ಎಸ್ಐಪಿ ಹೂಡಿಕೆ ನಿಲ್ಲಿಸಬೇಡಿ
ಸಾಧಾರಣ ಗಳಿಕೆ ಕೊಡುತ್ತಿದ್ದ ಮ್ಯೂಚುವಲ್ ಫಂಡ್ ವೂಂದರಲ್ಲಿ ಮೂರು ತಿಂಗಳ ಹಿಂದೆ ನೀವು ಒಂದು ಲಕ್ಷ ಹೂಡಿಕೆ ಮಾಡಿದ್ದಾರೆ ಅದು ಇವತ್ತಿಗೆ ಸುಮಾರು 93,000ಕ್ಕೆ ಇಳಿಕೆಯಾಗಿರುತ್ತಿತ್ತು . ಹೌದು, ಕಳೆದ ಮೂರು ತಿಂಗಳಲ್ಲಿ ಎಲ್ಲಾ ಈಕ್ವಿಟಿ ಮ್ಯೂಚುವಲ್ ಫಂಡ್ ಗಳು ಸಹ ಶೇ 7ರಿಂದ ಶೇ 13ರವರೆಗೂ ಕುಸಿತ ಕಂಡಿವೆ. ಆರು ತಿಂಗಳ ಅಂಕಿ – ಹಂಸ ನೋಡಿದಾಗಲೂ ಮಾರುಕಟ್ಟೆಯಲ್ಲಿ ಶೇ 5ರಿಂದ ಶ್ರೀ 10ರಷ್ಟು ಇಳಿಕೆಯಾಗಿರುವುದು ಕಂಡು ಬರುತ್ತದೆ. ಷೇರು ಮಾರುಕಟ್ಟೆಯ ಸೂಚ್ಯಂಕಗಳ ಗಣನೀಯ ಕುಸಿತವೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಷೇರುಪೇಟೆ ಸೂಚ್ಯಂಕ ನಿಫ್ಟಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಅಂದಾಜು ಶೇ 8ರಷ್ಟು ಕುಸಿತ ದಾಖಲಿಸಿದೆ. 2024ರ ಸೆಪ್ಟೆಂಬರ್ ನಿಂದ ಲೆಕ್ಕಚಾರ ತೆಗೆದುಕೊಂಡರೆ ಇವರಿಗೆ ನಿಫ್ಟಿ ಸೂಚ್ಯಂಕ ಶೇ 11ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ. ಆದರೆ ಅಸಲಿಗೆ ಸ್ಟಾಕ್ ಮಾರ್ಕೆಟ್ ಕುಸಿತಕ್ಕೆ ಕಾರಣವೇನು?
ಮಾರುಕಟ್ಟೆ ನಕರಾತ್ಮಕ ಹಾದಿಯಲ್ಲಿರುವಾಗ ಮ್ಯೂಚುವಲ್ ಫಂಡ್ ಎಸ್ ಐ ಪಿ ಹೂಡಿಕೆಗಳನ್ನು ನಿಲ್ಲಿಸಬೇಕಾ? ಬನ್ನಿ, ಪ್ರಸ್ತುತ ಲಕ್ಷಾಂತರ ಹೂಡಿಕೆದಾರರನ್ನ ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ . ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?: ಶೇರುಪೇಟೆ ಕುಸಿತಕ್ಕೆ ಅನೇಕ ಜಾಗತೀಕರಣ ಮತ್ತು ದೇಶಿಯ ವಿದ್ಯಾಮಾನಗಳು ಕಾರಣವಾಗಿವೆ. ಈಗ ಒಂದೊಂದೇ ಅಂಶಗಳನ್ನು ವಿವರವಾಗಿ ವಿಶ್ಲೇಷಣೆ ಮಾಡೋಣ. * ವಿದೇಶಿ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ : ಭಾರತೀಯ ಷೇರು ಮಾರುಕಟ್ಟೆಯು, ದೇಶಿಯ ಹೂಡಿಕೆದಾರರು ಮತ್ತು ವಿದೇಶಿ ಹೂಡಿಕೆದಾರ ಮೇಲೆ ಅವಲಂಬಿತವಾಗಿದೆ. ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಮೊತ್ತದ ಹೂಡಿಕೆ ಹಣವನ್ನು ಇತ್ತೀಚೆಗೆ ಹಿಂತೆಗೆದುಕೊಂಡಿದ್ದಾರೆ.
