, ನಮ್ಮ ಸಂಕೀರ್ತನೆ ಗಳದ್ದೇ ಗುಂಗು! ಮಹಾಕುಂಭವು ನಮ್ಮ ಜೀವನದ ಕುಂಭನುಭಾವವೇ ಸರಿ! ಹರ ಹರ ಗಂಗೇ!

Leave a Comment