ಟ್ರಂಪು ಗಾಳಿಯು ತಂದಾನ ಹಾಡಲಿಲ
ಅತ್ತ ಹಳ್ಳಿಯೂ ಅಲ್ಲದ ಇತ್ತ ಪ್ಯಾಟೆಯೂ ಅಲ್ಲದ ಕೆಂಪಾಪುರ ನಮ್ಮ ಮಲೆನಾಡ ಸೆರಗಿನ ದೊಡ್ಡರು. ಆಚೆ ತುಂಗಾ ನದಿಯೂ, ಈಚೆಗೊಂದು ಹೆದ್ದಾರಿಯೂ ಅವರ ಗರ್ಭದೊಳಗೆ ಹಾದು ಹೋಗಿ ಖುಷಿ -ನೆಮ್ಮದಿಗಳಿಂದ ಕೆಂಪಾಪುರ ಸಕಲ ರೀತಿಯಲ್ಲೂ ಸಮೃದ್ಧ ಸಂಪನ್ನವೇ. ಅದೊಂದು ರಾತ್ರಿ ಯಾರೋ ಇಬ್ಬರು ಕಿಲಾಡಿಗಳು ಆ ಊರಿನ ಮೈಲುಗಲ್ಲಿನ ಮೇಲೆ ಏನೋ ಕೈಗಮನಿಸಿದೆ. ‘ಕೆಂಪಾಪುರ’ ಹೆಸರಿನ ‘ಕೆ’ ಜಾಗದಲ್ಲಿ ಗೀಚಿದ್ದನ್ನು ಗಮನಿ ‘ಟ್ರ’ ಎಂದು ತಿದ್ದಿ, ‘ಟ್ರಂಪಾಪುರ’ವಾಗಿಸಿ, ಆ ಕತ್ತಲೆಯಲ್ಲಿ ಅವರಲ್ಲಿಗೆ ಓಡಿಹೋದರೆಂದು ಈ ಹೊತ್ತಿಗೂ ತಿಳಿಯುತ್ತಿಲ್ಲ.
ಅಷ್ಟರಲ್ಲಾಗಲೇ ಈ ಭೂಮಿ ಮೇಲೆ ತನ್ನ ಹೆಸರಲ್ಲೊಂದು ಊರು ಸೃಷ್ಟಿಯಾಗಿರುವ ವಿಚಾರ ವೈಟ್ ಹೌಸ್ನಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಸ್ಮೃತಿಗೆ ತಲುಪಿತೇನೋ…. ಮರುದಿನ ನಸುಕಿನಲ್ಲೇ ಆ ಊರಿನಲ್ಲಿ ಟ್ರಂಪ್ ಒಂದು ಮಾಯಾದಂಡ ಹಿಡಿದು ಟಪಕ್ಕನೆ ಪ್ರತ್ಯಕ್ಷನಾಗಿದ್ದ! ಟ್ರಂಪಾಪುರದ ಹೆಂಗಸರು ಮನೆಬಾಗಿಲು ಗುಡಿಸಿ, ರಂಗೋಲಿ ಹಾಕಿ, ಆಚೆ ನೋಡುವಷ್ಟರಲ್ಲಿ ಬೆಳ್ಳಗಿನ ಬಾಂಬೆ ಮಿಠಾಯಿ ಕೂದಲಿನ, ಕೆಂಪುಮೂತಿಯ, ಕೆಂಪು ಟ್ಟೆ-ಕಡುನೀಲಿ ಕೋಟು ತೊಟ್ಟ ಬೂಟುಗಾಲಿನ ದೊಡ್ಡಮನುಷ್ಯ ಊರಿನ ನಡುವೆ ಕುರ್ಚಿ ಹಾಕಿ ಇಂಗ್ಲಿಷಿನಲ್ಲೇನೋ ಹಾಡು ಗುನುಗುತ್ತಿದ್ದ, ಅದೇನು ಗತ್ತು, ಅದೇನು ಗಾಂಭೀರ್ಯ.
