ಭರವಸೆ ಮೂಡಿಸಿದ ಜಿಮ್-2025

ಭರವಸೆ ಮೂಡಿಸಿದ ಜಿಮ್-2025

ವಾಸ್ತವಕ್ಕೆ ಬರಲಿ ಹೂಡಿಕೆ ಭರವಸೆ ಪ್ರಗತಿಯ ಮರು ಕಲ್ಪನೆ ಎಂಬ ಧೈರ್ಯದೊಂದಿಗೆ ಆಯೋಜಿತಗೊಂಡಿದ್ದ ಈ ಬಾರಿಯ ಜಾಗತಿಕ ಹೂಡಿಕೆ ಸಮಾವೇಶ ಭರವಸೆಯ ರೇಖೆ ಮೂಡಿಸಿ ಸಂಪನ್ನಗೊಂಡಿದೆ. ಕರ್ನಾಟಕ ಯಾವತ್ತಿಗೂ ಹೂಡಿಕೆ ಸ್ನೇಹಿ ರಾಜ್ಯ. ಭಾರತದಲ್ಲಿ ಮೊದಲಿಂದಲೂ ಬಂಡವಾಳಿ ಗಾರನ್ನು ಅತಿ ಹೆಚ್ಚು ಆಕರ್ಷಿಸುವ ರಾಜ್ಯಗಳೆಂದರೆ ಮಹಾರಾಷ್ಟ್ರ ಗುಜರಾತ್, ಕರ್ನಾಟಕ .ಅದರಲ್ಲೂ ಕರ್ನಾಟಕದ ವೈಶಿಷ್ಟ ಪುಣ್ಯ ಪರಿಸರ ಕೈಗಾರಿಕಾ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರು ಸುತ್ತಮುತ್ತವೇ ಐಟಿ, ಬಿಟಿ ಒಳಗೊಂಡಂತೆ ಅನೇಕ ಉದ್ಯಮಗಳು ನೆಲೆಗೊಂಡಿವೆ. ಇಷ್ಟಾದರೂ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪಿಸಬೇಕು ಎಂಬ ಉದ್ಯಮ ವಲಯದ ಹಸಿವು ನಿಂತಿಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಉದ್ಯಮ ವಲಯದ ಈ ಸ್ಪಂದನೆ ಅಪೇಕ್ಷಣೀಯವಾದುದು. ಕಾಲಕಾಲಕ್ಕೆ ಹೂಡಿಕೆ ಸಮಾವೇಶ ನಡೆಸುವ ಮೂಲಕ ಬಂಡವಾಳ ಆಕರ್ಷಣೆಗೆ ಬೇಕಾದ ವೇದಿಕೆಯನ್ನು ರಾಜ್ಯ ಸರರ್ಕಾರ ನಿರ್ಮಿಸಿ ಕೊಂಡುತಿದೆ.


ವಾಸ್ತವಿಕವಾಗಿ ಇಂತಹ ಸಮಾವೇಶಗಳ ಫಲಶ್ರುತಿ ಏನೆನ್ನುವುದೆ ಮುಖ್ಯ. ಈ ಹಿಂದಿನ ಸಮಾವೇಶಗಳ ಒಡಂಬಡಿಕೆಗಳಲ್ಲಿ ಹೆಚ್ಚಿನವು ಯೋಜನೆಗಳಾಗಿ ಕಾರ್ಯರೂಪಕ್ಕೆ ಬಂದಿಲ್ಲವೆಂಬ ಅಪವಾದವಿದೆ. ಈ ಬಗ್ಗೆ ಇನ್ವೆಸ್ಟ್ ಕರ್ನಾಟಕ- 2025ರ ಸಿದ್ಧತೆ ಹಂತದಲ್ಲೇ ಅಕ್ಷೇಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹೂಡಿಕೆ ಒಪ್ಪಂದಗಳ ನೈಜ್ಯ ಅನುಷ್ಠಾನವೇ ಈ ಬಾರಿಯ ಪ್ರಮುಖ ಕಾರ್ಯ ಸೂಜಿ ಎಂದು ಹಾಲಿ ಸರರ್ಕಾರ ಪ್ರತಿಪಾದಿಸಿತ್ತು. ಬಹುಮುಖ್ಯವಾಗಿ ಕೈಗಾರಿಕಾ ಸಚಿವ ಎಂ .ಬಿ .ಪಾಟೀಲರು ಈ ನಿಟ್ಟಿನಲ್ಲಿ ಸರರ್ಕಾರ ಸ್ಪಷ್ಟತೆ ಹೊಂದಿರುವುದನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ತೋರಿಸುತ್ತ ಬಂದಿದ್ದರು.ಅರ್ಥಾತ್ ಉದ್ಯಮಿಗಳು ಭೇಟಿ ಕೊಟ್ಟಾಗ ನೈಜ ಹೂಡಿಕೆ ಬಗ್ಗೆ ಖಾತರಿ ಪಡಿಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ ಇದೇ ಕಾರಣದಿಂದ ಈ ಬಾರಿಯ ಒಡಂಬಡಿಕೆಗಳಲ್ಲಿ ಶೇ.70ರಷ್ಟುನ್ನು ಕಾರ್ಯ ನುಷ್ಠಾನಕ್ಕೆ ತರುವ ಬಗ್ಗೆ ಸಚಿವರು ವಿಶ್ವಸದಿಂದ ಹೇಳಿಕೊಂಡಿದ್ದರು.

