ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ

ದೇಗುಲ ಪ್ರವೇಶ

ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ ಗಾಂಧೀಜಿ ೧೯೩೪ರಲ್ಲಿ ಉಡುಪಿಗೆ ಅಲ್ಲಿ ಅವರು ಸಾರ್ವಜನಿಕ ಭಾಷಣದಲ್ಲಿ ‘ಉಡುಪಿ ದಿನಗಳಿಂದ ನನ್ನ ಮನಸ್ಸಿನಲ್ಲಿ ಇದೆ. ಇಲ್ಲಿಯ ಕೃಷ್ಣ ದೇವಾಲಯದ ಬಗ್ಗೆ ಕೇಳಿ ತಿಳಿದಿದ್ದೇನೆ. ಜಾತಿಯ ಕಾರಣದಿಂದ ಭಕ್ತ ಕನಕನಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಕಾರಣ. ಇಲ್ಲಿಯ ಕೃಷ್ಣದೇವರು ತಿರುಗಿ ಭಕ್ತನಿಗೆ ದರ್ಶನ ದಯಪಾಲಿಸಿದ ಕಥೆಯನ್ನು ಅರಿತಿದ್ದೇನೆ. ಇದು ಭಾರತದ ಜಾತಿ ತಾರತಮ್ಮ ನಿವಾರಣೆ ಸಂಬಂಧದ ಅರ್ಥಪೂರ್ಣ ರೂಪಕ. ದೇವರೇ ಪರಿಹಾರ ಸೂಚಿಸಿರುವುದು ನಿಜಕ್ಕೂ ಒಂದು ಅಪರೂಪದ ಸಂಗತಿ. ಇದು ನನ್ನ … Read more

ಸಂಬಂಧದ ಬೆಸುಗೆ: ನವ ವರ್ಷದ ಒಸಗೆ

ಸಂಬಂಧದ ಬೆಸುಗೆ

ಸಂಬಂಧದ ಬೆಸುಗೆ: ನವವರ್ಷದ ಒಸಗೆ ನಮ್ಮ ಆಯುಷ್ಕದ ಒಂದು ವರ್ಷ ಮುಗಿದು ಮತ್ತೊಂದು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಈ ಒಂದು ವರ್ಷದ ಅವಧಿಯಲ್ಲಿ ಎಷ್ಟೊಂದು ಸಂಬಂಧಗಳಲ್ಲಿ ಬಿರುಕುಗಳು ಮೂಡಿವೆ ಮತ್ತು ಎಷ್ಟೊಂದು ಹೊಸ ಸಂಬಂಧಗಳು ಬೆಸೆದುಕೊಂಡಿವೆ! ಈ ಹೊಸ ಬೆಸುಗೆ ಗಳಲ್ಲಿ ಎಷ್ಟು ಸಂಬಂಧಗಳು ಕೊನೆತನಕ ಉಳಿಯುತ್ತವೋ ಮತ್ತು ಎಷ್ಟು ಸಂಬಂಧಗಳಲ್ಲಿ ಹೊಸ ಬಿರುಕುಗಳು ಮೂಡುತ್ತವೋ ತಿಳಿಯದು. ಪ್ರತಿ ಸಂಬಂಧವನ್ನೂ ಜತನದಿಂದ ಕಾಪಾಡಿ ಕೊಳ್ಳಬೇಕೆಂಬ ನಮ್ಮ ಕಾಳಜಿಯ ಹೊರತಾಗಿಯೂ ಸಂಬಂಧಗಳು ಅದೇಕೆ ಹಳಸುತ್ತವೆ? ಅದಕ್ಕೆ ಕಾರಣವಿಲ್ಲ … Read more

ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ಚೆಸ್‌ ಸಂಭ್ರಮ

ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ ಈ ವರ್ಷ ಚೆಸ್ ಆಟವು ಭಾರತದ ಪಾಲಿಗೆ ಸಂಭ್ರಮದ ಹೊನಲು ಹರಿಸಿದೆ. ಇದನ್ನು ಹೆಚ್ಚಿಸುವಂತೆ ಗ್ರಾಂಡ್‌ಮಾಸ್ಟ‌ರ್ ಕೋನೇರು ಹಂಪಿ ಅವರು ವರ್ಷದ ಕೊನೆಯಲ್ಲಿ ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ನಲ್ಲಿ ನಡೆದ ಮಹಿಳಾ ವಿಶ್ವ ಕ್ಯಾಪಿಡ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡರು. ಜಾರ್ಜಿಯಾದಲ್ಲಿ 2019ರಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದಿದ್ದ ಹಂಪಿ, ಈ ಪ್ರಶಸ್ತಿಯನ್ನು ಎರಡನೇ ಬಾರಿ ಗೆದ್ದ ವಿಶ್ವದ ದ್ವಿತೀಯ ಆಟಗಾರ್ತಿ ಎನಿಸಿದರು. ಈ ಬಾರಿ ಬೆಳ್ಳಿ ಗೆದ್ದ ಚೀನಾದ ಜು … Read more

ಕೇಂದ್ರ ಚಾಟಿ ಬಳಿಕ ಕಾಡಿಗೆ ಜಾಗ

ಕೇಂದ್ರ ಚಾಟಿ

ಕೇಂದ್ರ ಚಾಟಿ ಬಳಿಕ ಕಾಡಿಗೆ ಜಾಗ ನವದೆಹಲಿ: ಬರಪೀಡಿತ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದ ಬಳಿಕ ಪರಿಹಾರಾತ್ಮಕ ಅರಣೀಕರಣಕ್ಕೆ ರಾಜ್ಯ ಸರ್ಕಾರವು 508 ಎಕರೆ ಜಾಗ ಗುರುತಿಸಿದೆ. ಕೇಂದ್ರ ಸರ್ಕಾರಕ್ಕೆ ವಿವರಣೆಯನ್ನೂ ನೀಡಿ. ಯೋಜನೆಯ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, “ಯೋಜನೆ ಯಿಂದಾಗಿ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿಗಳಿದ್ದು, ಈ … Read more

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು

ದೇಹವೆಂಬ ಗುಡಿಗೆ

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು ಉತ್ತಮ ಆರೋಗ್ಯಕ್ಕಾಗಿ ಸಮತೋಲನದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಂಥ ಆರೋಗ್ಯದಾಯಕ ಆಹಾರವನ್ನು ದೊರಕಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಮಾಡಿವೆ. ಹಸಿರು ಕ್ರಾಂತಿಯ ಮೊದಲಿನ ಕಾಲಘಟ್ಟದಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದ ಕಾರಣ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆ ಬಹಳ ಜಾಸ್ತಿಯಿತ್ತು. ಆದರೆ ಇಂದು ಸರ್ಕಾರದ ಯೋಜನೆಗಳಿಂದ ಮತ್ತು ಸುಧಾರಿಸಿದ ಜೀವನಮಟ್ಟದ ಕಾರಣದಿಂದ ಜನರಿಗೆ ಆಹಾರವು ಸುಲಭವಾಗಿ ಲಭ್ಯವಾಗುತ್ತಿದೆ. ನಮ್ಮಲ್ಲಿ ಆಹಾರವನ್ನು ಖರೀದಿಸಲು ಹಣವಿರಬಹುದು. ಆದರೆ ಸಮತೋಲನ … Read more

ಸಮತೋಲನದ ಮನಸ್ಸು

ಸಮತೋಲನದ ಮನಸ್ಸು

ಸಮತೋಲನದ ಮನಸ್ಸು ಮನಸ್ಸು ಇಬ್ಬದಿಯ ಕನ್ನಡಿ. ಮನಸ್ಸು ನಮ್ಮ ವ್ಯಕ್ತಿತ್ವದ ಬಹು ಮುಖ್ಯ ಆಯಾಮ. ಇಡೀ ಜಗತ್ತು ಪ್ರತಿಫಲಿತವಾಗುವುದು ಮತ್ತು ನಾವು ಅದನ್ನು ಕಾಣುವ ಬಗೆ – ಎರಡೂ ಮನಸ್ಸೆಂಬ ಕನ್ನಡಿ- ಯಲ್ಲಿ ಬಿಂಬಿತವಾಗುತ್ತದೆ. ಶಾಂತಿ, ಸಮಾಧಾನ, ಬದುಕಿನ ಸೊಗಸು ಎಲ್ಲವೂ ನಮ್ಮ ಅರಿವಿಗೆ, ಅನುಭವಕ್ಕೆ ಬರುವುದು ಮನಸ್ಸಿನ ಮೂಲಕವೇ. ಹೀಗಾಗಿ ಮಾನಸಿಕ ಆರೋಗ್ಯವೇ ನಮ್ಮ ಜೀವನದ ಸಂತೋಷಗಳಿಗೆ ಬುನಾದಿ. ಸಮತೋಲನದಲ್ಲಿರುವ ತಕ್ಕಡಿಯು ವಸ್ತು ವನ್ನು ಸರಿಯಾಗಿ ತೂಗುವಂತೆ, ಸಮತೋಲನದಲ್ಲಿರುವ ಮನಸ್ಸು ಮಾತ್ರ ಬದುಕಿನ ಮೌಲ್ಯಗಳನ್ನು ಸರಿಯಾಗಿ … Read more

ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು

ನಾಟ್ಯ ನಿಲ್ಲಿಸಿದ

ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು ಉಸ್ತಾದ್ ಜಾಕಿರ್ ಹುಸೇನ್ ಹೆಸರು ಕೇಳಿದರೆ ಸಾಕು ನಮಗರಿಯದೆ “ಧಾ ತರಿಕಿಟ ಗಿನ್ನಧಿನ್ನಾ” ಎಂದು ಲಯವಾದ ತಬಲಾ ಸದ್ದು ಕೇಳಿದ ಅನುಭವ ಆಗುತ್ತದೆ, ಅಂದರೆ ಉಸ್ತಾದರೆ ತಬಲಾ ವಾದನ ನಮ್ಮ ನಿಮ್ಮೆಲ್ಲರ ಮೇಲೆ ಅಷ್ಟೊಂದು ಪ್ರಭಾವ ಮಾಡಿದೆ ಎಂದರ್ಥ ಏಳನೇ ವರ್ಷಕ್ಕೆ ತಬಲ ಅಭ್ಯಾಸ ಆರಂಭಿಸಿದ ಜಾಕಿರ್ ಹುಸೇನ್ ಕೇವಲ ಹನ್ನೆರಡನೇ ವರ್ಷಕ್ಕೆ ಜನ ಮೆಚ್ಚುವ ತಬಲ ಕಾರ್ಯಕ್ರಮವನ್ನು ಸಾದರಪಡಿಸಿದ್ದರು. ಆ ವಯಸ್ಸೇ ಹಾಗೆ ಕ್ರಿಕೆಟ್, ಫುಟ್‌ಬಾಲ್ ಎಂದು ಮನಸು ಆಟವಾಡಲು … Read more

ಕಂಪನಿ ಷೇರಿನ ಮೇಲೆ ಹೂಡಿಕೆ ಹೇಗೆ?

ಕಂಪನಿ ಷೇರಿನ

ಕಂಪನಿ ಷೇರಿನ ಮೇಲೆ ಹೂಡಿಕೆ ಹೇಗೆ? ನೀವು ಕಂಪನಿಯೊಂದರ ಷೇರಿನ ಮೇಲೆ ಹೂಡಿಕೆ ಮಾಡಬೇಕೋ, ಬೇಡವೋ ಎಂದು ತೀರ್ಮಾನ ಮಾಡಬೇಕಾದರೆ ಆ ಕಂಪನಿಯ ವಾರ್ಷಿಕ ವರದಿಯನ್ನು ನೋಡಬೇಕಾಗುತ್ತದೆ. ನಿರ್ದಿಷ್ಟ ವರ್ಷದಲ್ಲಿ ಕಂಪನಿಯ ಕಾರ್ಯಕ್ಷಮತೆ, ಭವಿಷ್ಯದ ಯೋಜನೆಗಳು ಮತ್ತು ಹಣಕಾಸಿನ ಸ್ಥಿತಿಗತಿಯ ವಿವರ ಸೇರಿ ಸಮಗ್ರ ಮಾಹಿತಿಯು ಆ ದಾಖಲೆಯಲ್ಲಿ ಅಡಕವಾಗಿರು- ಇದೆ. ಷೇರು ಮಾರುಕಟ್ಟೆಗೆ ಸೇರ್ಪಡೆಗೊಂಡಿರುವ ಪ್ರತಿ ಕಂಪನಿಯೂ ಕಡ್ಡಾಯವಾಗಿ 200ರಿಂದ 300 ಪುಟಗಳಷ್ಟು ವಿವರವಾದ ವಾರ್ಷಿಕ ವರದಿ ಪ್ರಕಟಿಸಬೇಕಾಗುತ್ತದೆ. ಆದರೆ, ಅಂಕಿ-ಸಂಖ್ಯೆ ಮತ್ತು ಚಾರ್ಟ್‌ಗಳನ್ನು ಒಳಗೊಂಡಿರುವ … Read more