ರುಕ್ಕಿಣಿಯಕ್ಕ ”ಇವೆ ಎಲ್ಲೋ ನೋಡಂಗದೆ… ಬಿಗ್ಬಾಸ್ ನಲ್ಲಿ ಬಂದಿದ್ದಾ ಅಂತ, ” ಮಾತನ್ನ ತೇಲಿಸಿದರು. “ಏಯ್ ಅವು ಇವನಲ್ಲೇ… ನೀ ನೋಡಿದ್ದು ಗ್ರೇಟ್ ಕಲಿ ಕಣೇ…” ಅಂತ ನಿರ್ಮಲಾ ಆಂಟಿ ಬಾಯ್ಡುಚ್ಚಿಸಿದರು. ಎಷ್ಟೇ ತಲೆ ಓಡಿಸಿ, ಜಡೆಯನ್ನು ಟೈಟಾಗಿ ಕಡ್ಕೊಂಡು, ತಲೆಯೊಳಗೆ ಎಷ್ಟೇ ಸೀರಿಯಲ್ಲುಗಳ ಪಾತ್ರ ಜಾಲಾಡಿದರೂ, ಯಾರಿಗೂ ಟ್ರಂಪ್ನ ಪೂರ್ತಿ ಗುರುತೇ ಸಿಗಲಿಲ್ಲ. ಒಂದಿಬ್ಬರು ಗಂಡಸರಂತೂ ಮತ್ತೇನಾದ್ರೂ ಬ್ರಿಟಿಷರೇ ಬಂದ್ದಿಟ್ರಾ? ”ಪ್ಲಾಸಿ ಕದನದಲ್ಲಿ ನವಾಬನನ್ನು ಮಣಿಸಿದ ರಾಬರ್ಟ್ ಡ್ರೈವ್ ಹಿಂಗೇ ಇದ್ದ,” ಎಂದು ಅಂದಾಜಿನಲ್ಲಿ ಗೋಲಿ ಹೊಡೆದರು. “ಬೂತಯ್ಯನ ಮಗ ಅಯ್ಯು ಪಿಚ್ಚರಲ್ಲಿ ಬೂತಯ್ಯನ ಹಾವಭಾವ ಎಲ್ಲ ಸೇಮ್ ಹಿಂಗೇ ಇತ್ತು. ಆ ಬೂತಯ್ಯನೇ ಸೂಟುಬೂಟು ಹಾಕ್ಕೊಂಡ್ ಬಂದ್ದಾ?,” ಅಂತ ಪಾಂಡು ಶೆಟ್ಟಿಗೊಂದು ಡೌಟು. ತೋಟದಲ್ಲೇ ಇರಲಿ, ಪೇಟೆಯಲ್ಲೇ ಇರಲಿ, ಇಪ್ಪತ್ನಾಲ್ಕು ಗಂಟೆ ಲೋಕದ ರಾಜಕೀಯನೇ ಮಾತಾಡ್ತಿದ್ದ ನಮ್ಮ ಸುಬ್ಬಣ್ಣ “ಇಲ್ಲ ಮಾರಾರಾ… ಗ್ರೇಟ್ ಕಲಿನೂ ಅಲ್ಲ, ಪರಂಗಿಯೂ ಅಲ್ಲ. ಆಗಿನ ಬೂತಯ್ಯನೂ ಅಲ್ಲ.. ಈತ ಆಧುನಿಕ ಬೂತಯ್ಯ. ಅವು ಟ್ರಂಪು… ಅಮೆರಿಕ ಪ್ರೆಸಿಡೆಂಟು,” ಅಂದಾಗಲೇ ಟ್ರಂಪಾಪುರದಲ್ಲೊಂದು ಕರೆಂಟ್ ಪಾಸಾದಂತಾಯಿತು.