ಇದನ್ನೂ ಓದಿ:ರೈಲ್ವೆ ಹಳಿ ಧ್ವಂಸ ತಡೆಗೆ ನಾವೇನು ಮಾಡಲು ಸಾಧ್ಯ?

ಅಂಗೈಯಲ್ಲಿ ಅರಮನೆ ತೋರಿಸುವ ಬದಲು ನೈಜ ಹೂಡಿಕೆಯತ್ತ ಲಕ್ಷ ಕೇಂದ್ರಿಕರಿಸುವು ಉತ್ತಮ ಕಾರ್ಯದಲ್ಲಿ ಪ್ರಗತಿಯ ಮರ ಕಲ್ಪನೆ ಎಂಬ ವಾಕ್ಯನಾ ಯಥೋಚಿತವಾದದ್ದು ಇದರ ಅನುಸಾರ 2025 ಬಹುಮಟ್ಟಿಗೆ ಯಶಸ್ಸಿನ ಹಾದಿಯಲ್ಲಿ ಸಾಗಿ ಮುಕ್ತಾಯಗೊಂಡಿದೆ ಒಟ್ಟಾರೆ 10. 27 ಲಕ್ಷ ಕೋಟಿ ರೂ ಹೂಡಿಕೆಯ ಒಡವಡಿಕೆಯಾಗಿದೆ. ಇದರಲ್ಲಿ 4.03 ಲಕ್ಷ ಕೋಟಿ ರೂ ಅನ್ನು ಬದ್ದತೆಯ ಹೂಡಿಕೆಯೆಂದು ವರ್ಗೀಕರಿಸಲಾಗಿದೆ. ಇದರಡಿ ಬರುವ ಯೋಜನೆಗಳು ನೂರಕ್ಕೆ ನೂರರಷ್ಟು ಅನುಷ್ಠಾನಗೊಳ್ಳುವ ವಿಶ್ವಾಸ ಸರರ್ಕಾರದ್ದಾಗಿದೆ. ಉಳಿದ 6 ಲಕ್ಷ ಕೋಟಿ ರೂ .ಅನು. ನೈಜ ಬಂಡವಾಳವಾಗಿ ಪರಿವರ್ತಿಸುವ ಭರವಸೆ ತಳಲಾಗಿದೆ .ಈ ಬಾರಿಯ ಜಿಮ್ ನಿಂದ 6. ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆಯಿಂದೆ. ನೂತನ ಕೈಗಾರಿಕಾ ನೀತಿಯಡಿ ಮುಂದಿನ 5. ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯಿದೆ.ಜಿಮ್ ಒಪ್ಪಂದವಳ ಅನುಷ್ಠಾನಕ್ಕೆ ಕೈಗೊಳ್ಳುವ ಪರಿಣಾಮಕಾರಿ ಕ್ರಮಗಳನಾದರಿಸಿ ಈ ಯಶಸ್ಸು ಲಭ್ಯವಾಗಲಿದೆ. ಬಿಯಾಂಡ್ ಬೆಂಗಳೂರಿಗೂ ಒತ್ತು ಕೊಡಲಾಗಿದೆ. ಇದೊಂದು ಸಕಾರಾತ್ಮಕ ಹೆಚ್ಚು.

Leave a Comment