ಜನವರಿ ತಿಂಗಳಲ್ಲಿ ಈ ವರೆಗೆ ವಿದೇಶಿ ಸಂಸ್ಥಿಕ ಹೂಡಿಕೆದಾರರು 64,154 ಕೋಟಿ ಹಿಂತೆಗೆದುಕೊಂಡಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ : ಅಮೇರಿಕಾ ಫೆಡರಲ್ ಬ್ಯಾಂಕ್ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದಾರೆ ಅದರ ಅನುಕೂಲ ಭಾರತೀಯ ಷೇರುಪೇಟೆಗೆ ಆಗುತ್ತದೆ. ಆದರೆ ಡಿಸೆಂಬರ್ ನಲ್ಲಿ ಅಮೆರಿಕದಲ್ಲಿ ಉದ್ಯೋಗ ಬೆಳವಣಿಗೆ ದರ ಉತ್ತಮಗೊಂಡಿರುವುದರಿಂದ ಬಡ್ಡಿ ದರ ಇಳಿಕೆ ನಿರ್ಧಾರವನ್ನು ಅಮೆರಿಕ ಫೆಡರಲ್ ಬ್ಯಾಂಕ್ ಮುಂದೂಡುವ ಸಾಧ್ಯತೆಯಿದೆ. ಬಡ್ಡಿ ದರ ಇಳಿಕೆ ಮಾಡದೆ ಇದ್ದಾಗ ಅಮೆರಿಕ ಡಾಲರ್ ಬಲಗೊಳ್ಳುತ್ತದೆ. ಭಾರತದ ರೂಪಾಯಿಯ ಮೌಲ್ಯ ಕುಸಿತವಾಗುತ್ತದೆ. ಇಂತಹ ಸಂದರ್ಭದಲ್ಲಿ ವಿದೇಶಿ ಸಂಸ್ಥಿಕ ಹೂಡಿಕೆದಾರರು ಭಾರತೀಯ ಷೇರುಪೇಟೆಯಿಂದ ಹೊರ ನಡೆಯುತ್ತಾರೆ.
ಮಂದಗತಿಯ ಆರ್ಥಿಕ ಬೆಳವಣಿಗೆ : 2025ರ ಜಿಡಿಪಿ ಬೆಳವಣಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 6.6ಕ್ಕೆ ಇಳಿಕೆ ಮಾಡಿದೆ. ಭಾರತದ ಆರ್ಥಿಕ ಸಮೀಕ್ಷೆಯಲ್ಲಿ ಜಿಡಿಪಿ ಬೆಳವಣಿಗೆ ದರ 7ರಷ್ಟರಲಿದೆ ಎಂದು ಅಂದಾಜು ಮಾಡಲಾಗಿತ್ತು. ಜಿಡಿಪಿ ಹೆಚ್ಚಳವಾದರ ಆರ್ಥಿಕ ಬೆಳವಣಿಗೆಯಗಿ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಜಿಡಿಪಿ ಕುಸಿತವಾದರೆ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಕುಸಿದು ಆರ್ಥಿಕತೆ ಕುಂಠಿತವಾಗುತ್ತದೆ.
ಇದನ್ನೂ ಓದಿ: ಯು ಪಿ ಎಸ್ ಸಿಗೆ ಪಾರದರ್ಶಕತೆ ಪ್ರಶ್ನೆ .
ಅಂತರಿಕ ಮೌಲ್ಯಕ್ಕಿಂತ ಹೆಚ್ಚಳವಾದ ಷೇರಿಂಗ್ ಬೆಲೆ ಜಾಸ್ತಿ ಇದೆಯಾ, ಕಡಿಮೆ ಇದೆಯಾ ಅಥವಾ ಅತಿಯಾಗಿ ಬೆಲೆ ಏರಿಕೆಯಾಗಿದೆಯಾ ಎಂಬುದನ್ನು ಹೂಡಿಕೆದಾರರು ಗಮನಿಸುತ್ತಾರೆ. ಒಂದು ಷೇರಿನ ಬೆಲೆ ಅದರ ಅಂತರಿಕ ಮೌಲ್ಯಕ್ಕಿಂತ ವಿಪರೀತ ಜಾಸ್ತಿಯಾದರೆ ಒಂದು ಹಂತದಲ್ಲಿ ಆ ಷೇರಿನ ಬೆಲೆ ಕುಸಿತ ಕಾಣಲು ಶುರುವಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಇಂತಹ ಸನ್ನಿವೇಶವಿದೆ.
