ಇ ಸ್ಪೋರ್ಟ್ಸ್ ಎಂದರೆ ಜೂಜಾಟವಷ್ಟೇ ಅಲ್ಲ…

ಇ ಸ್ಪೋರ್ಟ್ಸ್ ಎಂದರೆ ಜೂಜಾಟವಷ್ಟೇ ಅಲ್ಲ…


ಗಿರೀಶ ದೊಡ್ಡಮನಿ ಕಣ್ಮನ ಸೆಳೆಯುವಂತೆ ಅಲಂಕರಿಸಿದ ದೊಡ್ಡ ಕೋಣೆ ಅದು. ಅಲ್ಲಿ ಜೋಡಿಸಲಾಗಿದ್ದ ಮೇಜುಗಳ ಮೇಲೆ ಕಂಪ್ಯೂಟರ್‌ಗಳನ್ನು ಸಾಲಾಗಿ ಇರಿಸಲಾಗಿತ್ತು. ಒಂದೊಂದು ಕಂಪ್ಯೂಟರ್ ಮುಂದೆ ಇಬ್ಬರು ವ್ಯಕ್ತಿಗಳಿದ್ದರು. ಅಂತಹ ಪ್ರತಿಯೊಂದು ಜೋಡಿಯಲ್ಲಿ ಒಬ್ಬರು ದೃಷ್ಟಿದೋಷವುಳ್ಳವರು. ಇನ್ನೊಬ್ಬರು ಸಾಮಾನ್ಯ ವ್ಯಕ್ತಿ, ದೃಷ್ಟಿದೋಷವುಳ್ಳ ವ್ಯಕ್ತಿ ನೀಡುವ ಸೂಚನೆಯನ್ನು ಪಾಲಿಸುತ್ತಿದ್ದ ವ್ಯಕ್ತಿ ಕಂಪ್ಯೂಟರ್ ಪರದೆಯ ಮೇಲೆ ಮೂಡಿದ್ದ ಚೆಸ್ ಬೋರ್ಡ್‌ ನಲ್ಲಿ ಕಾಯಿಯನ್ನು ನಡೆಸುತ್ತಿದ್ದರು.ಇನ್ನೊಂದು ದೊಡ್ಡ ಕೋಣೆಯಲ್ಲಿ ಹಲವು ಯುವಕ, ಯುವತಿಯರು ಮೊಬೈಲ್ ಫೋನ್ ಹಿಡಿದು ಕೂತಿದ್ದರು. ಅವರೆಲ್ಲರ ಮೊಬೈಲ್ ಪರದೆಯ ಮೇಲೆ ಇಸ್ಪೀಟ್ ಎಲೆಗಳ ಚಿತ್ರಗಳು ಓಡಾಡುತ್ತಿದ್ದವು. ಅವರೆಲ್ಲ ರಮ್ಮಿ ಆಡುವುದರಲ್ಲಿ ಮಗ್ನರಾಗಿದ್ದರು. ಗ್ರಾಂಡ್ ಮಾಸ್ಟರ್ ಆಗುವ ಕನಸು ಕಾಣುತ್ತ ಅವರ ಕೈಬೆರಳುಗಳು ಸ್ತ್ರೀನ್ ಮೇಲೆ ಚಲಿಸುತ್ತಿದ್ದವು. …


