ವಸಿಷ್ಠರ ವರ್ಣನೆಯಲ್ಲಿ ಯುದ್ಧರಂಗದ ಕೋಪ
ಶ್ರೀ ವಸಿಷ್ಠರು ಆಧ್ಯಾತ್ಮ ವಿದ್ಯೆಯಲ್ಲಷ್ಟೇ ಅಲ್ಲದೆ, ಯುದ್ಧವಿದ್ಯೆ ಯಲ್ಲಿಯೂ ಕುಶಲರಾಗಿರಬಹುದು. ಅವರು ಮಾಡುತ್ತಿರುವ ಯುದ್ಧವರ್ಣನೆಯನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ ಅಥವಾ ‘ಅಧ್ಯಾತ್ಮವಿದ್ಯಾ ವಿದ್ಯಾನಾಮ್’ ಎಂಬ ಗೀತೆಯ ಮಾತಿನಂತೆ ಅಧ್ಯಾತ್ಮ ವಿದ್ಯೆಯು ಯುದ್ಧವಿದ್ಯೆಯೂ ಸೇರಿದಂತೆ ಎಲ್ಲ ವಿದ್ಯೆಗಳಿಗಿಂತಲೂ ಶ್ರೇಷ್ಠವಾದ, ಎಲ್ಲ ವಿದ್ಯೆಗಳಿಗೂ ರಾಜನಾಗಿ ಇರುವಂಥದ್ದು. ಆದ್ದರಿಂದ ಅಧ್ಯಾತ್ಮ ವಿದ್ಯೆಯಲ್ಲಿ ಅತಿಶಯ ನಿಷ್ಣಾತರಾಗಿರುವುದರಿಂದ ಶ್ರೀ ವಸಿಷ್ಠರಿಗೆ ಯುದ್ಧವಿದ್ಯೆಯ ಅರಿವು ಬಂದಿರಬಹುದು ಹಿಂದೆ ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಈಗ ವಿದೂರಥನೆಂಬ ಚಕ್ರವರ್ತಿಯಾಗಿ ಜನ್ಮ ಪಡೆದಿದ್ದಾನೆ. ಅವನ ರಾಜಧಾನಿಯ ಸಮೀಪದಲ್ಲಿ ನಡೆಯುತ್ತಿರುವ … Read more