ತೈಲ ಬೆಲೆ ಹೆಚ್ಚಳ : ತೈಲ ಬೆಲೆ ಹೆಚ್ಚಳ ಸಹ ಷೇರುಪೇಟೆ ಮೇಲೆ ನೇರ ಪರಿಣಾಮ ಬೀರಲಿದೆ. ಇತ್ತೀಚೆಗೆ, ಒಂದು ಬ್ಯಾರೆಲ್ ಬ್ರಾಂಟ್ ಕಚ್ಚಾ ತೈಲದ ಬೆಲೆ 80 ಡಾಲಗಿಂತಲೂ ಹೆಚ್ಚಾಗಿದೆ. ಪ್ರಸ್ತುತ ವರ್ಷದಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 85 ಡಾಲರ್ ವರೆಗೂ ಹೆಚ್ಚಳವಾಗುವ ಅಂದಾಜು ಇದೆ. ಭಾರತ ತೈಲ ಅವಲಂಬಿತ ರಾಷ್ಟ್ರ. ತೈಲ ಬೆಲೆ ಹೆಚ್ಚಳವಾದಾಗ ಭಾರತದ ತೈಲ ಆಮದು ವೆಚ್ಚವು ಏರಿಕೆಯಾಗುತ್ತದೆ. ಇಷ್ಟೇ ಅಲ್ಲದೆ, ತೈಲ ಬೆಲೆ ಹೆಚ್ಚಳ ನೇರವಾಗಿ ಉದ್ಯಮಗಳು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.
ಷೇರುಪೇಟೆ ಕುಸಿತದ ವೇಳೆ ಎಸ್ಐಪಿ ಹೂಡಿಕೆ ನಿಲ್ಲಿಸಬೇಕಾ? ನಿಲ್ಲಿಸಿದರೆ ಏನಾಗುತ್ತದೆ? : ನೀವು ಮ್ಯೂಚುವಲ್ ಫಂಡ್ ಎಸ್ಐಪಿ ಮೂಲಕ ಹೂಡಿಕೆ ಮಾಡಿದಾಗ ಆ ಹೂಡಿಕೆ ಹಣದಿಂದ ಮತ್ತಷ್ಟು ಗಳಿಸಬೇಕು ಎನ್ನುವುದು ನಿಮ್ಮ ಉದ್ದೇಶವಾಗಿರುತ್ತದೆ. ಅಂದರೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಹಣ ಹಾಕಿದಾಗ ದೀರ್ಘಾವಾಧಿಯಲ್ಲಿ ಚಕ್ರ ಬಡ್ಡಿಯಲ್ಲಿ ಸಿಗುವಂತಹ ಲಾಭ ಲಭಿಸುತ್ತದೆ. ಆದರೆ ಎಸ್ಐಪಿ ಹೂಡಿಕೆ ನಿಲ್ಲಿಸಿದಾಗ ಹಣದ ಬೆಳವಣಿಗೆ ಕುಂಠಿತವಾಗುತ್ತದೆ. ಉದಾಹರಣೆಗೆ ಮುಂದಿನ 20 ವರ್ಷ ಪ್ರತಿ ತಿಂಗಳು 15 ಸಾವಿರ ಎಸ್ಐಪಿ ಹೂಡಿಕೆ ಮಾಡಿದರೆ ಒಟ್ಟು 36 ಲಕ್ಷ ಹೂಡಿಕೆ ಯಾಗಿರುತ್ತದೆ. ಈ ಹೂಡಿಕೆ ಮೇಲೆ ಶೇ 12 ರಷ್ಟು ಗಳಿಕೆ ಲಾಭ ಸಿಕ್ಕರೆ 20 ವರ್ಷಗಳ ಬಳಿಕ ಒಟ್ಟು 1.5 ಕೋಟಿ ನಿಮ್ಮ ಬಳಿ ಇರುತ್ತದೆ ಒಂದೊಮ್ಮೆ ಈ 20 ವರ್ಷಗಳ ಹೂಡಿಕೆ ಅವಧಿಯಲ್ಲಿ ಪ್ರತಿವರ್ಷ 15 000 ಮೊತ್ತದ ಒಂದು ಎಸ್ ಐ ಪಿಯನ್ನು ತಪ್ಪಿಸುತ್ತೀರಿ ಎಂದುಕೊಳ್ಳಿ.
ಆಗ ಎಸ್ಐಪಿ ಯಲ್ಲಿ 36 ಲಕ್ಷದ ಬದಲು 33.2 ಲಕ್ಷ ಹೂಡಿಕೆಯಾಗುತ್ತದೆ. 1.5 ಕೋಟಿ ರೂಪಾಯಿ ಸಿಗುವ ಜಾಗದಲ್ಲಿ 1.1 ಕೋಟಿ ಸಿಗುತ್ತದೆ. ಅಂದರೆ ಎಸ್ಐಪಿ ತಪ್ಪಿಸಿದರೆ ಪರಿಣಾಮ 4 0000 ಮೊತ್ತ ಕಡಿಮೆ ಸಿಗುತ್ತದೆ. ಹಾಗಾಗಿ ಎಸ್ಐಪಿ ನಿಲ್ಲಿಸುವುದರಿಂದ ದೀರ್ಘಾವಧಿಯಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವುದು ಗೊತ್ತಿರಲಿ.