ಹೌದು ಇದು ಆನ್‌ಲೈನ್‌ ಗೇಮಿಂಗ್ ಲೋಕ. ಇತ್ತೀಚೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸ್ಕಿಲ್ ಹಬ್‌ ಆನ್‌ಲೈನ್ ಗೇಮ್ಸ್ ಫೆಡರೇಷನ್ (ಎಸ್.ಒ.ಜಿ. ಎಫ್) ಆಯೋಜಿಸಿದ್ದ ದಕ್ಷಿಣ ವಲಯ ಮೈಂಡ್ ಗೇಮ್ಸ್ ಟೂರ್ನಿಯ ಚಿತ್ರಣಗಳು ಅವು. ಆದರೆ ಅಲ್ಲಿ ಜೂಜಾಟ ಅಥವಾ ವ್ಯಸನಕ್ಕೆ ಜಾಗವಿಲ್ಲ. ಅಲ್ಲಿರುವುದು ಭವಿಷ್ಯದ ಬೌದ್ಧಿಕ ಕೌಶಲ ಕ್ರೀಡೆಗಳು ಮತ್ತು ಇ ಸ್ಪೋರ್ಟ್ಸ್ ಜಗತ್ತಿನ ಚಾಂಪಿಯನ್‌ಗಳನ್ನು ಸೃಷ್ಟಿಸುವ ಧೈಯ ಮಾತ್ರ, ‘ಆನ್‌ಲೈನ್ ಗೇಮ್‌ಗಳನ್ನು ನೈತಿಕವಾದ ಚೌಕಟ್ಟಿನೊಳಗೆ ತರುವುದು ನಮ್ಮ ಧೈಯ. ಇದು ಅಪ್ಪಟ ಕೌಶಲಾಧಾರಿತವಾದ ಕ್ರೀಡಾ ವಿಭಾಗ, ನಾವು ಇಂಡಿಯನ್ ಚೆಸ್ ಮತ್ತು ಇಂಡಿಯನ್ ಅಂಧರ ಜೆಸ್ ವಿಭಾಗಗಳನ್ನು ಸೇರ್ಪಡೆ ಮಾಡಿದ್ದೇವೆ. ಅದರೊಂದಿಗೆ ಇಂಡಿಯನ್ ರಮ್ಮಿ ಕೂಡ ಆಡಿಸಲಾಗುತ್ತದೆ. ನಮ್ಮಲ್ಲಿ ಯಾವುದೇ ಆಟಗಳಿರುವುದು ವ್ಯಕ್ತಿತ್ವ ರೂಪಿಸಲು ಮತ್ತು ಮನೋಲ್ಲಾಸ ನೀಡಲು. ಆದರೆ ಅದೇ ಆಟಗಳನ್ನು ಜೂಜಿಗಾಗಿ ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ನಮ್ಮ ಉದ್ದೇಶ ನಿಯಮ ಮತ್ತು ಕೌಶಲಾಧಾರಿತವಾಗಿ ಆಟಗಳನ್ನು ಯೋಚಿಸುವುದಾಗಿದೆ. ಇದಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳು, ಫೆಡರೇಷನ್‌ಗಳು ನಮ್ಮೊಂದಿಗೆ ಕೈಜೋಡಿಸಿವೆ’ ಎಂದು ಎಸ್.ಪಿ.ಜಿ.ಎಫ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿಬಾಟಿನ್ ಭಾಕ್ರಿ ಹೇಳುತ್ತಾರೆ.ಇ ಸ್ಪೋರ್ಟ್ಸ್ ಮತ್ತು ಮೈಂಡ್ ಗೇಮ್ಸ್ಗಳಿಗೆ ಸ್ಪರ್ಧಾತ್ಮಕ ಹಾಗೂ ವೃತ್ತಿಪರತೆಯ ಚೌಕಟ್ಟು ನೀಡಲು ಎಸ್.ಒ.ಜಿ.ಎಫ್ ಎರಡು ವರ್ಷಗಳ ಹಿಂದೆ ಹುಟ್ಟಿತು. 200 ದೇಶಗಳು ಸದಸ್ಯತ್ವ ಹೊಂದಿರುವ ಅಂತರರಾಷ್ಟ್ರೀಯ ಮೈಂಡ್ ಸ್ಪೋರ್ಟ್ಸ್ ಅಸೋಸಿಯೆಷನ್ (ಐಎಂಎಸ್‌ಎ) ಸಹಭಾಗಿತ್ವವನ್ನು ಹೊಂದಿದೆ.

