ಕೊನೆಯ ಪರೀಕ್ಷೆ, ಆ… 3 ಗಂಟೆ

ಕೊನೆಯ

ಕೊನೆಯ ಪರೀಕ್ಷೆ, ಆ… 3 ಗಂಟೆ ಶಾಲೆಯಲ್ಲಿ ಕಲಿಕೆಯ ವಿಧಾನ ಮತ್ತು ಫಲಿತಾಂಶಕ್ಕೆ ಹೊಸ ವ್ಯಾಖ್ಯಾನ ಬೇಕಾಗಿದ್ದು, ಶಿಕ್ಷಣ ಕ್ರಮವನ್ನು ಪುನರ್‌ರೂಪಿಸಬೇಕಿದೆ ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನಕ್ಕೆ ಒಳಪಡುವ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿ ಗಳು ನಿಗದಿತ ಕಲಿಕಾ ಸಾಮರ್ಥ್ಯ ಹೊಂದಿರದಿದ್ದರೆ ಅನುತ್ತೀರ್ಣರಾಗಬೇಕಾಗುತ್ತದೆ ಎಂಬ ಇತ್ತೀಚಿನ ಆದೇಶ, ನಮ್ಮ ಕಲಿಕೆಯ ಮಾನದಂಡಗಳನ್ನು ಪರಾಮರ್ಶೆಗೆ ಒಳಪಡಿಸಬೇಕಾದ ಅಗತ್ಯವನ್ನು ನಮಗೆ ಮನಗಾಣಿಸುತ್ತದೆ. ಐದನೇ ತರಗತಿಯಲ್ಲಿರುವ ಒಂದು ಮಗು ‘ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು’ ಎಂಬುದನ್ನು ಕಲಿಯುತ್ತದೆ ಮತ್ತು … Read more

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ

ಸಿಡ್ನಿ ಟೆಸ್ಟ್ ಪಂದ್ಯ

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ   ಮೆಲ್ಬರ್ನ್ ಬಾರ್ಡರ್-ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೆಸ್ಟ್ ಸರಣೆಯಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಇದುವರೆಗೆ ಅಮೋಘವಾಗಿ ಬೌಲಿಂಗ್ ಮಾಡಿದ್ದಾರೆ. ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2-1 ರಿಂದ ಕೊನೆಯ ಮತ್ತು ಐದನೇ ಪಂದ್ಯವು ಸಿಡ್ನಿಯಲ್ಲಿ ಶುಕ್ರವಾರ ಆರಂಭವಾಗಲಿದ್ದು, 2-2ರ ಸಮಬಲ ಸಾಧಿಸುವತ್ತ ಭಾರತ ಚಿತ್ತ ನೆಟ್ಟಿದೆ. ಫಲಿತಾಂಶ ಏನೇ ಬರಲಿ; ಆದರೆ ಬೂಮ್ರಾ ಮಾತ್ರ ಮನ ಗೆದ್ದಿದ್ದಾರೆ. ಮನಸೋತವರಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ … Read more

ಉತ್ತಮ ಹೆಜ್ಜೆ

ಉತ್ತಮ ಹೆಜ್ಜೆ

ಉತ್ತಮ ಹೆಜ್ಜೆ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆ ಈಗಿನ ದಿನಗಳಲ್ಲಿ ವೆಚ್ಚದಾಯಕವಾಗಿ ಪರಿಣಮಿಸಿದೆ. ಅಲ್ಲದೆ, ಬದಲಾದ ಜೀವನ ಪದ್ಧತಿ, ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ಅನಾರೋಗ್ಯದ ಪ್ರಮಾಣವೂ ಹೆಚ್ಚುತ್ತಿದ್ದು, ಕುಟುಂಬದಲ್ಲಿ ಒಬ್ಬ ಸದಸ್ಯ/ಸದಸ್ಯೆ ಕಾಯಿಲೆ ಬಿದ್ದರೂ, ಉಳಿತಾಯವೆಲ್ಲ ಕರಗಿಹೋಗಿ ಸಾಲದ ಹೊರೆ ಹೊತ್ತುಕೊಳ್ಳಬೇಕಾಗುತ್ತದೆ. ಅದೆಷ್ಟೋ ಮಾಧ್ಯಮ ವರ್ಗದ ಕುಟುಂಬಗಳಂತೂ ವೈದ್ಯಕೀಯ ಚಿಕಿತ್ಸೆ ಉಂಟುಮಾಡಿದ ಆರ್ಥಿಕ ಹೊಡೆತಕ್ಕೆ ನಲುಗಿ ಹೋಗಿವೆ. ಆದರೆ, ಹೊಸವರ್ಷದ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಬಹುದಿನಗಳ ಬೇಡಿಕೆಯನ್ನು … Read more