ಇದನ್ನೂ ಓದಿ:ಚಪ್ಪಾಳೆಯ ತಾಳದಲ್ಲಿ ಮನುಷ್ಯನ ಸ್ವಾಭಾವಿಕ ಸಮ್ಮಿಲನ
ಇವರನ್ನೆಲ್ಲ ನೋಡಿ ಟ್ರಂಪ್, “ಈ ಟ್ರಂಪಾಪುರವನ್ನು ಗ್ರೇಟ್ ಎಗೇನ್ ಮಾಡಕ್ಕಂತೇ ನಾ ಇಲ್ಲಿಗೆ ಬಂದಿದ್ದೀನಿ,” ಎಂದಾಗ ಎಲ್ಲರೊಳಗೂ ಹರ್ಷ, ಅಚ್ಚರಿ ಉಕ್ಕಿತು. ಅಮೆರಿಕಕ್ಕೆ ಹೋಗಕ್ಕಂತೂ ನಮ್ಮಿಂದಾಗ್ಲಿಲ್ಲ, ನಮ್ಮ ಕೆಂಪಾಪುರನೇ ಅಮೆರಿಕ ಥರ ಆಯ್ತಲ್ಲ ಎಂಬ ಖುಷಿ ಮತ್ತೆ ಕೆಲವರಿಗೆ. “ನಾವು ನಾಗತೀಹಳ್ಳಿ ಮೇಷ್ಟ್ರ ಪಿಚ್ಚರಲ್ಲಿ, ಹಾಲಿವುಡ್ ಸಿನ್ಮಾಗಳಲ್ಲಿ ನೋಡಿದ್ದೆಲ್ಲ ನಮ್ಮೂರಲ್ಲೇ ಇನ್ನಾಗದೆ ವನಜಕ್ಕಾ….” ಅಂತ ಕಮಲಕ್ಕ ಬಡಾಯಿ ಕೊಚ್ಚಿದಳು. ಇದಕ್ಕೆ ಶ್ರುತಿಯಾಗಿ ಟ್ರಂಪ್
ತಂದಾನತನ್ನ ಮಾಯಾದಂಡದಿಂದ ಊರಿನ ಸಾಮಾನ್ಯ ರಸ್ತೆಗಳನ್ನೂ ಹೈಫೈ ಮಾಡಿದ. ನೋಡ್ತಾ ನೋಡ್ತಾ ರಸ್ತೆಯ ಇಕ್ಕೆಲಗಳಲ್ಲಿ ಬೋಡು ಎತ್ತರೆತ್ತರದ ಬಿಲ್ಲಿಂಗುಗಳೇ ಎದ್ದು ನಿಂತವು. ಭತ್ತದ ಗದ್ದೆಗಳೂ ನಮ್ಮೂ ಮೆಕ್ಕೆಜೋಳದ ಹೊಲಗಳಾದವು. ಎಲ್ಲೆಲ್ಲೂ ಪಿಜ್ಜಾ, ಬರ್ಗರುಗಳ ಪರಿಮಳ, ಊರಿನ ಗ್ಲಾಮರು, ಗ್ರಾಮರೂ ಪರಿಸ್ಥಿತಿ ಆಧುನಿಕತೆಯೊಂದಿಗೆ ಬದಲಾಗಿ ಹೋಯ್ತು ನಮ್ಮ ಸುಬ್ಬಾ ಭಟ್ಟರು ಒಂದು ಹೆಜ್ಜೆ ಮುಂದೆ ಹೋಗಿ, ಊರ ಗುಡಿಯಲ್ಲಿ ಟ್ರಂಪ್ ಮೂರ್ತಿಯನ್ನೇ ಪ್ರತಿಷ್ಠಾಪಿಸಿಬಿಟ್ಟರು. ಟ್ರಿಂಪ್ನಿಂದ ನಮಗ್ಯಾವ ಅಪತೂ ಹಠದಿ ಬಾರದಿರಲಿ ಎಂದು ಸಂಕಲ್ಪ, ಪ್ರಾರ್ಥನೆಗಳು ಜೋರಾದವು. ಭಟ್ಟರ ಇಂಗ್ಲಿಷ್ ಮಂತ್ರದ ಜ್ಞಾರ್ನನೆಗಳು ಜೋರಾದವು.
