‘ಸನ್ಯಾಸಿಗಳು ಧರ್ಮರಕ್ಷಣೆಗೆ ಸೈನಿಕರಾಗಲಿ ‘
ಪ್ರಕೃತಿ ನಗರ (ಸೇಡಂ):’ ಕಾವಿ ಧರಿಸಿದ ಸನ್ಯಾಸಿಗಳು ಪ್ರಸಂಗ ಬಂದರೆ ಧರ್ಮ ಮತ್ತು ದೇಶದ ರಕ್ಷಣೆಗಾಗಿ ಸೈನಿಕರಗಲು ಸಿದ್ದರಾಗಬೇಕು ,ಎಂದು ಶ್ರೀಶೈಲ ಪೀಠದ ಚೆನ್ನ ಸಿದ್ದರಾಮ ಪಂಡಿತರಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿ ಗುರುವಾರ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ದೇಶ, ಧರ್ಮ, ಸಂಸ್ಕೃತಿ, ಸಮಾವೇಶದಲ್ಲಿ ಅವರು ಮಾತನಾಡಿದರು .ಸೈನಿಕರು ದೇಶದ ಗಡಿ ಕಾಯುವವರಿದಂತೆ, ಬೇರೆ ಬೇರೆ ಪರಂಪರೆಯ ಮಠಾಧೀಶರು ಧರ್ಮ ಮತ್ತು ಸಂಸ್ಕೃತಿಯ ಕಾವಲುಗಾರನಾಗಿ ದ್ದಾರೆ . ದೇಶ ಉಳಿದರೆ ಮಾತ್ರ ನಮ್ಮ ಧರ್ಮಗಳು ಮತ್ತು ಸಂಸ್ಕೃತಿ ಉಳಿಯುತ್ತವೆ .ಹೀಗಾಗಿ, ಧರ್ಮ ಮತ್ತು ಸಂಸ್ಕೃತಿಯ ಜೊತೆಗೆ ದೇಶ ಉಳಿಯಲು ಎಲ್ಲಾ ಮಠಾಧೀಶರು ಪಣ ತೊಡಬೇಕು.
ಅದು ನಮ್ಮೆಲ್ಲರ ಪರಮ ಕರ್ತವ್ಯವು ಆಗಬೇಕು’ ಎಂದರು. ‘ದೇಶದಲ್ಲಿರುವ ಎಲ್ಲಾ ಧರ್ಮಗಳು ಭಾರತದ ಧರ್ಮಗಳೇ ಆಗಿವೆ. ದೇಶದಲ್ಲಿರುವ ಮುಸ್ಲಿಂ ,ಕ್ರಿಶ್ಚಿಯನರು ತಾವು ಭಾರತರಿಯರು ಎಂದು ಭಾವ ಇಟ್ಟುಕೊಳ್ಳಬೇಕು. ರಾಷ್ಟ್ರ ಧ್ವಜ ಹಿಡಿಯುವರು, ಪಾಕಿಸ್ತಾನವನ್ನು ಬೆಂಬಲಿಸುವವರು ಯಾವುದೇ ಧರ್ಮದವರಾಗಿದ್ದರು ಅವರು ದೇಶದ್ರೋಹಿಗಳು ಎಂದು ಹೇಳಿದರು. ಭಾರತೀಯ ವಿಕಾಸ ಸಂಗಮದ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಮಾತನಾಡಿ, ದೇಶಭಕ್ತಿ ದುರ್ಬಲವಾಗಿ ದೇಶದಲ್ಲಿ ಅರಾಜಕತೆ ಬರಬಾರದು ಎಂದಾದರೆ ಧರ್ಮ ಗುರುಗಳು ನಮ್ಮ ಧರ್ಮ ದಂಡದ ಮೂಲಕ ದೇಶ ಆಳುವವರನ್ನು ನಿಯಂತ್ರಿಸಬೇಕು. ಭದ್ಧವಾದ ದೇಶಕಟ್ಟಲು ಶಕ್ತಿಯುತವಾದ ಧರ್ಮದಂಡದ ಅವಶ್ಯವಿದೆ ಎಂದು ಹೇಳಿದರು .
ಇದನ್ನೂ ಓದಿ: ಶೂಟಿಂಗ್: ಗಮನ ಸೆಳೆದ ನೀರಜ್ ಸಾಧನೆ
ಸೇಡಂನಲ್ಲಿ ಗುರುವಾರ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ದೇಶ ಧರ್ಮ ಸಂಸ್ಕೃತಿ ಸಮಾವೇಶದಲ್ಲಿ ಶ್ರೀಶೈಲ ಪೀಠದ ಚನ್ನ ಸಿದ್ದರಾಮ ಪಾಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಹಾರಕೂಡದ ಚೆನ್ನವೀರ ಶಿವಾಚಾರ್ಯರು, ಸದಾಶಿವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಶಂಕರ ಶಿವಚಾರ್ಯರು ಉಪಸ್ಥಿತರಿದ್ದರು.