ಸಂಬಂಧದ ಬೆಸುಗೆ: ನವ ವರ್ಷದ ಒಸಗೆ

ಸಂಬಂಧದ ಬೆಸುಗೆ

ಸಂಬಂಧದ ಬೆಸುಗೆ: ನವವರ್ಷದ ಒಸಗೆ ನಮ್ಮ ಆಯುಷ್ಕದ ಒಂದು ವರ್ಷ ಮುಗಿದು ಮತ್ತೊಂದು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಈ ಒಂದು ವರ್ಷದ ಅವಧಿಯಲ್ಲಿ ಎಷ್ಟೊಂದು ಸಂಬಂಧಗಳಲ್ಲಿ ಬಿರುಕುಗಳು ಮೂಡಿವೆ ಮತ್ತು ಎಷ್ಟೊಂದು ಹೊಸ ಸಂಬಂಧಗಳು ಬೆಸೆದುಕೊಂಡಿವೆ! ಈ ಹೊಸ ಬೆಸುಗೆ ಗಳಲ್ಲಿ ಎಷ್ಟು ಸಂಬಂಧಗಳು ಕೊನೆತನಕ ಉಳಿಯುತ್ತವೋ ಮತ್ತು ಎಷ್ಟು ಸಂಬಂಧಗಳಲ್ಲಿ ಹೊಸ ಬಿರುಕುಗಳು ಮೂಡುತ್ತವೋ ತಿಳಿಯದು. ಪ್ರತಿ ಸಂಬಂಧವನ್ನೂ ಜತನದಿಂದ ಕಾಪಾಡಿ ಕೊಳ್ಳಬೇಕೆಂಬ ನಮ್ಮ ಕಾಳಜಿಯ ಹೊರತಾಗಿಯೂ ಸಂಬಂಧಗಳು ಅದೇಕೆ ಹಳಸುತ್ತವೆ? ಅದಕ್ಕೆ ಕಾರಣವಿಲ್ಲ … Read more

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು

ದೇಹವೆಂಬ ಗುಡಿಗೆ

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು ಉತ್ತಮ ಆರೋಗ್ಯಕ್ಕಾಗಿ ಸಮತೋಲನದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಂಥ ಆರೋಗ್ಯದಾಯಕ ಆಹಾರವನ್ನು ದೊರಕಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಮಾಡಿವೆ. ಹಸಿರು ಕ್ರಾಂತಿಯ ಮೊದಲಿನ ಕಾಲಘಟ್ಟದಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದ ಕಾರಣ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆ ಬಹಳ ಜಾಸ್ತಿಯಿತ್ತು. ಆದರೆ ಇಂದು ಸರ್ಕಾರದ ಯೋಜನೆಗಳಿಂದ ಮತ್ತು ಸುಧಾರಿಸಿದ ಜೀವನಮಟ್ಟದ ಕಾರಣದಿಂದ ಜನರಿಗೆ ಆಹಾರವು ಸುಲಭವಾಗಿ ಲಭ್ಯವಾಗುತ್ತಿದೆ. ನಮ್ಮಲ್ಲಿ ಆಹಾರವನ್ನು ಖರೀದಿಸಲು ಹಣವಿರಬಹುದು. ಆದರೆ ಸಮತೋಲನ … Read more

ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ !

ಮನೋನಿಗ್ರಹವೇ

ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ ! ಭಗವದ್ಗೀತೆ ಒಂದು ರತ್ನಾಕರ ರತ್ನಗಳ ತವರು ಮನೆ .ಅದನ್ನು ಶುದ್ಧ ಮನಸ್ತಿನಿಂದ, ಪೂರ್ವಗ್ರಹವಿಲ್ಲದೆ ಓದಬೇಕಷ್ಟೆ, ಏಕೆಂದರೆ ಎಲ್ಲ ಗ್ರಹಚಾರಗಳಿಗಿಂತಲೂ, ಅನಿಷ್ಟ ಗ್ರಹಗಳಿಗಿಂತಲೂ ಅಪಾಯಕಾರಿ ಈ ಪೂರ್ವಗ್ರಹ. ಗೀತೆಯ ಆರನೇ ಅಧ್ಯಾಯದಲ್ಲಿ ಒಂದು ಅಮೂಲ್ಯ ರತ್ನವಿದೆ. ಅರ್ಥಾಕ್ ಒಂದು ಅದ್ಭುತ ಶ್ಲೋಕವಿದೆ. ಮಹಾಭಾರತ ಎಂಬ ಸಮುದ್ರದಿಂದ ಮೊಟ್ಟಮೊದಲಿಗೆ ಭಗವದ್ಗೀತೆಯನ್ನು ಹೆಕ್ಕಿ ಹೊರಕ್ಕೆ ತಂದು ,ಅದಕ್ಕೆ ಅದ್ಭುತವಾದ ಭಾಷ್ಯವೊಂದನ್ನು ಬರೆದು ಪ್ರಪಂಚಕ್ಕೆ ಚರಿತ್ರಾರ್ಹ. ಸೇವೆಗೆದ್ದುಶ್ರೀ ಶಂಕರಾಚಾರ್ಯರ ಪ್ರಕಾರ ಈ ಶ್ಲೋಕವೇ ಭಗವದ್ಗೀತೆಯ ಸಾರ. … Read more

ಮಾನವೀಯ ಮೌಲ್ಯ ಸಾರಿದ ಯೇಸು

ಮಾನವೀಯ ಮೌಲ್ಯ

ಮಾನವೀಯ ಮೌಲ್ಯ ಸಾರಿದ ಯೇಸು ಕ್ರಿಸ್ತ ಜಯಂತಿ ಅಥವಾ ಕ್ರಿಸ್‌ಮಸ್‌ ಎನ್ನುವ ಹಬ್ಬ ಹೆಸರೇ ಸೂಚಿಸುವಂತೆ ಭಗವಂತನು ಮಾನವನಾಗಿ ಅವತಾರ ಎತ್ತಿ ಬಂದಂತಹ ಐತಿಹಾಸಿಕ ಹಾಗೂ ಚಾರಿತ್ರಿಕ ಘಟನೆ ಎಂಬುದು ನಮ್ಮ ವಿಶ್ವಾಸ, ದೇವಮಾನವ ಪ್ರಭು ಯೇಸು ಕ್ರಿಸ್ತನ ಈ ಜನನೋತ್ಸವ ಹಲವಾರು ಕಾರಣಗಳಿಂದಾಗಿ ಭಾಷೆ, ಭೇದ, ಜಾತಿ, ಧರ್ಮ, ದೇಶ, ಜನಾಂಗಗಳ ಗಡಿಯನ್ನು ದಾಟಿ ಸರ್ವ ಜನಾಂಗದವರು ಆಚರಿಸುವಂತಹ ಜಾಗತಿಕ ಹಬ್ಬ ಎಂದರೆ ತಪ್ಪಲ್ಲ. ಕ್ರಿಸ್‌ಮಸ್ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವಂತಹದ್ದು ಸಾಂತಾ ಕ್ಲಾಸ್, … Read more

ದೈತ್ಯ ಅಲ್ಲಿ ಸಹೋದರರ ನಡುವೆ ಅಣುವಿನಂತೆ ಕಂಡ ಗಾಂಧಿ!