‘ಟ್ರಂಪಾರತಿ’ಗೆ ಪ್ರತ್ಯೇಕ ದರ ಫಿಕ್ಕಾಯಿತು ಟ್ಯಾಟ ತಾಯತ’ ಕಟ್ಟಿಸಿಕೊಂಡರೆ, ಆತನಿಂದ ಯಾವ ಅಂತೂ ಬರೋದಿಲ್ಲಂತೆ ಎಂಬ ವದಂತಿ ಹೆಚ್ಚಿದ ಮೇಲಂತೂ ಸುಬ್ಬಾ ಭಟ್ಟರಿಗೆ ಭಕ್ತಾದಿಗಳನ್ನು ಕಂಟ್ರೋಲ್ ಮಾಡುವುದೇ ಸಾಹಸವಾಯಿತು. ಊರಿನ ಎಲ್ಲ ವ್ಯವಹಾರಕ್ಕೂ ಡಾಲರೇ, ಮುಖ್ಯವಾಯಿತು. ಶಾಲೆಗಳಲ್ಲಿ ಶಿಕ್ಷಕರೆಲ್ಲ ಮಕ್ಕಳಿಗೆ ‘ಟ್ರಂಪುಕಾವ್ಯ’ ಕಂಠಪಾಠ ಮಾಡಿಸಿದರು. ಯಾರ ಮನೆಯಲ್ಲಿ ಟಿವಿ ಆನ್ ಮಾಡಿದರೂ, ಟ್ರಂಪ್ ನದ್ದೇ ನ್ಯೂಸು.ಈಗಂತೂ ಟ್ರಂಪಾಪುರ ಸುತ್ತಲಿನ ಹಳ್ಳಿಗಳಿಗೆ ದೊಡ್ಡ ಸೆಳೆತ. ಹೇಗಾದರೂ ಈ ಟ್ರಿಂಪಾಪುರ ಪ್ರವೇಶಿಸಬೇಕು. ಅಲ್ಲೊಂದು ಪುಟ್ಟ ಕೆಲಸ ಹಿಡೀಬೇಕು, ಜಾಗ ಪಡೀಬೇಕು ಎಂದು ಅಕ್ರಮವಾಗಿ ನುಸುಳುವವರು ದಿನದಿಂದ ದಿನಕ್ಕೆ ಹೆಚ್ಚಾದರು. ಅವತ್ತೊಂದು ದಿನ, ಒಂದಿಷ್ಟು ರೈತರು ತಮ್ಮ ಬಾಳೆ ತೋಟಕ್ಕೆ ಮಂಗಗಳ ಕಾಟ ಮಾತ್ರೆ… ಅವು ಹೊರ ಊರುಗಳಿಂದ್ದೇ ನಮ್ಮ ತೋಟಗಳಿಗೆ ನುಗ್ಗುತ್ತಿವೆ ಎಂಬ ಕಂಪ್ಲೇಂಟನ್ನು ಟ್ರಂಪ್ ಮುಂದಿಟ್ಟರು. ಟ್ರಂಪ್ ಕೆಂಡಾಮಂಡಲನಾದ. ಊರಿನ ಸುತ್ತ ಗೋಡೆ ಕಟ್ಟುವುದಾಗಿ ಘೋಷಿಸಿ, ಕೆಲವೇ ದಿನಗಳಲ್ಲಿ ಗೋಡೆಗಳನ್ನೂ ಎದ್ದು ನಿಲ್ಲಿಸಿದ. ‘ಟ್ರಂಪಾಪುರ ಫಸ್ಟ್’ ಎನ್ನುತ್ತಾ ಪುರದ ತೋಟಗಳ ಬಾಳೇಹಣ್ಣನ್ನು ಇಲ್ಲಿನ ಮಂಗ ಗಳಷ್ಟೇ ತಿನ್ನೋಕು,ಹೊರಗಿನವು ತಿನ್ನಂಗಿಲ್ಲ ಅಂತ ಕಟ್ಟಾಜ್ಞೆ ಹೊರಡಿಸಿದ. ಊರಿನ ಎಲ್ಲ ಕೋತಿಗಳೂ ಚಾಚೂತಪ್ಪದೇ ಪಾಲಿಸಿದವು.