ಇದನ್ನೂ ಓದಿ:ಅಂಕಸಮುದ್ರ ಕೆರೆ ರಾಮ್‌ಸಾ‌ರ್ ತಾಣ


ಪಿಡೆ, ಪೊಕೊ, ಚೀನಾದ ಶಾಂಗ್ ಚೀ, ಐಇಎಸ್ಎಸ್, ಮೇಜಾನ್, ಗೋ, ಬ್ರಿಜ್ ಸೇರಿದಂತೆ ಒಂಬತ್ತು ಫೆಡರೇಷನ್‌ಗಳು ಕೂಡ ಐಎಂಎಸ್‌ಎನಲ್ಲಿ ಸದಸ್ಯತ್ವ ಹೊಂದಿವೆ. ಎಸ್.ಒ.ಜಿ.ಎಫ್ ಕೂಡ ವಿಶ್ವ ಇ ಸ್ಪೋರ್ಟ್ಸ್ ಫೆಡರೇಷನ್ಮಾನ್ಯತೆಯನ್ನೂ ಪಡೆದುಕೊಂಡಿದೆ ಎಂದು ಭಾಕ್ರಿ ಹೇಳಿದರು. ಅಂಧರ ಚೆಸ್‌ಗೆ ಪುಷ್ಟಿ ಬೌದ್ಧಿಕ ಕೌಶಲಾಧಾರಿತ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿರುವುದು ಚೆಸ್, ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿಯೂ ಪ್ರಸಿದ್ಧಿಯಾಗಿರುವ ಬೋರ್ಡ್ ಗೇಮ್ ಇದಾಗಿದೆ. ಅಂಧರ ವಿಭಾಗದ ಚೆಸ್ ಕೂಡ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಭಾರತವು ಈ ವಿಭಾಗದಲ್ಲಿಯೂ ತನ್ನ ಪಾರಮ್ಯ ಮೆರೆದಿದೆ. ಆದರೆ ಅಂಧ ಚೆಸ್ ಪಟುಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆದೃಷ್ಟಿದೋಷವುಳ್ಳ ಚೆಸ್ ಆಟಗಾರರಿಗೆ ಟೂರ್ನಿಗಳಲ್ಲಿ ಆಡಲು ಹೋಗಲು ಪ್ರಯಾಣ ಮಾಡಬೇಕಾಗುತ್ತದೆ. ನಾನು ಗಂಗೊಳ್ಳಿ ಇಲ್ಲಿಂದ ಉತ್ತರ ಭಾರತದ ಯಾವುದೇ ಭಾಗದಲ್ಲಿ ನಡೆಯುವ ಟೂರ್ನಿಯಲ್ಲಿ ಆಡಲು ಹೋಗಬೇಕೆಂದರೆ ವಿಮಾನ ಪ್ರಯಾಣವೂಕಷ್ಟಕರ. ನಮ್ಮೊಂದಿಗೆಯಾರಾದರೊಬ್ಬರನ್ನು ಸಹಾಯಕ್ಕೆ ಕರೆದೊಯ್ಯಬೇಕು. ಅದರಿಂದ ಹೆಚ್ಚು ಹಣವನ್ನೂ ವ್ಯಯಿಸಬೇಕಾಗುತ್ತಿತ್ತು. ಆದರೆ ಅದೇ ಆಟವನ್ನು ಈಗ ಆನ್‌ಲೈನ್ ಮೂಲಕ ಆಡುವುದು ಅನುಕೂಲವಾಗಿದೆ. ಎಸ್.ಒ.ಜಿ.ಎಫ್ ಇಲ್ಲಿ ಹೈಬ್ರಿಡ್ ಮಾದರಿಯಲ್ಲಿ ದೃಷ್ಟಿದೋಷವುಳ್ಳವರಿಗೆ ಚೆಸ್ ಆಯೋಜಿಸಿದೆ’ ಎಂದು ಅಂಧರ ಚೆಸ್ ವಿಭಾಗದ ಏಷ್ಯನ್ ಚಾಂಪಿಯನ್ ಕಿಶನ್ ಗಂಗೊಳ್ಳಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

Leave a Comment