ದೈತ್ಯ

ದೈತ್ಯ ಅಲ್ಲಿ ಸಹೋದರರ ನಡುವೆ ಅಣುವಿನಂತೆ ಕಂಡ ಗಾಂಧಿ! ನಾನು ಮೊದಲನೇ ವರ್ಷದ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ 1974ನೆಯ ಡಿಸೆಂಬರ್ ತಿಂಗಳ ಉತ್ತಾರಾರ್ಧದಲ್ಲಿ ಬೆಳಗಾಂನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯುತ್ತದೆಂದು ಗೊತ್ತಾಯಿತು. ಶಸ್ತ್ರಚಿಕಿತ್ಸೆಯ ಅನಂತರ ಆಗತಾನೆ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಮಹಾತ್ಮ ಗಾಂಧಿಯವರು ಆ ಆಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎಂಬ ವಾರ್ತೆ ನಮ್ಮನ್ನೆಲ್ಲ ಅಕರ್ಷಿಸಿತು. ಭಾರತ ಕಂಡದ ಬದುಕನ್ನೆಲ್ಲ ತುಂಬಿಕೊಂಡಿದ್ದರು ಗಾಂಧೀಜಿ. ಅವರಿಗೆ ಶಿಕ್ಷೆಯಾಗಿದ್ದು, ಶಸ್ತ್ರಚಿಕಿತ್ಸೆಯಾಗಿದ್ದು ಸೆರೆಯ ಅವಧಿ ಮುಗಿಯುವ ಮುನ್ನವೇ ಅವರು ಬಿಡುಗಡೆ ಹೊಂದಿ ಹೊರಗೆ ಬಂದದ್ದು … Read more

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ?

ಎತ್ತ ಸಾಗುತ್ತಿದೆ

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ? ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ನುಡಿ ಮಹೋನ್ನತಿಯ ಕುರಿತು ಹೇಳಿದ ಮಾತಿದು. ಮಾತು ವ್ಯಕ್ತಿತ್ವದ ಪ್ರತಿಬಿಂಬ. ವ್ಯಕ್ತಿ ಬೆಳೆದು ಬಂದ ಸಾಮಾಜೋ-ಆರ್ಥಿಕ ಪರಿಸರ, ನಂಬಿಕೊಂಡು ಬಂದಿರುವ ಸಿದ್ದಾಂತ ಮತ್ತು ಅವರಿಗೆ ದಕ್ಕಿದ ಸಂಸ್ಕಾರದಿಂದ ಮಾತುಗಳು ಒಡಮೂಡುತ್ತವೆ. ಆದ್ದರಿಂದಲೇ ಅವು ಮನಸ್ಸಿನ ಕನ್ನಡಿಗಳು. ಬಸವಣ್ಣನವರ ಕೂಡಲಸಂಗಯ್ಯನಲ್ಲಿ ‘ಆಸೆ ಅಮಿಷಾದಿ ನೀಚ ಗುಣಗಳೇ ನಮ್ಮ ನಾಲಿಗೆಯನ್ನು ನಿರ್ವಹಿಸುತ್ತವೆ. ಅದ್ದರಿಂದ ಆ ಎಲ್ಲಾ ದುಷ್ಟ ಗುಣಗಳನ್ನು ನನ್ನ ಮನಸ್ಸಿನಿಂದ ತೆಗೆದು ಹಾಕಬೇಕು’ಎಂದು ಸಂಗಯ್ಯನಲ್ಲಿ ಅರ್ಥಾತ್ ತಮ್ಮ … Read more

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ

ರಂಗಭೂಮಿಗೆ

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ ಜುಲೇಖಾ ಬೇಗಂ ವೃತ್ತಿ‌ ರಂಗಭೂಮಿಯ ಅತ್ಯುತ್ತಮ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತೆ. ಕಲಾವಿದೆಯಾಗಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದವರು. ಹೆರಿಗೆಯಾಗಿ ಐದನೇ ದಿನವೇ ರಂಗ ಪ್ರವೇಶಿಸಿದ ಧೀಮಂತೆ. ಇದು ಅವರ ಕಾಯಕ ಪ್ರಜ್ಞೆ, ನಿಷ್ಠೆ ,ಬದ್ದತೆಗೆ ಒಂದು ಉದಾಹರಣೆಯಾಷ್ಟೇ . ಅವರ ಉಸಿರೇ ರಂಗಭೂಮಿ .ಬದುಕಿನ ಆಸೆ ಆಕಾಂಕ್ಷೆ ,ಸುಖ ಸಂತಸಗಳನ್ನುತೊರೆದು ಇಡೀ ಜೀವನವನ್ನೇ ರಂಗಭೂಮಿಗೆ ಮೀಸಲಿಟ್ಟವರು ಅವರು .ಅಭಿನಯವೊಂದು ತಪಸ್ಸೆಂದು ಹಗಲು ರಾತ್ರಿ ಅದನ್ನೇ ಜಪಿಸಿದವರು. ಜುಲೇಖಾ ಬೇಗಂ ಅವರು … Read more