ಎಸ್ ಐ ಪಿ ಹೂಡಿಕೆ ನಿಲ್ಲಿಸಬೇಕು? ಅಧ್ಯಯನ ವರದಿ ಹೇಳುವುದೇನು? : ವೈಟ್ ಓಕ್ ಕ್ಯಾಪಿಟಲ್ ಮ್ಯೂಚುವಲ್ ಫಂಡ್ಸ್ 1994 ರಿಂದ 2024ರ ಅವಧಿಯನ್ನು ಗಣನೆಗೆ ತೆಗೆದುಕೊಂಡು ಒಂದು ಅಧ್ಯಯನ ನಡೆಸಿದೆ. ಮಾರುಕಟ್ಟೆ ಅತಿಯಾಗಿ ಹೆಚ್ಚಳ ಕಂಡ ದಿನ ಎಸ್ಐಪಿ ಹೂಡಿಕೆ ಮಾಡಿದರೆ ಏನಾಗುತ್ತದೆ, ಮಾರುಕಟ್ಟೆ ಅತಿಯಾಗಿ ಕುಸಿತ ಕಂಡ ದಿನ ಎಸ್ಐಪಿ ಹೂಡಿಕೆ ಮಾಡಿದರೆ ಏನಾಗುತ್ತದೆ, ಇದುಯಾವುದನ್ನು ಗಮನಿಸದೇ ಪ್ರತಿ ತಿಂಗಳ 15ರಂದು ಶಿಸ್ತುಬದ್ಧವಾಗಿ ಎಸ್ ಐ ಪಿ ಡಿಕೆ ಮಾಡುತ್ತಾ ಸಾಗಿದರೆ ಏನಾಗುತ್ತದೆ ಎನ್ನುವ ಬಗ್ಗೆ ವರದಿ ಬೆಳಕು ಚೆಲ್ಲುತ್ತದೆ. ಆ ವರದಿಯ ಪ್ರಕಾರ, ಮಾರುಕಟ್ಟೆ ಅತಿಯಾಗಿ ಹೆಚ್ಚಳ ಕಂಡ ದಿನ ಹೂಡಿಕೆ ಮಾಡಿದವರಿಗೆ ಶೇ 14.5 ರಷ್ಟು ಗಳಿಕೆ ಸಿಕ್ಕರೆ, ಮಾರುಕಟ್ಟೆ ಅತಿಯಾಗಿ ಕುಸಿತ ಕಂಡ ದಿನ ಹೂಡಿದವರಿಗೆ ಶೇ 15 ರಷ್ಟು ಗಳಿಕೆ ದಕ್ಕಿದೆ.
ಇದ್ಯಾವುದನ್ನು ಗಮನಿಸದೆ ಪ್ರತಿ ತಿಂಗಳ 15ರಂದು ಶಿಸ್ತು ಬದ್ಧವಾಗಿ ಹೂಡಿಕೆ ಮಾಡುತ್ತಾ ಬಂದವರಿಗೆ ಶೇ 14.7 ರಷ್ಟು ಗಳಿಕೆ ಲಾಭ ಸಿಕ್ಕದೆ. ಅಂದರೆ ದೀರ್ಘಾವಧಿ ಗೆ ಹೂಡಿಕೆ ಮಾಡುವಾಗ ಶಿಸ್ತು ಬದ್ಧವಾಗಿ ಕೂಡಿದರೆ ಗಳಿಕೆಯಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ * ಕಿವಿಮಾತು : ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಗಳು ಮಾರುಕಟ್ಟೆ ಏರಿಳಿತಕ್ಕೆ ಒಳಪಡುತ್ತವೆ. ಆದರೆ ಅಲ್ಪಾವದಿ ಕುಸಿತಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ದೀರ್ಘಾವಧಿಯ ನೋಟದೊಂದಿಗೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಲಾಭದ ಸಾಧ್ಯತೆಯೇ ಹೆಚ್ಚು ಎನ್ನುವುದನ್ನು ಇಂದಿನ ದತ್ತಾಂಶಗಳು ಹೇಳುತ್ತವೆ. ಹಾಗಾಗಿ ಮಾರುಕಟ್ಟೆ ಕುಸಿತಕ್ಕೆ ಹೆದರಿ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ನಿಲ್ಲಿಸಬೇಡಿ. ನೆನಪಿಡಿ, ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಹೂಡಿಕೆ ಮಾಡಿದಾಗ ಮ್ಯೂಚುಯಲ್ ಪಂಡ್ಸ್ ನಲ್ಲಿ ಕಡಿಮೆ ಬೆಲೆ ಜಾಸ್ತಿ ಯೂನಿಟ್ ಗಳು ಲಭಿಸುತ್ತವೆ.