ಎಎಐಗೆ ಸುರೇಶ್ ಅಧ್ಯಕ್ಷ
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಿ (ಎಎಐ) ಹಂಗಾಮಿ ಅಧ್ಯಕ್ಷರಾಗಿ ಎಂ. ಸುರೇಶ್ ಅವರನ್ನು ನೇಮಿಸಲಾಗಿದೆ. ತಮಿಳುನಾಡಿನ ತೆಂಕಶಿ ಜಿಲ್ಲೆ ಯವರಾದ ಎಂ. ಸುರೇಶ್, ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣಗಳ ಪ್ರಾತಿಕಾರದಲ್ಲಿ ಏರ್ ನ್ಯಾವಿಗೇಶನ್ ಸೇವಗಳ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶಾದ್ಯಂತ ಏರ್ ಟ್ರಾಫಿಕ್ ನಿರ್ವಹಣೆ ಮತ್ತು ನ್ಯಾವಿಗೇಶನ್ ಸಿಸ್ಟಮ್ ಗೆ ಸಂಬಂಧಿಸಿದಂತೆ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ಪವರ್ ರಿಯಾಕ್ಟರ್ ಕಾರ್ಯಾರಂಭ. ದೇಶದ ಎರಡನೇ ಸ್ವದೇಶಿ ನಿರ್ಮಿತ 700 ಮೆಗಾವ್ಯಾಟ್ ಸಾಮರ್ಥ್ಯದ ನ್ಯೂಕ್ಲಿಯರ್ ಪವರ್ ರಿಯಾಕ್ಟರ್ ಗುಜರಾತ್ ನ ಕಕ್ರಪಾರ್ ಅಣು ವಿದ್ಯುತ್ ಸ್ಥಾವರದಲ್ಲಿ ಯಶಸ್ವಿಯಾಗಿ ಕಾರ್ಯ ಆರಂಭ ಮಾಡಿದ್ದು ವಿದ್ಯುತ್ ಉತ್ಪಾದನೆ ಪ್ರಾರಂಭಿಸಿದೆ.
ನೂತನ ರಿಯಾಕ್ಟರ್ 4ನೀ ಘಟಕ 700 ಮೆಗಾ ವ್ಯಾಟ್ ಪೂರ್ಣ ಸಾಮರ್ಥ್ಯ ತಲುಪುವುದಕ್ಕೂ ಮೊದಲು ಶೇ . 90ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದಾಗಿ ಭಾರತೀಯ ಅಣು ಶಕ್ತಿ ನಿಗಮ (ಎನ್ಪಿಸಿಐಎಲ್ ) ತಿಳಿಸಿದೆ. ಭಾರತ 231-32ರ ವೇಳೆಗೆ ಇದೆ ಮಾದರಿಯ 14, 700 ಮೇಗಾ ವ್ಯಾಟ್ ಪರಮಾಣು ಶಕ್ತಿ ರಿಯಾಕ್ಟರ್ ಗಳ ಸ್ಥಾಪನೆ ಗುರಿ ಹೊಂದಿದೆ. ದೇಶದಲ್ಲಿ ಸಾಧ್ಯ ಎನ್ಪಿಸಿಐಎಲ್ ನ 24 ರಿಯಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಥಾಯ್ಲೆಂಡ್ ನಲ್ಲಿ ಎಂಪಾಕ್ಸ್ ಸೋಂಕು. ಥಾಯ್ಲೆಂಡ್ ನಲ್ಲಿ ನೂತನ ತಳಿಯ ಮೊದಲು ಎಂಪಾಕ್ಸ್ ಸೋಂಕು ಪ್ರಕರಣ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಆಫ್ರಿಕಾ ಖಂಡದ ಕಾಂಗೋದಲ್ಲಿ ಕಳೆದ ವರ್ಷ ಜನವರಿಯಿಂದ ಈಚೆಗೆ 27,000ಕ್ಕೂ ಅಧಿಕ ಎಂಪಾಕ್ಸ್ ಪ್ರಕರಣ ದಾಖಲಾಗಿವೆ. ನೂರಾರು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಇಂತಹ ಶೋಚನೆಯ ಪರಿಸ್ಥಿತಿಯಲ್ಲಿಯೂ
ಇತ್ತೀಚಿನ ತಿಂಗಳಲ್ಲಿ ಆಫ್ರಿಕಾದಿಂದ ಹೊರಗೆ ಮೊದಲ ಬಾರಿಗೆ ಸ್ವೀಡನ್ ನಲ್ಲಿ ಎಂಪಾಕ್ಸ್ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇದೀಗ ಥಾಯ್ಲೆಂಡ್ ನಲ್ಲೂ ಕಂಡು ಬಂದಿದೆ. ಕಳೆದ ವಾರ ಆಫ್ರಿಕದ ರಾಷ್ಟವೊಂದರಿಂದ ಥಾಯ್ಲೆಂಡ್ ಗೆ ಆಗಮಿಸಿ 66 ವರ್ಷದ ಪ್ರಯಾಣಿಕರು ಒಬ್ಬರನ್ನು ಪರೀಕ್ಷೆಗೆ ಒಳಪಡಿಸಿದಾಗ ನೂತನ ತಲಳಿಯ ಕ್ಲೇಡ್ 1ಬಿ ತಳಿಯ ಎಂಪಾಕ್ಸ್ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ.