HSRP ನಂಬರ್ ಪ್ಲೇಟ್ ಕೊನೆ ದಿನಾಂಕ ಮುಂದೂಡಲಾಗಿದೆ ಎಂದು ಶಾಸಕ ರಾಮಲಿಂಗ ರೆಡ್ಡಿ ಘೋಷಿಸಿದ್ದಾರೆ.
ವಾಹನ ಸವಾರರಿಗೆ ಇದು ಖುಷಿ ಸುದ್ದಿಯಾಗಿದ್ದು HSRPP ನಂಬರ್ ಪ್ಲೇಟ್ ಕೊನೆ ದಿನಾಂಕ ಇನ್ನು 3 ತಿಂಗಳು ವಿಸ್ತರಿಸಲಾಗಿದೆ. ಈ ಬಗ್ಗೆ ಸ್ವತಃ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರೇ ಘೋಷಣೆ ಮಾಡಿದ್ದಾರೆ. ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಮಾದೇಗೌಡರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಯೋಜನೆ ಪಾರದರ್ಶಕವಾಗಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಫೇಕ್ ವೆಬ್ ಸೈಟ್ ಗಳ ವಿರುದ್ಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆಗಿದ್ದ ಕೊನೆ ದಿನಾಂಕವನ್ನು ರಾಜ್ಯ ಸರ್ಕಾರ ಮತ್ತೆ 3 ತಿಂಗಳ ಕಾಲ ವಿಸ್ತರಿಸಿರುವುದಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಘೋಷಿಸಿದ್ದಾರೆ. ಇದರಿಂದಾಗಿ ಕೊನೆ ಕ್ಷಣದಲ್ಲಿ ನೋಂದಣಿಗಾಗಿ ಪರದಾಡುತ್ತಿದ್ದ ವಾಹನ ಮಾಲೀಕರಿಗೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಈ ವಿಚಾರವಾಗಿ ಬುಧವಾರ ವಿಧಾನ ಪರಿಷತ್ ನಲ್ಲಿ ಸ್ವತಃ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಯೋಜನೆ ಪಾರದರ್ಶವಾಗಿದ್ದು ಫೇಕ್ ವೆಬ್ ಸೈಟ್ ಗಳ ವಿರುದ್ಧ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ ಆನ್ಲೈನ್ ನಲ್ಲಿ ಫೇಕ್ ವೆಬ್ ಸೈಟ್ ಹಾವಳಿ:-
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಮಾದೇಗೌಡ ಅವರು, ಹಳ್ಳಿಗಾಡಿನ ವಾಹನಗಳಿಗೂ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಬೇಕಿದೆ. ಸರ್ಕಾರ ನೀಡಿರುವ ಕೊನೆ ದಿನಾಂಕ ವಿಸ್ತಾರ ಮಾಡಬೇಕು ಹಾಗೂ ಆನ್ಲೈನ್ ನಲ್ಲಿ ಫೇಕ್ ವೆಬ್ ಸೈಟ್ ಗಳ ಹಾವಳಿ ಹೆಚ್ಚಾಗಿದೆ. ಇದರ ಬಗ್ಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.
Read More :-ಇಂಡಿಯಾ V/S ಆಸ್ಟ್ರೇಲಿಯ ಅಂಡರ್ 19 ವಿಶ್ವಕಪ್ ಫೈನಲ್
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗ ರೆಡ್ಡಿ ಅವರು, ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚಿನ ವಾಹನಗಳಿದ್ದು ಇನ್ನೂ ಬಹುತೇಕ ವಾಹನಗಳ ನೋಂದಣಿ ಬಾಕಿ ಇದೆ. ಹೀಗಾಗಿ ಹೆಚ್ ಎಸ್ ಆರ್ ಪಿ ಪ್ಲೇಟ್ ಅನ್ನು ಹಾಕಿಸಲು ಮೂರು ತಿಂಗಳುಗಳ ಕಾಲ ವಿಸ್ತರಿಸುತ್ತೇವೆ. ಈ ಯೋಜನೆ ಪಾರದರ್ಶಕವಾಗಿದೆ. ಎಲ್ಲೂ ಕ್ಯಾಶ್ ಟ್ರಾನ್ಸಾಕ್ಷನ್ ಇಲ್ಲ. ಫೇಕ್ ಸೈಟ್ ಬಗ್ಗೆ ಎಚ್ಚರ ವಹಿಸಲಾಗುತ್ತದೆ. ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಾರಿಗೆ ಇಲಾಖೆ ಹೆಚ್ ಎಸ್ ಆರ್ ಪಿ ನೋಂದಣಿಗೆ ಫೆಬ್ರವರಿ 17ಕ್ಕೆ ಕೊನೆ ದಿನಾಂಕ ನಿಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಹಳಷ್ಟು ಮಂದಿ ನೋಂದಣಿಗೆ ತೊಡಗಿದ್ದರಿಂದ ತಾಂತ್ರಿಕ ಅಡಚಣೆ ಉಂಟಾಗಿದ್ದು. ಹೀಗಾಗಿ ಇಡೀ ರಾಜ್ಯದಲ್ಲಿ 2 ಕೋಟಿ ವಾಹನಗಳ ಪೈಕಿ 18.5 ಲಕ್ಷ ವಾಹನಗಳಿಗೆ ಅಂದರೆ ಶೇ. 9ರಷ್ಟು ವಾಹನಗಳಿಗೆ ಮಾತ್ರ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಕಾರ್ಯ ಮುಗಿದಿದೆ. ಅದರಲ್ಲೂ ಶೇ. 90ರಷ್ಟು ಸರ್ಕಾರಿ ವಾಹನಗಳಿಗೆ ನೋಂದಣಿ ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಸಾರ್ವಜನಿಕ ರಿಂದ ಒತ್ತಾಯ ಕೇಳಿ ಬಂದಿತ್ತು.
ಹೀಗಾಗಿ ಸಚಿವ ರಾಮಲಿಂಗ ರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊನೆ ದಿನಾಂಕ ವಿಸ್ತರಿಸುವಂತೆ ಸೂಚನೆ ನೀಡಿದ್ದರು.
HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ ಕೊನೆ ದಿನಾಂಕ:-
2019 ಏಪ್ರಿಲ್ 2ರ ಬಳಿಕ ಖರೀದಿಸಲ್ಪಡುವ ವಾಹನಗಳಿಗೆ ಶೋರೂಂನಿಂದ ಖರೀದಿಸುವಾಗಲೇ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಲಾಗುಗುತ್ತಿದೆ. ಆದರೆ ಅದಕ್ಕಿಂತ ಹಿಂದೆ ಖರೀದಿಸಿದ ವಾಹನಗಳಿಗೆ ಅಳವಡಿಸಲು ನವೆಂಬರ್ 17 ವರೆಗೆ ಸರ್ಕಾರ ಕೊನೆ ದಿನಾಂಕ ನೀಡಿತ್ತು. ಆದರೆ ವಾಹನ ಮಾಲೀಕರಿಂದ ನಿರೀಕ್ಷಿತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ 3 ತಿಂಗಳು ಅಂದರೆ ಫೆಬ್ರವರಿ 17ರವರೆಗೂ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಾದರೂ ಬಹುತೇಕ ವಾಹನಗಳ ನೋಂದಣಿ ಪ್ರಕ್ರಿಯೆ ಮುಗಿಯಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ ಅದು ಈಗಲೂ ಸುಳ್ಳಾಗಿದ್ದು ಮತ್ತೆ 3 ತಿಂಗಳು ವಿಸ್ತರಣೆ ಮಾಡಲಾಗಿದೆ.
HSRP ನಂಬರ್ ಪ್ಲೇಟ್ ನಿಮಗೂ ಬೇಕಾದಲ್ಲಿ ಈ HSRP ಲಿಂಕ್ ಮೇಲೆ ಕ್ಲಿಕ್ ಮಾಡಿ
Adastu bega navu hakisutteve thanks for the information