“ಹೊರಗಿನಿಂದ ಬಂದವೆಲ್ಲ ಟ್ರಂಪಾಪುರದವರ ಕೆಲ್ಲ ಕಿತ್ತೋತಿದ್ದಾರೆ,” ಎನ್ನುವ ಸುಳಿವೂ ಟ್ರಂಪ್ಗೆ ಸಿಕ್ಕಿತು.” ಟ್ರಂಪಾಪುರದ ತೋಟಗಳಲ್ಲಿ ಮೆಕ್ಕೆಜೋಳದ ಗದ್ದೆಗಳಲ್ಲಿ ಕಂಪನಿಗಳಲ್ಲಿ ಕೇವಲ ಈ ಊರಿನವರಷ್ಟೇ ದುಡೀಬೇಕು. ಹೊರಗಿನವರಿಗೆ ಇಲ್ಲಿ ಯಾವ ಕೆಲ್ಲವೂ ಇಲ್ಲ ಎಂಬ ಬೋರ್ಡುಗಳು ಬಿದ್ದವು. ತತ್ತರಿಣಾಮ, ಇಷ್ಟು ದಿನ ನಮ್ಮೂರು ನಮ್ಮ ನೆಲವೆಂದು ಸೋಮಾರಿಗಳಂತಿದ್ದ ಟ್ರಂಪಾಪುರದ ಜನತೆಗೆ ತಾವೇ ಮೈಬಗ್ಗಿಸಿದುಡಿಯುವ ಪರಿಸ್ಥಿತಿ ಒದಗಿತು. ಒಂದು ನಲ್ಲಿ ರಿಪೇರಿಗೂಹೊರಗಿನವರು ಸಿಗಲಿಲ್ಲ, ಯಾವುದೋ ತಾತನ ಕಾಲದಲ್ಲಿ ಈ ಊರಿನ ಜನ ಇಷ್ಟು ಮೈಬಗ್ಗಿಸಿ ದುಡಿದಿದ್ದರಂತೆ. ಟ್ರಂಪಾಪುರದ ಹಣ ಟ್ರಂಪಾಪುರಿಗರಿಗೇ ಸೇರಬೇಕೆಂಬ ಟ್ರಂಪ್ ಸಾಹೇಬರ ಹಠದಿಂದ ಊರ ಜನ ಹೈರಾಣಾದರು. ಈ ಊರಲ್ಲಿ ಬಿದ್ದ ಮಳೆ ನೀರು ಹೊರ ಊರಿನವರ ಗದ್ದೆಗೆ ಹೋಗಂಗಿಲ್ಲ, ಇಲ್ಲಿನ ಪಕ್ಷಿಯೂ ಪಕ್ಕದೂರಿಗೆ ಹಾರಂಗಿಲ್ಲ, ಹೊರ ಊರಿನ ಒಂದು ದುಂಬಿಯೂ ಇಲ್ಲಿಗೆ ಹಾರಿಬಂದು ಟ್ರಂಪಾಪುರದ ಹೂವುಗಳ ಮಕರಂದ ಹೀರಂಗಿಲ್ಲ ಎಂಬ ಪುಂಖಾನುಪುಂಖ ಪಾಳೇಗಾರಿಕೆ ಆದೇಶಗಳಿಂದಲೇ ಟ್ರಂಪಾಪುರ ಮತ್ತೆ ‘ಗ್ರೇಟ್’ ಆಗುವತ್ತ ಸಾಗಿತು. ಅಕ್ಕಪಕ್ಕದ ಒಳೊಳ್ಳೆ ಫಸಲು ಕೊಡುವ ಜಮೀನುಗಳನ್ನೆಲ್ಲ ತನ್ನದು ಎಂದು ಘಂಟಾಘೋಷವಾಗಿ ಘೋಷಿಸಿಕೊಂಡ. ದುಡ್ಡಿದ್ದೋರೆಲ್ಲ ಟ್ರಂಪಾಪುರಕ್ಕೆ ಬರಬಹುದು ಎಂಬ ಆಫರನ್ನೂ ಟ್ರಂಪ್ ಅದೊಂದು ದಿನ ಕೊಟ್ಟುಬಿಟ್ಟ.