ಸಿಪಿಎಂ ಸಮ್ಮೇಳನ ಯಶಸ್ವಿಗೊಳಿಸಲು ಮನವಿ

ಸಿಪಿಎಂ

ಸಿಪಿಎಂ ಸಮ್ಮೇಳನ ಯಶಸ್ವಿಗೊಳಿಸಲು ಮನವಿ ಚೇಳೂರು: ತುಮಕೂರಿನಲ್ಲಿ ಭಾನುವಾರದಿಂದ ಆರಂಭವಾಗಲಿರುವ ಸಿಪಿಎಂ 24ನೇ ರಾಜ್ಯ ಸಮ್ಮೇಳನದ ರ್ಯಾಲಿ ಬಹಿರಂಗ ಸಭೆಯ ಪೋಸ್ಟರ್ ಅನ್ನು ತಾಲೂಕು ಸಿಪಿಎಂ ಕಾರ್ಯದರ್ಶಿ ಗೌನೋರುಪಲ್ಲಿ ಬಯ್ಯಾರೆಡ್ಡಿ ಬಿಡುಗಡೆ ಮಾಡಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಮೂರು ದಿನ ಸಮ್ಮೇಳನ ನಡೆಯಲಿದೆ. ಚೇಳೂರು ಭಾಗದಲ್ಲಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೆ ರೈತಾಪಿ ಜನರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಜತೆಗೆ ಕೈಗಾರಿಕೆಗಳೂ ಇಲ್ಲ. ಕೂಲಿ ಮಾಡಿದರಷ್ಟೇ ಜೀವನ. ಹಾಗಾಗಿ ಈ ಭಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸಬೇಕು … Read more

ದುಡುಕಿನ ನಿರ್ಧಾರ ಕೆಡುಕಿಗೆ ಮಹಾದ್ವಾರ

ದುಡುಕಿನ ನಿರ್ಧಾರ

ದುಡುಕಿನ ನಿರ್ಧಾರ ಕೆಡುಕಿಗೆ ಮಹಾದ್ವಾರ ವಿವೇಚನೆ ಇಲ್ಲದೇ ದುಡುಕಿನಲ್ಲಿ ಕೈಗೊಂಡ ನಿರ್ಧಾರ ಜೀವನ ಪರ್ಯಂತ ಕೊರಗುವಂತೆ ಮಾಡುತ್ತದೆ ಏಕಲವ್ಯನು ತನ್ನಷ್ಟಕ್ಕೆ ತಾನೇ ಕಲಿತರೂ ಗುರುವಿನ ಮಾತಿಗೆ ಕಟ್ಟುಬಿದ್ದು ಬೆರಳನ್ನು ಕಟ್ ಈ ಮಾಡಿಕೊಳ್ಳಬೇಕಾಯಿತು. ಇತ್ತೀಚೆಗೆ ಮತ್ತೊಬ್ಬ ಕಂಪ್ಯೂಟರನ್ನು ಕಲಿಯದೇ ಕರದ ಬೆರಳುಗಳನ್ನು ಕಳೆದುಕೊಳ್ಳಬೇಕಾಯಿತು. ಅವನು ಕಲಿತು ಕೆಟ್ಟ ಇವನು ಕಲಿಯಲಾಗದೇ ಕೈಕೊಟ್ಟ ! ಅರ್ಜುನನ್ನು ವಿಶ್ವದ ಏಕಮೇವ ಶ್ರೇಷ್ಠ ಧನುರ್ದಾರಿಯನ್ನಾಗಿ ಮಾಡುವ ಮಹದಾಸೆ ಗುರು ದ್ರೋಣಾಚಾರ್ಯರದು. ತಮ್ಮ ಆಕಾಂಕ್ಷೆಗೆ ಏಕಲವ್ಯನು ಎಲ್ಲಿ ಅಡ್ಡಿಯಾಗಿಬಿಡುತ್ತಾನೋ ಎನ್ನುವ ಆತಂಕ ಅವರನ್ನು … Read more