ಕಲಿಕಾ ಹಬ್ಬ; ಪೋಷಕರಿಗೆ ಸ್ಪರ್ಧೆ
ಚಿಕ್ಕಬಳ್ಳಾಪುರ: ತಾಲ್ಲೂಕಿನ ಎಸ್. ಗೊಲ್ಲಹಳ್ಳಿ ಕ್ಲಸ್ಟರ್ ಮಟ್ಟದ ಎಫ್. ಎಲ್.ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಗೊಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. 13 ಶಾಲೆಗಳ 150ಕ್ಕೂ ಹೆಚ್ಚು ಮಕ್ಕಳು ಮತ್ತು 50 ಕ್ಕೂ ಹೆಚ್ಚು ಪೋಷ ಕರು ಕಲಿಕಾ ಹಬ್ಬ ಸ್ಪರ್ಧೆಯಲ್ಲಿ ಭಾಗವ ಹಿಸಿದ್ದರು. ಮಕ್ಕಳ ವಿವಿಧ ಕಲಿಕಾ ಹಬ್ಬ ವೇಷ ಭೂಷಣ ಧರಿಸಿ, ವಾದ್ಯ ಗೋಷ್ಠಿ ಗಳೊಂದಿಗೆ ಪಥ ಸಂಚಲನ ನಡೆಸಿದರು.
ಕಲಿಕಾ ಹಬ್ಬ ಘೋಷವಾಕ್ಯಗಳನ್ನೂಕೂಗುತ್ತಾ ಊರಿನ ಪ್ರಮುಖ ಬೀದಿಯಲ್ಲಿ ಕಲಿಕಾ ಹಬ್ಬ ಕುರಿತು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ, ಗಟ್ಟಿ ಓದು, ಕಥೆ ಹೇಳುವ ಸ್ಪರ್ಧೆ, ವಿನೋದ ಗಣಿತ, ರಸಪ್ರಶ್ನೆ, ಪೋಷಕರು ಮತ್ತು ಮಕ್ಕಳು, ಜ್ಞಾಪನ ಪರೀಕ್ಷೆ, ಕೈಬರಹ ಅಥವಾ ಕ್ಯಾಲಿಗ್ರಾಫಿ ಎಂಬ ಒಟ್ಟು 7 ಸ್ಪಾಲ್ ಸ್ಪರ್ಧೆಗಳು ನಡೆಯಿತು. ಇದರಲ್ಲಿ 5 ಸ್ಟಾಲ್ ತರಗತಿವಾರು, 2 ಸ್ಟಾಲ್ ಶಾಲಾವಾರು ಇದ್ದವು. ವಿಜೇತಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ, ಸರ್ಕಾರ ಇಂತಹ ಶಿಕ್ಷಣ ಹಬ್ಬಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಕ್ಕಳ ಕಲಿಕೆಗೆ ಲಾಭದಾಯಕವಾಗಲಿದೆ ಎಂದರು.
ಪ್ರತಿ ಗ್ರಾಮದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪದ್ಮಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತಮ್ಮ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಸುನಿಲ್, ರವಿ, ಶಿಕ್ಷಣ ಸಂಯೋಜಕ ಮುರಳಿ, ಎಸ್ ಗೊಲ್ಲಹಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಎನ್. ಬಡ್ತಿ ಮುಖ್ಯಶಿಕ್ಷಕರಾದ ರಾಮಚಂದ್ರ ರೆಡ್ಡಿ, ನಳಿನಿ ಕೆ., ಶ್ರೀಮೂರ್ತಿ, ವಿಶಾಲವತಿ, ಲತಾ, ಸುಮಾ ಪಾಲ್ಗೊಂಡಿದ್ದರು.