ಇಷ್ಟು ದಿನ ಕತ್ತೆ ಮೇಲೆ, ಹಿಂಬಾಗಿಲಲ್ಲಿ, ಗೋಡೆಗಳನ್ನೆಲ್ಲ ಹತ್ತೊಂಡ್ ಟ್ರಂಪಾಪುರ ನುಗ್ಗಲು ಮುಂದಾದವರೆಲ್ಲ, ನಮ್ಮೂರಲ್ಲಿ ಗಂಜಿ ಬೇಯಿಸ್ಕೊಂಡ್. ಬೆಲ್ಲ ಬೇಡ್ಕೊಂಡ್ ಇದ್ರೂ ಪರ್ವಾಗಿಲ್ಲ. ಆ ಊರಿನ ಸಹ್ವಾಸ ಬೇಡಪ್ಪಾ ಅಂತ ನಿರ್ಲಿಪ್ತರಾದರು. ಹೊರಗಿನ ಊರುಗಳಿಗೆ ಟ್ರಂಪಾಪುರ ಮೇಲೆ ಕೋಪ, ಅಸಹನೆ ಹೆಚ್ಚುತ್ತಾ ಹೋಯಿತು. ಓಹ್ ನೀವು ಟ್ರಂಪಾಪುರದವರಾ? ಅಂತ ಹಿಂದೆಲ್ಲ ಕೊಡುತ್ತಿದ್ದ ಗೌರವ ಈಗಿಲ್ಲ, ಆ ಊರಿನ ಜನ ಚಂದ್ರನ ಮೇಲೆ ಓಡಾಡಿದ್ರೂ, ಮಂಗಳಕ್ಕೆ ಹೋದ್ರೂ ಹೊರಗಿನ ಪ್ರಪಂಚಕ್ಕೆ ‘ವ್ಹಾವ್ ಗ್ರೇಟ್’ ಅನ್ನಲೂ ಮನಸ್ಸಾಗಲಿಲ್ಲ, ಟ್ರಂಪಾಪುರವಂತೂ ವೈವಿಧ್ಯತೆಯನ್ನೇ ಕಳೆದುಕೊಂಡಿತು. ಬರೀ ದುಡ್ಡು ದುಡ್ಡು, ನಾನು, ನನ್ನದೆನ್ನುವ ಭಾವದಲ್ಲಿ ತೇಲುತ್ತಾ, ನಾನೆಲ್ಲಿದ್ದೇನೆ ಅನ್ನೋದನ್ನೇ ಟ್ರಂಪಾಪುರ ಮರೆಯಿತು. ಎಷ್ಟು ಸಿಕ್ಕರೂ ಸಾಲದೆಂಬ ಅತೃಪ್ತಿಯಲ್ಲೇ ಸದಾ ಹೊರಳತೊಡಗಿತು. ‘ಟ್ರಂಪು’ ಗಾಳಿಯು ಅಲ್ಲಿ ತಂದಾನ ಹಾಡದೆ ಹೋಯಿತು.ಕಡೆಗೊಂದು ದಿನ ಮುನಿಸಿಪಾಲ್ಟಿಯವರೋ, ಯರೋ… ಊರ ಮೈಲುಗಲ್ಲು ವಿರೂಪಗೊಂಡಿದ್ದನ್ನು ಗಮನಿಸಿ ಪುನಃ ‘ಕೆಂಪಾಪುರ’ ಎಂದು ಬರೆಸಿದರು. ಕ್ಷಣಮಾತ್ರದಲ್ಲಿ ಟ್ರಂಪ್ ಅಲ್ಲಿಂದ ಮಾಯವಾದ. ಊರು ಮೊದಲಿನಂತಾಯಿತು!